ಚಲಿಸುತ್ತಿದ್ದ ವಾಹನಗಳ ಮೇಲೆ ಕಾಂಕ್ರೀಟ್ ಅವಶೇಷ.
ಮಹಾರಾಷ್ಟ್ರ : ಮುಂಬೈನಲ್ಲಿ ಇಂದು ಭೀಕರ ಅವಘಡವೊಂದು ಸಂಭವಿಸಿದೆ. ಮುಲುಂಡ್ ವೆಸ್ಟ್‌ನ ಎಲ್‌ಬಿಎಸ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಲೈನ್ 4ರ ಪಿಲ್ಲರ್‌ನ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ಹಠಾತ್ತನೆ ಕೆಳಗೆ ಚಲಿಸುತ್ತಿದ್ದ ವಾಹನಗಳ ಮೇಲೆ ಬಿದ್ದಿದೆ. ಜಾನ್ಸನ್ ಆಂಡ್ ಜಾನ್ಸನ್ ಕಚೇರಿಯ ಸಮೀಪವಿರುವ ಓಬೆರಾಯ್ ಪ್ರೆಮಿಸಸ್ ಬಳಿ ಈ ಘಟನೆ ನಡೆದಿದೆ. ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ವೇಳೆ ಭಾರೀ ಗಾತ್ರದ ಸ್ಲ್ಯಾಬ್ ರಸ್ತೆಗೆ ಬಿದ್ದಿದೆ.
ಈ ವೇಳೆ ಕೆಳಗೆ ಸಂಚರಿಸುತ್ತಿದ್ದ ಆಟೋ ರಿಕ್ಷಾ ಮತ್ತು ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಆಟೋ ಚಾಲಕ ಮತ್ತು ಓರ್ವ ಮಹಿಳೆ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ಅವರನ್ನು ಹರಸಾಹಸ ಪಟ್ಟು ಹೊರತೆಗೆದಿದ್ದಾರೆ. ಈ ಘಟನೆಯಲ್ಲಿ ಸುಮಾರು 3 ರಿಂದ 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
For More Updates Join our WhatsApp Group :




