ಯಶ್ ತಾಯಿ ಪುಷ್ಪಾಗೆ ಮೊದಲ ಹಂತದ ಜಯ.
ಹಾಸನ: ಯಶ್ ತಾಯಿ ಪುಷ್ಪಾ ಅವರು ಹಾಸನದಲ್ಲಿ ಸೈಟ್ ಒಂದನ್ನು ಖರೀದಿ ಮಾಡಿದ್ದರು. ಇದು ವಿವಾದಕ್ಕೆ ಸಿಲುಕಿತ್ತು. ಲಕ್ಷ್ಮಮ್ಮ ಅನ್ನೋರು ಸೈಟ್ ತಮ್ಮದು ಎಂದು ಹೇಳುತ್ತಿದ್ದಾರೆ. ಈ ವಿಷಯದಲ್ಲಿ ಪುಷ್ಪಾ ಕೋರ್ಟ್ಗೆ ಹೋಗಿದ್ದರು. ಕೋರ್ಟ್ ಅಲ್ಲಿ ಯಶ್ ತಾಯಿಗೆ ಮೊದಲ ಹಂತದ ಗೆಲುವು ಸಿಕ್ಕಿದೆ. ಮೂಲ ದಾವೆಯ ಆದೇಶ ಅನುಷ್ಠಾನಕ್ಕೆ ಕೋರ್ಟ್ ತಡೆ ನೀಡಿದೆ.
ಲಕ್ಷ್ಮಮ್ಮ ಪರವಾಗಿ ಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಪುಷ್ಪಾ ಅವರು, ‘ತಮ್ಮನ್ನ ಕಕ್ಷಿದಾರರಾಗಿ ಪರಿಗಣಿಸದೆ ಆದೇಶ ಮಾಡಲಾಗಿದೆ’ ಎಂದು ಕೇಸ್ ದಾಖಲು ಮಾಡಿದ್ದರು. ಈಗ ದಾಖಲಾಗಿರೊ ದಾವೆ ಇತ್ಯರ್ಥ ಆಗೋವರೆಗೂ ವಿವಾದಿತ ಪ್ರಾಪರ್ಟಿಯನ್ನ ಪರವಾರೆ ಅಥವಾ ಮೂಲ ಸ್ವರೂಪ ಬದಲಾವಣೆ ಮಾಡದಂತೆ ಅರ್ಜಿದಾರರಿಗೂ ನಿರ್ಬಂಧ ಹೇರಲಾಗಿದೆ.
For More Updates Join our WhatsApp Group :




