ಭಾರತದಲ್ಲಿ ಆಂಥ್ರೋಪಿಕ್: ಬೆಂಗಳೂರಿನಲ್ಲಿ ಮೊದಲ AI ಕಚೇರಿ.

ಭಾರತದಲ್ಲಿ ಆಂಥ್ರೋಪಿಕ್: ಬೆಂಗಳೂರಿನಲ್ಲಿ ಮೊದಲ AI ಕಚೇರಿ.

ಅಮೆರಿಕನ್ ಎಐ ಕಂಪನಿ ಭಾರತೀಯ ಮಾರುಕಟ್ಟೆಗೆ ದೊಡ್ಡ ನೆಟ್‌ವರ್ಕ್ ನಿರ್ಮಿಸುತ್ತಿದೆ.

ಬೆಂಗಳೂರು : ಎಐ ಸೇವೆಗಳನ್ನು ನೀಡುವ ಆಂಥ್ರೋಪಿಕ್ ಸಂಸ್ಥೆ ಬೆಂಗಳೂರಿನಲ್ಲಿ ಹೊಸ ಕಚೇರಿ ತೆರೆದಿದೆ. ಇದು ಭಾರತದಲ್ಲಿ ಆಂಥ್ರೋಪಿಕ್​ನ ಮೊದಲ ಕಚೇರಿಯಾಗಿದೆ. ಏಷ್ಯಾದಲ್ಲಿ ಅದರ ಎರಡನೇ ಕಚೇರಿಯಾಗಿದೆ. ಭಾರತದ ಅಗಾಧ ಮಾರುಕಟ್ಟೆ, ವಿಫುಲ ಅವಕಾಶಗಳಿರುವ ಹಿನ್ನೆಲೆಯಲ್ಲಿ ಈ ಅಮೆರಿಕನ್ ಎಐ ಕಂಪನಿ ಬೆಂಗಳೂರಿನಲ್ಲಿ ಕಚೇರಿ ತೆರೆದಿದೆ.

ಆಂಥ್ರೋಪಿಕ್​ನ ಸೂಪರ್ ಹಿಟ್ ಎಐ ಉತ್ಪನ್ನಗಳಲ್ಲಿ ಕ್ಲಾಡ್ ಎಐ ಒಂದು. ಇದು ಜನರೇಟಿವ್ ಎಐ ಮಾಡಲ್ ಆದರೂ ಕೋಡಿಂಗ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದಕ್ಕೆ ಖ್ಯಾತಿ ಪಡೆದಿದೆ. ಅದರ ಕ್ಲಾಡ್ ಎಐ ಸರ್ವಿಸ್​ಗೆ ಭಾರತವೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿದೆ. ಆ್ಯಪ್​ಗಳನ್ನು ತಯಾರಿಸುವುದು, ಸಿಸ್ಟಂಗಳ ಆಧುನೀಕರಣ, ಪ್ರೊಡಕ್ಷನ್ ಸಾಫ್ಟ್​ವೇರ್ ಸಾಗಣೆ ಇತ್ಯಾದಿಗೆ ಕ್ಲಾಡ್ ಎಐ ಬಳಕೆ ಭಾರತದಲ್ಲಿ ಹೆಚ್ಚಿದೆ. ಹೀಗಾಗಿ, ಭಾರತದ ಮಾರುಕಟ್ಟೆಯ ಮೇಲೆ ಆಂಥ್ರೋಪಿಕ್ ಹೆಚ್ಚಿನ ಕಣ್ಣು ನೆಡಲು ನಿರ್ಧರಿಸಿದೆ.

 ‘ಬೆಂಗಳೂರು ಕಚೇರಿಯನ್ನು ಇವತ್ತು ಅಧಿಕೃತವಾಗಿ ತೆರೆದಿದ್ದೇವೆ. ಉದ್ದಿಮೆ, ಶಿಕ್ಷಣ ಮತ್ತು ಕೃಷಿ ಸೆಕ್ಟರ್​ಗಳಲ್ಲಿ ಜೊತೆಗಾರಿಕೆಗಳನ್ನು ಹೊಂದಿದ್ದೇವೆ. ಭಾರತದ ಎಲ್ಲಾ ಸೆಕ್ಟರ್​ಗಳಲ್ಲೂ ಎಐ ಸೇವೆ ಮಾಡಲು ಬದ್ಧರಾಗಿದ್ದೇವೆ. ಹೆಚ್ಚು ಜನರು ಮತ್ತು ಉದ್ದಿಮೆಗಳಿಗೆ ಎಐ ಲಾಭಗಳನ್ನು ಕೊಡಲು ಭಾರತ ಒಳ್ಳೆಯ ಅವಕಾಶ ಕೊಡುತ್ತದೆ. ಭಾರತದಲ್ಲಿ ಅಸಾಧಾರಣ ತಾಂತ್ರಿಕ ಪ್ರತಿಭೆ, ಅಗಾಧ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಇದೆ. ತಂತ್ರಜ್ಞಾನ ಮೂಲಕ ಜನರ ಜೀವನ ಸುಧಾರಿಸುವ ಕಾರ್ಯದಲ್ಲಿ ಯಶಸ್ಸು ಹೊಂದಿದೆ. ಈ ಎಐ ತಂತ್ರಜ್ಞಾನವು ಜನರಿಗೆ ಅನುಕೂಲವಾಗುವಂತಾಗಲು ಇಂತಹ ವಾತಾವರಣವೇ ಬೇಕಿರುವುದು’ ಎಂದು ಆಂಥ್ರೋಪಿಕ್​ನ ಭಾರತ ವಿಭಾಗದ ಎಂಡಿ ಇರಿನಾ ಘೋಸ್ ಹೇಳುತ್ತಾರೆ.

ಭಾರತದಲ್ಲಿ ಕನ್ನಡ, ಹಿಂದಿ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಎಐ ಮಾಡಲ್ ಅಭಿವೃದ್ಧಿಪಡಿಸುವ ಕಡೆಗೂ ಆಂಥ್ರೋಪಿಕ್ ಗಮನ ಹರಿಸುತ್ತಿದ್ದು, ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳೊಂದಿಗೆ ಸಹಭಾಗಿತ್ವ ಸಾಧಿಸಿದೆ. ಈಗಿರುವ ಎಐ ಮಾಡಲ್​ಗಳು ಇಂಗ್ಲೀಷ್​ನಲ್ಲಿ ಉತ್ತಮ ಸೇವೆ ಒದಗಿಸುತ್ತವೆ. ಆದರೆ, ಹಿಂದಿ, ಬಂಗಾಳ, ಮರಾಠಿ, ಕನ್ನಡ, ತೆಲುಗು, ತಮಿಳುನ, ಪಂಜಾಬಿ, ಗುಜರಾತಿ, ಮಲಯಾಳಂ, ಉರ್ದು ಭಾಷೆಗಳಲ್ಲಿ ಸಾಕಷ್ಟು ಟ್ರೈನಿಂಗ್ ಮಾಡಿ, ಈ ಅಂತರವನ್ನು ಕಡಿಮೆ ಮಾಡಲು ಆರು ತಿಂಗಳ ಹಿಂದೆಯೇ ಆಂಥ್ರೋಪಿಕ್ ಪ್ರಯತ್ನ ಆರಂಭಿಸಿತ್ತು. ಇದು ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಎಂದು ಈ ಸಂಸ್ಥೆ ಹೇಳಿಕೊಂಡಿದೆ.

ಆಂಥ್ರೋಪಿಕ್ ಕಂಪನಿ ಇತ್ತೀಚೆಗಷ್ಟೇ 30 ಬಿಲಿಯನ್ ಡಾಲರ್​ನಷ್ಟು ಫಂಡಿಂಗ್ ಪಡೆದಿದೆ. ಇದರ ಮೌಲ್ಯ ಇದೀಗ 380 ಬಿಲಿಯನ್ ಡಾಲರ್ ಎಂದು ಮೌಲ್ಯೀಕರಿಸಲಾಗಿದೆ. ಬಹಳಷ್ಟು ಐಟಿ ಸರ್ವಿಸ್ ಕೆಲಸಗಳನ್ನು ಇದರ ಎಐ ಏಜೆಂಟ್​ಗಳು ತ್ವರಿತವಾಗಿ ಮಾಡಬಲ್ಲುವುದು. ಹೀಗಾಗಿ, ಐಟಿ ಸರ್ವಿಸ್ ಕ್ಷೇತ್ರದಲ್ಲಿ ಆಂಥ್ರೋಪಿಕ್ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *