ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಕಣ್ಣಿಗೆ ಗಾಯ.
ವಿಜಯನಗರ: ನಟಿ ರಚಿತಾ ರಾಮ್ ಅವರ ಕಾರು ಚಾಲಕ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಮೇಲೆ ಹಲ್ಲೆ ನಡೆಸಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ನಡೆದಿದೆ. ಹಂಪಿ ಉತ್ಸವದ ಕೊನೆಯ ದಿನವಾದ ನಿನ್ನೆ (ಫೆಬ್ರವರಿ 15) ಭದ್ರತಾ ನೆಪದಲ್ಲಿ ರಚಿತಾ ರಾಮ್ ಕಾರು ಚಾಲಕ, ಜನರನ್ನು ದೂರ ಸರಿಸುತ್ತಿದ್ದು, ಇದೇ ವೇಳೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಅವರನ್ನು ಮೊಣಕೈನಿಂದ ಜೋರಾಗಿ ತಿವಿದು ತಳ್ಳಿದ್ದಾರೆ.
ಇದರಿಂದ ಅಧಿಕಾರಿ ರವಿಕುಮಾರ್ ಕಣ್ಣಿಗೆ ಗಾಯವಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
For More Updates Join our WhatsApp Group :




