ಪರಾಜಿತ ಬಿಜೆಪಿ ಅಭ್ಯರ್ಥಿ ಸಿ. ಮುನಿರಾಜು ಸಂತೋಷ: “ನ್ಯಾಯ ಸಿಕ್ಕಿದೆ”.
ಬೆಂಗಳೂರು: ಬಾಗೇಪಲ್ಲಿ ಶಾಸಕ ಸ್ಥಾನದಿಂದ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ತೀರ್ಪಿನಿಂದ ನನಗೆ ಖುಷಿಯಿದೆ, ನ್ಯಾಯ ಸಿಕ್ಕಿದೆ. ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಸಾವಿರಾರು ಕೋಟಿ ರೂ ಹಗರಣವಿದೆ. ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರಿಂದ ತೀರ್ಪು ಬಂದಿದೆ. ಈ ತೀರ್ಪಿನಿಂದ ನ್ಯಾಯಾಲಯದ ಮೇಲೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ ಎಂದು ದೂರುದಾರ, ಪರಾಜಿತ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಹೇಳಿದ್ದಾರೆ.
ಎಸ್.ಎನ್. ಸುಬ್ಬಾರೆಡ್ಡಿ ವಿರುದ್ಧ ಸಿ. ಮುನಿರಾಜು ವಾಗ್ದಾಳಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು, ತಪ್ಪು ಮಾಹಿತಿ ಕೊಟ್ಟು ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ವಂಚನೆ ಮಾಡಿದ್ದನ್ನು ಅರ್ಜಿ ಸಲ್ಲಿಸಿದ್ದೆವು. ಜನರಿಗೆ ಮೋಸ ಮತ್ತು ಸರ್ಕಾರಕ್ಕೆ ವಂಚನೆ ಮಾಡಿರುವುದರಿಂದ ಅವರು ಇಂದು ವಜಾ ಆಗಿದ್ದಾರೆ ಎಂದು ಹೇಳಿದರು.
2023ರ ಅಫಿಡವಿಟ್ನಲ್ಲಿ ಹಿಂದಿನ ಅಫಿಡವಿಟ್ ಅನ್ನೇ ಹಾಗೆ ತಂದು ಹಾಕಿದ್ದರು. 9 ಜಿಎಸ್ಟಿ ಇದ್ದರೂ ಒಂದೇ ಜಿಎಸ್ಟಿ ತೋರಿಸಿದ್ದಾರೆ. ಆ ಮೂಲಕ ಜಿಎಸ್ಟಿ ಕಟ್ಟದೇ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ವಾಸದ ಮನೆ, ಕಮರ್ಷಿಯಲ್ ಕಟ್ಟಡ, ಬಾರ್ಗಳ ತೆರಿಗೆಯನ್ನು ನಾಲ್ಕೈದು ವರ್ಷಗಳಿಂದ ಬಿಬಿಎಂಪಿಗೆ ಕಟ್ಟಿರಲಿಲ್ಲ. ಹಿಂದೊಮ್ಮೆ 100 ಕೋಟಿ ರೂ ಜಿಎಸ್ಟಿ ಇದ್ದರೂ ಅದನ್ನು 25 ಕೋಟಿಗೆ ಆದೇಶ ಮಾಡಿಸಿಕೊಂಡು ಬೋಗಸ್ ಮಾಡಿಸಿಕೊಂಡಿದ್ದರಂತೆ. ಅವರ ಆಸ್ತಿಗಳನ್ನು ಮುಚ್ಚಿಟ್ಟಿದ್ದರು ಎಂದಿದ್ದಾರೆ.
ನಾನು ಅರ್ಜಿ ಹಾಕಿದ ಮೇಲೆ ಸರ್ಕಾರಕ್ಕೆ ಜಿಎಸ್ಟಿ ತೆರಿಗೆ ಕಟ್ಟಿದ್ದಾರೆ
ಪುತ್ರಿಯ ಹೆಸರಿನಲ್ಲಿರುವ ಜಮೀನು ವಿವರ ತೋರಿಸಿರಲಿಲ್ಲ. ಪತ್ನಿಯ ಹೆಸರಿನಲ್ಲಿ ಜಮೀನು ಮತ್ತು ಕಂಪನಿ ಇದ್ದರೂ ತೋರಿಸಿರಲಿಲ್ಲ. ಕುಣಿಗಲ್ ಶಾಸಕ ಡಾ. ರಂಗನಾಥ್ ಅವರಿಗೆ 23 ಲಕ್ಷ ರೂ. ದುಡ್ಡು ಕೊಟ್ಟಿದ್ದು ತೋರಿಸಿರಲಿಲ್ಲ. ವೈ.ಎ. ನಾರಾಯಣಸ್ವಾಮಿ ಅವರಿಗೂ 28 ಲಕ್ಷ ರೂ ದುಡ್ಡು ಕೊಟ್ಟಿದ್ದು ತೋರಿಸಿಕೊಂಡಿಲ್ಲ. ನಾನು ಅರ್ಜಿ ಹಾಕಿದ ಮೇಲೆ ಸರ್ಕಾರಕ್ಕೆ ಜಿಎಸ್ಟಿ ತೆರಿಗೆ ಕಟ್ಟಿದ್ದಾರೆ. ಸಣ್ಣಪುಟ್ಟ ತಪ್ಪಾಗಿದೆ ಎಂದು ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ ಎಂದರು.
For More Updates Join our WhatsApp Group :




