ಲಕ್ಕುಂಡಿ: ಐತಿಹಾಸಿಕ ದೇವಾಲಯಕ್ಕೆ ಪ್ರವಾಸಿಗರ ಪಾತ್ರ.

ಲಕ್ಕುಂಡಿ: ಐತಿಹಾಸಿಕ ದೇವಾಲಯಕ್ಕೆ ಪ್ರವಾಸಿಗರ ಪಾತ್ರ.

ಮಾಣಿಕ್ಯೇಶ್ವರ ದೇವಾಲಯದ ಶಿಲ್ಪಕಲೆ ಮೆಚ್ಚುಗೆಗೆ ಪಾತ್ರ.

ಗದಗ : ಸೂಕ್ಷ್ಮ ಕೆತ್ತನೆಯ ಸುಂದರ ಶಿಲ್ಪಕಲೆ ಹೊಂದಿರುವ ಮಾಣಿಕ್ಯೇಶ್ವರ ದೇವಸ್ಥಾನ. ಕಲ್ಯಾಣ ಚಾಲುಕ್ಯ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ವಿಹಂಗನೋಟ. ಮುಸುಕಿನ ಬಾವಿಯಲ್ಲಿ 12 ಶಿವಲಿಂಗ ಸ್ಥಾಪನೆಯ ಪುಟ್ಟ ಪುಟ್ಟ ದೇವಸ್ಥಾನಗಳ ಸಂಕೀರ್ಣ. ದೇವಸ್ಥಾನದ ಶಿಲ್ಪಕಲೆ ಹಾಗೂ ಬಾವಿನ ಅದ್ಭುತ ಶೈಲಿ ಸಾರಿ ಸಾರಿ ಹೇಳುತ್ತಿವೆ ಗದಗ ಜಿಲ್ಲೆಯ ಲಕ್ಕುಂಡಿ ಗತವೈಭವ. ಲಕ್ಕುಂಡಿ ಎಂದರೆ ಅದು ಐತಿಹಾಸಿಕ ದೇವಾಲಯಗಳ ಸ್ವರ್ಗ. ಶಿಲ್ಪಕಲೆಗಳ ಬೀಡು. ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾದ ಬೆನ್ನಲ್ಲೇ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಂದು ಕಾಲದಲ್ಲಿ ಕಲ್ಯಾಣ ಚಾಲುಕ್ಯರ ವೈಭವದ ಕೇಂದ್ರವಾಗಿದ್ದ ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳು ಹಾಗೂ ಪುರಾತನ ಬಾವಿಗಳು ಗತ ವೈಭವವನ್ನು ಇಂದಿಗೂ ಜೀವಂತವಾಗಿ ಹೇಳುತ್ತಿವೆ. ಲಕ್ಕುಂಡಿ ಗ್ರಾಮದ ಪ್ರಮುಖ ಆಕರ್ಷಣೆಯಾಗಿ ಮಾಣಿಕ್ಯೇಶ್ವರ ದೇವಾಲಯ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಕಲ್ಯಾಣ ಚಾಲುಕ್ಯರು ನಿರ್ಮಾಣ ಮಾಡಿದ ಈ ಅಮೋಘ, ಅದ್ಭುತ, ಸುಂದರ ಕೆತ್ತನೆಯ ದೇವಾಲಯವು ತ್ರಿಕೂಟಾಚಲ ಶೈಲಿಯಲ್ಲಿ ನಿರ್ಮಿತವಾಗಿದ್ದು, ಅದ್ಭುತ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಸಾಲಿಗ್ರಾಮ ಶಿಲೆಯಿಂದ ಕೆತ್ತನೆ ಮಾಡಲಾದ ಅಪರೂಪದ ಶಿವಲಿಂಗವು ದೇವಾಲಯದ ವಿಶೇಷತೆಯಾಗಿದೆ. ದೇವಾಲಯದ ಗೋಡೆಗಳ ಮೇಲೆ ಕಂಡುಬರುವ ಸೂಕ್ಷ್ಮ ಕೆತ್ತನೆಗಳು ಮತ್ತು ಶಿಲ್ಪಕಲೆಗಳು ಆ ಕಾಲದ ಶಿಲ್ಪಿಗಳ ಕೈಚಾಣಾಕ್ಷತೆಯನ್ನು ಸಾರುತ್ತವೆ. ದೇವಾಲಯದ ಮುಂಭಾಗದಲ್ಲಿರುವ ಮುಸುಕಿನ ಬಾವಿಯೂ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿದೆ. ಎರಡು ಅಂತಸ್ತಿನಂತೆ ಕಾಣುವ ಕಂಬಗಳು, ಶಿಲ್ಪಕಲೆಯಿಂದ ಕೆತ್ತನೆ ಮಾಡಲಾದ ವಿನ್ಯಾಸಗಳು ನೋಡುಗರನ್ನು ಅಚ್ಚರಿಗೊಳಿಸುತ್ತವೆ. ಮಾಣಿಕ್ಯೇಶ್ವರ ದೇವಸ್ಥಾನದ ಮುಂದಿನ ಎರಡು ಅಂತಸ್ತಿನ ಮುಸುಕಿನ ಬಾವಿಯ ವಿಹಂಗನೋಟ ಸಾಕಷ್ಟು ಆಕರ್ಷಣೆಯಾಗಿದೆ. 12 ಜ್ಯೋತಿರ್ಲಿಂಗ ಗೋಪುರಗಳು, ಬಾವಿಯೊಳಗೆ ಮೆಟ್ಟಿಲುಗಳು, ಶಿಲ್ಪಕಲೆ ಅಬ್ಬಾ ಅದ್ಭುತ. ಅಷ್ಟೊಂದು ಅಮೋಘವಾಗಿ ನಿರ್ಮಾಣ ಮಾಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *