‘Rajnivas’ ಟ್ರೇಲರ್ ರಿಲೀಸ್: ‘‘Kantara’ಝಲಕ್?

‘Rajnivas’ ಟ್ರೇಲರ್ ರಿಲೀಸ್: ‘Kantara’ಝಲಕ್?

ತುಳುನಾಡಿನ ಹಿನ್ನಲೆ, ಮಾಸ್ ಆ್ಯಕ್ಷನ್ – ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ

ಶೀರ್ಷಿಕೆಯಿಂದ ಗಮನ ಸೆಳೆದಿರುವ ರಾಜನಿವಾಸಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಟ್ರೇಲರ್ ನೋಡಿದರೆ ‘ಕಾಂತಾರ’ ಸಿನಿಮಾದ ಝಲಕ್ ಕಾಣಿಸಿದೆ. ಚಿತ್ರತಂಡ ಹೇಳುವ ಪ್ರಕಾರ, ಇದು ಕಾಂತಾರಕ್ಕಿಂತಲೂ‌ ಮೊದಲೇ ತಯಾರಾದ ಕಥೆ. ಆದರೆ ಸಿನಿಮಾ ಪೂರ್ಣಗೊಂಡು ರಿಲೀಸ್ ಹಂತಕ್ಕೆ ಬರಲು ಇಷ್ಟು ಸಮಯ ಹಿಡಿಯಿತು. ಕಾಂತಾರಸಿನಿಮಾ ಮೊದಲೇ ತೆರೆಕಂಡಿದ್ದರಿಂದ ಹೋಲಿಕೆಯ ಆರೋಪ ಎದುರಾಗುವುದು ಸಹಜ. ಹಾಗಾಗಿ ಸಾಕಷ್ಟು ಬದಲಾವಣೆಯನ್ನು ಕೂಡ ಮಾಡಲಾಗಿದೆ ಎಂದು ‘ರಾಜನಿವಾಸ’ ಚಿತ್ರತಂಡ ತಿಳಿಸಿದೆ.

ಇದು ತುಳುನಾಡು ಭಾಗದ ಕಥೆಯಾದ ಕಾರಣ ಸಹಜವಾಗಿ ಒಂದಷ್ಟು ಹೋಲಿಕೆಗಳು ಕಾಣುತ್ತವೆ. ಆದರೆ ಸಿನಿಮಾದಲ್ಲಿ ಬೇರೆಯೇ ಕಥೆ ಇದೆ ಎಂದು ನಿರ್ದೇಶಕ ಮಿಥುನ್ ಸುವರ್ಣ ಅವರು ಹೇಳಿದ್ದಾರೆ. ರಾಘವ್ ನಾಯಕ್ ಅವರು ‘ರಾಜ‌ನಿವಾಸ’ ಸಿನಿಮಾದಲ್ಲಿ ನಾಯಕ ಪಾತ್ರ ಮಾಡಿದ್ದಾರೆ. ಟ್ರೇಲರ್ ಜೊತೆ ಹಾಡು ಹಾಗೂ ಆ್ಯಕ್ಷನ್ ಸನ್ನಿವೇಶದ ಗ್ಲಿಂಪ್ಸ್ ನೋಡಿದರೆ ಇದು ಮಾಸ್ ಸಿನಿಮಾ ಎಂಬುದು ತಿಳಿಯುತ್ತದೆ.

‘ರಾಜ‌ನಿವಾಸ’ ಸಿನಿಮಾದಲ್ಲಿ ಕೃತಿಕಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಖ್ಯಾತ ನಟ ಶ್ರೀನಗರ ಕಿಟ್ಟಿ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡಿದೆ. ಟ್ರೇಲರ್ ಹಾಗೂ 3 ಹಾಡುಗಳು ಈಗಾಗಲೇ ಗಮನ ಸೆಳೆದಿದೆ. ನಾಲ್ಕು ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.

 ‘ಡಿಎಎಂ 36 ಸ್ಟುಡೀಯೋಸ್’ ಮೂಲಕ ‘ರಾಜ‌ನಿವಾಸ’ ಸಿನಿಮಾವನ್ನು ಮಾಡಲಾಗಿದೆ. ದಾ.ಪಿ. ಆಂಜನಪ್ಪ ಅವರು ಈ ಸಿನಿಮಾದ ನಿರ್ಮಾಪಕರು. ಲೋಕೇಶ್ ಗೌಡ ಅವರು ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ವಿಜಯ್ ಯಾರ್ಡ್ಲಿ ಸಂಗೀತ ನೀಡಿದ್ದಾರೆ. ರಮೇಶ್ ರಾಜ್ ಛಾಯಾಗ್ರಹಣ ಮಾಡಿದ್ದಾರೆ. ಬಲ ರಾಜ್ವಾಡಿ , ಯಮುನಾ ಶ್ರೀನಿಧಿ, ಸಹನಾ, ಪ್ರಶಾಂತ್‌, ನೀನಾಸಂ ಅಶ್ವಥ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *