ಫೆಬ್ರವರಿ 20 ರಂದು ಬೆಳಿಗ್ಗೆ 9:35ಕ್ಕೆ ಟೀಸರ್ ಬಿಡುಗಡೆ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮೊದಲು ಎಲ್ಲಾ ಪಾತ್ರಗಳ ಪರಿಚಯವನ್ನು ತಂಡದವರು ಮಾಡಿದ್ದರು. ಈಗ ಸಿನಿಮಾದ ಟೀಸರ್ ರಿಲೀಸ್ ಮಾಡುವ ಸಮಯ. ಫೆಬ್ರವರಿ 20ರ ಬೆಳಿಗ್ಗೆ 9.35ಕ್ಕೆ ಟೀಸರ್ ಬಿಡುಗಡೆ ಕಾಣಲಿದೆ. ಈ ಟೀಸರ್ ರಿಲೀಸ್ ಆದ ಬಳಿಕ ಸಿನಿಮಾ ಬಗ್ಗೆ ಇರೋ ಕ್ರೇಜ್ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
‘ಟಾಕ್ಸಿಕ್’ ಟ್ರೇಲರ್ ಬಗ್ಗೆ ಇತ್ತೀಚೆಗೆ ಸುದ್ದಿ ಹರಿದಾಡಿದೆ. ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬರಲಿದೆ ಎಂಬ ಮಾಹಿತಿ ಇದೆ. ಅದಕ್ಕೂ ಮೊದಲು ಅಭಿಮಾನಿಗಳಿಗೆ ಸರ್ಪ್ರೈಸ್ ಸಿಕ್ಕಿದೆ. ‘ಟಾಕ್ಸಿಕ್’ ಟ್ರೇಲರ್ ರಿಲೀಸ್ ಬಗ್ಗೆ ತಂಡ ಮಾಹಿತಿ ನೀಡಿದೆ. ಈ ವಿಷಯ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.
ಈ ಮೊದಲು ‘ಟಾಕ್ಸಿಕ್’ ರಾಯ ಪಾತ್ರ ಪರಿಚಯಿಸೋ ಟೀಸರ್ ರಿಲೀಸ್ ಮಾಡಲಾಗಿತ್ತು. ಟೀಸರ್ನಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಇದ್ದವು. ಆ ದೃಶ್ಯಗಳ ಕಾರಣಕ್ಕೆ ಟೀಸರ್ ಸಾಕಷ್ಟು ಸದ್ದು ಮಾಡಿತು. ಈಗ ಹೊಸ ಟೀಸರ್ ಮೂಲಕ ಪ್ರೇಕ್ಷಕರ ಎದುರು ಬರಲು ಯಶ್ ರೆಡಿ ಆಗಿದ್ದಾರೆ. ಈ ಟೀಸರ್ನಲ್ಲೂ ಬೋಲ್ಡ್ ದೃಶ್ಯಗಳು ಇರುತ್ತವೆಯೇ ಎಂಬುದು ಸದ್ಯದ ಪ್ರಶ್ನೆ.
‘ಟಾಕ್ಸಿಕ್’ ಚಿತ್ರಕ್ಕೆ ಯಶ್ ನಾಯಕ. ಗೀತು ಮೋಹನ್ದಾಸ್ ಅವರು ಸಿನಿಮಾನ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಸೇರಿದಂತೆ ಅನೇಕರಿದ್ದಾರೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಟೀಸರ್ ಮೂಲಕ ಅಭಿಮಾನಿಗಳ ಒಂದಷ್ಟು ಪ್ರಶ್ನೆಗೆ ಉತ್ತರ ಸಿಗೋ ಸಾಧ್ಯತೆ ಇದೆ.
For More Updates Join our WhatsApp Group :




