ತಂದೆಯ ಸ್ನೇಹಿತನಿಂದ ಅಮಾನುಷ ಕೃತ್ಯ
ವಿಶಾಖಪಟ್ಟಣಂ : ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪೆಡಗಂಟ್ಯಾಡ ಮಂಡಲದಲ್ಲಿ 3 ವರ್ಷದ ಮಗುವಿನ ಮೇಲೆ ಆಕೆಯ ತಂದೆಯ ಸ್ನೇಹಿತನೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಕೆಯ ತಂದೆಯನ್ನು ಭೇಟಿಯಾಗುವ ನೆಪದಲ್ಲಿ ಆತ ಮನೆಗೆ ಬಂದಿದ್ದ. ಆದರೆ, ಆಕೆಯ ಅಪ್ಪ ಮನೆಯಲ್ಲಿರಲಿಲ್ಲ. ಅಮ್ಮ ಒಳಗೆ ಅಡುಗೆ ಮಾಡುತ್ತಿದ್ದರು. ಈ ವೇಳೆ ಆ ಆರೋಪಿಯು ಮಗುವಿಗೆ ಬಿಸ್ಕತ್ ಕೊಡಿಸುತ್ತೇನೆ ಎಂದು ಹತ್ತಿರದ ದಿನಸಿ ಅಂಗಡಿಗೆ ಕರೆದೊಯ್ದನು.
ಆಕೆಯನ್ನು ಅಂಗಡಿಗೆ ಕರೆದುಕೊಂಡು ಹೋಗುವಾಗ ಮಧ್ಯದಲ್ಲೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದಾದ ನಂತರ ಏನೂ ಆಗಿಯೇ ಇಲ್ಲವೆಂಬಂತೆ ಅವನು ಅವಳನ್ನು ವಾಪಾಸ್ ಕರೆದುಕೊಂಡು ಬಂದು ಅವಳ ಮನೆಯಲ್ಲಿ ಬಿಟ್ಟು ಓಡಿಹೋಗಿದ್ದಾನೆ. ಮನೆಯಲ್ಲಿ ಆ ಮಗು ನೋವಿನಿಂದ ನಿರಂತರವಾಗಿ ಅಳುತ್ತಲೇ ಇದ್ದುದರಿಂದ ಆ ಮಗುವಿನ ತಾಯಿ ಅವಳನ್ನು ಪರೀಕ್ಷಿಸಿದಾಗ ರಕ್ತದ ಕಲೆಗಳು ಕಂಡುಬಂದವು. ಏನಾಯಿತೆಂದು ಕೇಳಿದಾಗ ಆಕೆ ನಡೆದ ವಿಚಾರ ಹೇಳಿದಳು. ಆರೋಪಿಯ ವಿರುದ್ಧ ಬಿಎನ್‌ಎಸ್ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆಯ ಬಗ್ಗೆ ರಾಜ್ಯ ಮಹಿಳಾ ಆಯೋಗವು ತನ್ನ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಆಯೋಗದ ಅಧ್ಯಕ್ಷೆ ರಾಯಪತಿ ಶೈಲಜಾ ಅವರು ವಿಶಾಖಪಟ್ಟಣ ಸಿಪಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅವರು ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದು, ಆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಮಹಿಳಾ ಆಯೋಗ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಚಿಕ್ಕ ಮಕ್ಕಳಿಗೆ ಮನೆಯಲ್ಲೂ ಸುರಕ್ಷತೆ ಇಲ್ಲದಂತಾಗಿರುವುದು ಆತಂಕ ಸೃಷ್ಟಿಸಿದೆ. ಆಗಾಗ ಮನೆಗೆ ಬಂದು ಹೋಗುತ್ತಿದ್ದ, ತಮ್ಮ ಮನೆಯವನಂತೆಯೇ ಇದ್ದ ವ್ಯಕ್ತಿ ಚಿಕ್ಕ ಮಗುವಿನ ಮೇಲೆ ತನ್ನ ಕಾಮತೃಷೆ ತೀರಿಸಿಕೊಂಡಿರುವುದು ಆ ಕುಟುಂಬಕ್ಕೆ ಆಘಾತ ಮೂಡಿಸಿದೆ.
For More Updates Join our WhatsApp Group :




