ವಿಟಮಿನ್ D+ಕ್ಯಾಲ್ಸಿಯಂ ಅನುಕೂಲಕತೆ ಬಹಳ ಮುಖ್ಯ.

ವಿಟಮಿನ್ D+ಕ್ಯಾಲ್ಸಿಯಂ ಅನುಕೂಲಕತೆ ಬಹಳ ಮುಖ್ಯ.

ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯಿಂದ ಮೂಳೆ ದುರ್ಬಲ.

ಇತ್ತೀಚಿನ ವರ್ಷಗಳಲ್ಲಿ 30 ರಿಂದ 40 ವರ್ಷ ವಯಸ್ಸಿನಲ್ಲಿಯೇ ಮೂಳೆಗಳು ದುರ್ಬಲಗೊಳ್ಳುತ್ತಿದ್ದು, ಬೆನ್ನು, ಭುಜ ಮತ್ತು ಮೊಣಕಾಲುಗಳಲ್ಲಿ ನೋವಿಗೆ ಕಾರಣವಾಗುತ್ತಿದೆ. ಈ ರೀತಿ ಮೂಳೆ ನೋವಿಗೆ ಪ್ರಮುಖ ಕಾರಣವೆಂದರೆ ವಿಟಮಿನ್ ಡಿ ಕೊರತೆ. ಇದನ್ನು ನೀಗಿಸಲು, ಕೆಲವರು ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಇನ್ನು ಕೆಲವರು ಇಂಜೆಕ್ಷನ್‌ಗಳ ಮೊರೆ ಹೋಗುತ್ತಾರೆ. ಇಷ್ಟಾದರೂ ಕೆಲವರಿಗೆ ಮೂಳೆ ನೋವು ವಾಸಿಯಾಗುವುದಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಸೂರ್ಯನ ಬೆಳಕು ಸಿಗದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಆದರೆ ಇದಕ್ಕೆ ವಿಟಮಿನ್ ಡಿ ಮಾತ್ರ ಮುಖ್ಯವಲ್ಲ, ಅದರ ಜೊತೆಗೆ ದೇಹದಲ್ಲಿ ಕ್ಯಾಲ್ಸಿಯಂ ಮಟ್ಟ ಕೂಡ ಸಾಕಷ್ಟು ಪ್ರಮಾಣದಲ್ಲಿ ಇರಬೇಕಾಗುತ್ತದೆ. ಕ್ಯಾಲ್ಸಿಯಂ ಪರೀಕ್ಷಿಸದೆಯೇ ಕೇವಲ ವಿಟಮಿನ್ ಡಿ ಮಟ್ಟವನ್ನು ಮಾತ್ರ ಪರಿಗಣಿಸಿ ಅದಕ್ಕೆ ಔಷಧಿಗಳನ್ನು ಸೇವನೆ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಹಾಗಾಗಿ ಇವೆರಡರ ಬಗ್ಗೆ ತಿಳಿದುಕೂಂಡು ಅವೆರಡು ದೇಹಕ್ಕೆ ಎಷ್ಟು ಮುಖ್ಯ, ಯಾರಲ್ಲಿ ಈ ರೀತಿಯ ಅಪಾಯ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ದೇಹಕ್ಕೆ ವಿಟಮಿನ್ ಡಿ ಯಷ್ಟೇ ಕ್ಯಾಲ್ಸಿಯಂ ಏಕೆ ಮುಖ್ಯ?

ಸಾಮಾನ್ಯವಾಗಿ ದೇಹದಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಇದ್ದಾಗ ಮಾತ್ರ ವಿಟಮಿನ್ ಡಿ ಸರಿಯಾಗಿ ಕೆಲಸ ಮಾಡುತ್ತದೆ. ಕ್ಯಾಲ್ಸಿಯಂ ಕಡಿಮೆಯಿದ್ದರೆ, ವಿಟಮಿನ್ ಡಿ ತೆಗೆದುಕೊಂಡ ನಂತರ ಮೂಳೆಗಳು ಬಲಗೊಳ್ಳುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಅವುಗಳನ್ನು ಒಟ್ಟಿಗೆ ತೆಗೆದುಕೊಳ್ಳುವುದು ಅವಶ್ಯಕ. ಒಬ್ಬ ವ್ಯಕ್ತಿ ವಿಟಮಿನ್ ಡಿ ಜೊತೆಗೆ ಕ್ಯಾಲ್ಸಿಯಂ ತೆಗೆದುಕೊಳ್ಳದಿದ್ದರೆ, ಆಸ್ಟಿಯೊಪೊರೋಸಿಸ್ ಬರುವ ಅಪಾಯವಿರಬಹುದು. ಇದು ಚಿಕ್ಕ ವಯಸ್ಸಿನಲ್ಲಿಯೇ ಮೂಳೆ ತೆಳುವಾಗಿ ಮತ್ತು ದುರ್ಬಲವಾಗಲು ಕಾರಣವಾಗಬಹುದು, ಅಷ್ಟೇಅಲ್ಲ, ಮುರಿತದ ಅಪಾಯ ಹೆಚ್ಚಾಗಬಹುದು. ಇದು ಸ್ನಾಯು ನೋವು ಮತ್ತು ಆಯಾಸಕ್ಕೂ ಕಾರಣವಾಗಬಹುದು.

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

  • ಬಿಸಿಲಿಗೆ ಕಡಿಮೆ ಹೋಗುವವರಲ್ಲಿ
  • ಕಚೇರಿಯಲ್ಲಿ ಹೆಚ್ಚು ಸಮಯ ಕುಳಿತು ಕೆಲಸ ಮಾಡುವವರಲ್ಲಿ
  • ಹೆಚ್ಚು ಜಂಕ್ ಫುಡ್ ತಿನ್ನುವವರು
  • ಮಹಿಳೆಯರಲ್ಲಿ, ವಿಶೇಷವಾಗಿ 30 ರ ನಂತರ ಈ ಸಮಸ್ಯೆ ಕಂಡುಬರಬಹುದು

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *