ಕರ್ನಾಟಕದ ಕೈತಪ್ಪಿತಾ ಏರೋಸ್ಪೇಸ್ ಘಟಕ ಯೋಜನೆ?

ಕರ್ನಾಟಕದ ಕೈತಪ್ಪಿತಾ ಏರೋಸ್ಪೇಸ್ ಘಟಕ ಯೋಜನೆ?

ಕನ್ನಡ ಮೂಲದ ಏಕಸ್ ಗ್ರೂಪ್ ತಮಿಳುನಾಡಿನಲ್ಲಿ ಏರೋಸ್ಪೇಸ್ ಕ್ಲಸ್ಟರ್ ನಿರ್ಮಾಣ.

ಬೆಂಗಳೂರು: ಬೆಳಗಾವಿ ಮೂಲದ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯಾದ ಏಕಸ್ ಗ್ರೂಪ್  ತಮಿಳುನಾಡಿನಲ್ಲಿ ಬೃಹತ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್​ವೊಂದನ್ನು ನಿರ್ಮಿಸಲಿದೆ. ಬೆಂಗಳೂರು ಪಕ್ಕದ ಹೊಸೂರಿನ ಶೂಲಗಿರಿಯಲ್ಲಿರುವ ಸಿಪ್ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುವ ಈ ಘಟಕಕ್ಕೆ 4,000 ಕೋಟಿ ರೂ ಹೂಡಿಕೆ ಆಗಲಿದೆ. ಏಕಸ್ ಕಂಪನಿ ತಾನೇ ಕೈಯಿಂದ 1,900 ಕೋಟಿ ರೂ ಹೂಡಿಕೆ ಮಾಡಲಿದೆ. ಉಳಿದ 2,100 ಕೋಟಿ ರೂ ಅನ್ನು ಅದರ ಪಾರ್ಟ್ನರ್ ಕಂಪನಿಗಳು ಹೂಡಿಕೆ ಮಾಡಲಿವೆ.

ಕರ್ನಾಟಕ ಮೂಲದ ಏಕಸ್ ಗ್ರೂಪ್ ಸಂಸ್ಥೆ ತಮಿಳುನಾಡಿನಲ್ಲಿ ಏರೋಸ್ಪೇಸ್ ಘಟಕ ನಿರ್ಮಿಸುತ್ತಿರುವುದು ಕುತೂಹಲದ ಸಂಗತಿಗಳಲ್ಲಿ ಒಂದೆನಿಸಬಹುದು. ಕೃಷ್ಣಗಿರಿ ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ಈ ಕ್ಲಸ್ಟರ್​ನಲ್ಲಿ ಭಾರತದ ಮೊದಲ ಪೂರ್ಣ ಅಂತರ್ನಿಮಿತ ಏರ್​ಕ್ರಾಫ್ಟ್ ಎಂಜಿನ್ ಮ್ಯಾನುಫ್ಯಾಕ್ಚರಿಂಗ್ ಪ್ರಾಜೆಕ್ಟ್ ಕೂಡ ಸೇರಿರುತ್ತದೆ. ಇದರಲ್ಲಿ ಮ್ಯಾನುಫ್ಯಾಕ್ಚರಿಂಗ್ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಯಾವುದೇ ಪೂರೈಕೆಗೂ ಬಾಹ್ಯ ಕಂಪನಿಗಳ ಮೇಲೆ ಅವಲಂಬನೆ ಇರುವುದಿಲ್ಲ. ಈ ವ್ಯವಸ್ಥೆಯಲ್ಲಿ ಎಂಜಿನ್ ಮ್ಯಾನುಫ್ಯಾಕ್ಚರಿಂಗ್ ನಡೆಯುತ್ತಿರುವುದು ಭಾರತದಲ್ಲಿ ಇದೇ ಮೊದಲು ಎನ್ನಲಾಗಿದೆ.

ಏಕಸ್ ಗ್ರೂಪ್ ಹೊಸೂರಿನಲ್ಲಿ ನಿರ್ಮಿಸಲಿರುವ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್​ನಲ್ಲಿ ವಿಮಾನ ಎಂಜಿನ್ ಬಿಡಿಭಾಗಗಳು, ಲ್ಯಾಂಡಿಂಗ್ ಗೇರ್ ಸಿಸ್ಟಂಗಳು, ಅಲ್ಟ್ರಾ ಪ್ರಿಸಿಶನ್ ಮೆಷಿನಿಂಗ್, ಅಡ್ವಾನ್ಸ್ಡ್ ಏರೋಸ್ಪೇಸ್ ಸಿಸ್ಟಂ ಮತ್ತು ಸಬ್-ಅಸೆಂಬ್ಲಿಗಳ ಘಟಕಗಳು ಇರಲಿವೆ.

ಈ ಪ್ರಸ್ತಾವಿತ ಕ್ಲಸ್ಟರ್ ನಿರ್ಮಾಣದಿಂದ ಜಾಗತಿಕ ಏರೋ ಎಂಜಿನ್ ಸಪ್ಲೈ ಚೈನ್​ನಲ್ಲಿ ಒಂದು ಭಾಗವಾಗಿರಲು ಸಾಧ್ಯವಾಗುತ್ತದೆ. ತಾಂತ್ರಿಕ ಪ್ರಾವೀಣ್ಯತೆ ಬೇಡುವ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ.

ತಮಿಳುನಾಡಿನಲ್ಲಿ ಏರ್​ಕ್ರಾಫ್ಟ್ ಉದ್ಯಮ ಗಮನಾರ್ಹವಾಗಿ ಹೆಚ್ಚುತ್ತಿದೆ. ತಿರುಪ್ಪೂರ್​ನಲ್ಲಿ ಶಕ್ತಿ ಏರ್​ಕ್ರಾಫ್ಟ್ ಇಂಡಸ್ಟ್ರಿ ಪ್ರೈ ಲಿ ಸಂಸ್ಥೆಯು ನಾಲ್ಕು ಸೀಟ್​ಗಳ ಟ್ರೈನರ್ ಏರ್​ಕ್ರಾಫ್ಟ್ ಅನ್ನು ಅಸೆಂಬ್ಲಿಂಗ್ ಮಾಡುವ ಘಟಕ ಸ್ಥಾಪನೆ ಮಾಡಲಿದೆ. ಜಪಾನ್​ನ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಮೈನ್​ಬೀ ಮಿಟ್ಸುಮಿ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ ಐಜಿಬಿಟಿ ಮಾಡ್ಯೂಲ್ ಮತ್ತು ಹೈಪ್ರಿಸಿಶನ್ ಕಾಂಪೊನೆಂಟ್​ಗಳನ್ನು ತಯಾರಿಸುವ ಘಟಕ ಸ್ಥಾಪಿಸುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *