‘ದೇಶದ ಮರ್ಯಾದೆ ಹಾಳು ಮಾಡಿದ ಕಾಂಗ್ರೆಸ್’ ಎಂದು ವಾಗ್ದಾಳಿ.
ನವದೆಹಲಿ : ಕಾಂಗ್ರೆಸ್ ಕಾರ್ಯಕರ್ತರು ಅರೆ ಬರೆ ಬಟ್ಟೆ ಧರಿಸಿ ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಬಂದಿದ್ದವರ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಕಿಡಿ ಕಾರಿದ್ದಾರೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ದೇಶದ್ರೋಹಿಗಳು ಎಂದು ಕರೆದಿರುವ ಪಾತ್ರ,ದೇಶ ಎಲ್ಲೆಲ್ಲಿ ಪ್ರಗತಿ ಹೊಂದುತ್ತದೆಯೋ, ಎಲ್ಲೆಲ್ಲಿ ಸಂತೋಷ ಇರುತ್ತದೆಯೋ ಅದನ್ನು ಹಾಳು ಮಾಡಲು ಕಾಂಗ್ರೆಸ್ ಸಿದ್ಧವಿರುತ್ತದೆ. ಕಾಂಗ್ರೆಸ್ ಟಾಪ್ಲೆಸ್, ಬ್ರೈನ್ಲೆಸ್ ಹಾಗೂ ಶೇಮ್ಲೆಸ್. ಇದು ಜಾಗತಿಕ ಎಈ ಇಂಪ್ಯಾಕ್ಟ್ ಶೃಂಗಸಭೆಯಾಗಿತ್ತು. ಬಿಜೆಪಿಯ ಶೃಂಗಸಭೆಯಲ್ಲ ಎನ್ನುವ ಬುದ್ಧಿವಂತಿಕೆ ಕಾಂಗ್ರೆಸ್ಗೆ ಇಲ್ಲ. ಇಡೀ ಪ್ರಪಂಚದಿಂದ ನಾಯಕರು ಇದಕ್ಕೆ ಆಗಮಿಸಿದ್ದರು. ಸರ್ಕಾರ ಅಲ್ಲ ದೇಶದ ಮರ್ಯಾದಿಯನ್ನು ಕಳೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಗುಡುಗಿದ್ದಾರೆ.
ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿದ್ದಕ್ಕಾಗಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ದೃಶ್ಯಗಳು ತೋರಿಸಿವೆ.ಭಾರತ-ಯುಎಸ್ ವ್ಯಾಪಾರದ ಚೌಕಟ್ಟು ಒಪ್ಪಂದವನ್ನು ವಿರೋಧಿಸಿ ತಮ್ಮ ಶರ್ಟ್ಗಳನ್ನು ತೆಗೆದ ಕೆಲವು ಕೋಪಗೊಂಡ ಜನರು ಸಹ ಪ್ರತಿಭಟನೆ ನಡೆಸಿದ್ದಾರೆ.ಎಐ ಶೃಂಗಸಭೆಯನ್ನು ಅಡ್ಡಿಪಡಿಸುವ ಪ್ರಯತ್ನವನ್ನು ಭಾರತದ ಬೆಳವಣಿಗೆಯ ಕಥೆಯ ಬಗ್ಗೆ ಕಾಂಗ್ರೆಸ್ನ “ಅಸೂಯೆ”ಯ ಪರಿಣಾಮ ಎಂದು ಬಿಜೆಪಿ ಕರೆದಿದೆ.
For More Updates Join our WhatsApp Group :




