ಹಾಡಹಗಲೇ ಚಿನ್ನದಂಗಡಿ ದರೋಡೆ.

ಹಾಡಹಗಲೇ ಚಿನ್ನದಂಗಡಿ ದರೋಡೆ.

ತುಮಕೂರು ಜಿ. ಶಿರಾ ತಾ. ಕಳ್ಳಂಬೆಳ್ಳದ ಬೆಂಚೆಗೇಟ್ ಬಳಿ ಘಟನೆ.

ತುಮಕೂರು: ಶಿರಾ ತಾಲ್ಲೂಕುದ ಕಳ್ಳಂಬೆಳ್ಳದ ಬೆಂಚೆಗೇಟ್ ಬಳಿ ಜಗತಾಂಬ ಚಿನ್ನದ ಅಂಗಡಿಯಲ್ಲಿ ದರೋಡೆ ನಡೆದಿದೆ. ಈ ಘಟನೆ ನೆನ್ನೆಸಂಜೆ 3:30 ರ ಸುಮಾರಿಗೆ ನಡೆದಿದೆ.

ಆರೋಪಿಗಳ ತಂಡವು ರಾಜಸ್ಥಾನದಿಂದ ಬಂದು ಕೃತ್ಯ ನೆರವೇರಿಸಿದೆ ಆರೋಪಿ ನಾಲ್ವರು,ಮೂವರು ಅಂಗಡಿಗೆ ನುಗ್ಗಿ ಎಂಟ್ರಿ ಪಡೆದಿದ್ದಾರೆ, ಆರ್.ಜೆ 16 ಯುಎ 7398 ಸಂಖ್ಯೆಯ ಬೊಲೆರೊ ವಾಹನದಲ್ಲಿ ಬಂದಿದ್ದಾರೆ

ಅಂಗಡಿ ಮಾಲೀಕನ ಮುಖಕ್ಕೆ ಖಾರದ ಪುಡಿ ಎಸೆದು,30 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು ಬೆಳ್ಳಿ ಕಳ್ಳತನ ಮಾಡಿದರು. ಸಿಬ್ಬಂದಿ ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದರೂ ಆರೋಪಿಗಳು ಓಡಿಹೋದರು.

ರಾಷ್ಟ್ರೀಯ ಹೆದ್ದಾರಿ 48ರ ಕಳ್ಳಂಬೆಳ್ಳ ಟೋಲ್‌ನಲ್ಲಿನ ಸಿಸಿಟಿವಿ ದೃಶ್ಯದಲ್ಲಿ ಬೊಲೆರೊ ಓಡಾಟ ಸೆರೆಹಿಡಿದಿದೆ, ನಿನ್ನೆ ಮಧ್ಯಾಹ್ನ 12:30 ರಿಂದ ಸಂಜೆವರೆಗೆ ವಾಹನ ಮತ್ತು ಆರೋಪಿಗಳ ಚಲನೆಯ ದಾಖಲಾತಿ ಪಡೆದು ಪೊಲೀಸರು ಕಳ್ಳರ ಪತ್ತೆಗೆ ಪ್ರಯತ್ನ ಮಾಡುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *