ಜಾರ್ಖಂಡ್‌ನಲ್ಲಿ ಏರ್ ಆಂಬ್ಯುಲೆನ್ಸ್ ಅಪ*ತ

ಜಾರ್ಖಂಡ್‌ನಲ್ಲಿ ಏರ್ ಆಂಬ್ಯುಲೆನ್ಸ್ ಅಪ*ತ

ರೋಗಿ ಸೇರಿ 7 ಮಂದಿ ಮೃತರು, ರಾಂಚಿಯಿಂದ ದೆಹಲಿಗೆ ಹೋಗುತ್ತಿದ್ದ ವಿಮಾನ ಪತನ

ರಾಂಚಿ : ಏರ್ ಅಂಬ್ಯುಲೆನ್ಸ್​ ಅಪಘಾತಕ್ಕೀಡಾಗಿ 7 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಜಾರ್ಖಂಡ್​ನ ಛತ್ರ ಜಿಲ್ಲೆಯಲ್ಲಿ ಸೋಮವಾರ ಸಂಜೆ ನಡೆದಿದೆ. ರಾಂಚಿಯಿಂದ ಹೊರಟ ಸ್ವಲ್ಪ ಸಮಯದ ನಂತರ ವಿಮಾನವು ಸಿಮಾರಿಯಾ ಬಳಿ ಪತನಗೊಂಡಿತು. ಅದು ರಾಂಚಿ ವಿಮಾನ ನಿಲ್ದಾಣದಿಂದ ಸಂಜೆ 7.11 ಕ್ಕೆ ಹೊರಟು ಘಟನೆಯ ಸಮಯದಲ್ಲಿ ದೆಹಲಿಗೆ ಹೋಗುತ್ತಿತ್ತು. ಏರ್ ಆಂಬ್ಯುಲೆನ್ಸ್ ಅನ್ನು ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿತ್ತು.

ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ಏಳು ಮಂದಿಯೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವಿಮಾನ ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು ಎಂದು ಛತ್ರ ಜಿಲ್ಲಾಧಿಕಾರಿ ಕೀರ್ತಿಶ್ರೀ ಜಿ ತಿಳಿಸಿದ್ದಾರೆ. ವಿಮಾನವು ಸಂಜೆ 7.30 ರ ಸುಮಾರಿಗೆ ನಾಪತ್ತೆಯಾಗಿತ್ತು. ಅದು ಸಿಮಾರಿಯಾದ ಬರಿಯಾಟು ಪಂಚಾಯತ್ ಪ್ರದೇಶದಲ್ಲಿ ಪತನಗೊಂಡಿತ್ತು ಎಂದು ಅವರು ಹೇಳಿದ್ದಾರೆ.

ಅಪಘಾತಕ್ಕೆ ಗುಡುಗು ಸಹಿತ ಮಳೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.ಮೃತರನ್ನು ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್, ಸಂಜಯ್ ಕುಮಾರ್, ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾ ದೇವಿ ಮತ್ತು ಧುರು ಕುಮಾರ್ ಎಂದು ಹೆಸರಿಸಲಾಗಿದೆ. ಈ ವಿಮಾನವು ದೆಹಲಿ ಮೂಲದ ನಾನ್-ಶೆಡ್ಯೂಲ್ಡ್ ಆಪರೇಟರ್ ರೆಡ್‌ಬರ್ಡ್‌ಗೆ ಸೇರಿತ್ತು. ಲತೇಹಾರ್ ಜಿಲ್ಲೆಯ ಚಂದ್ವಾ ನಿವಾಸಿ ಸಂಜಯ್ ಕುಮಾರ್ (41) ಎಂಬ ರೋಗಿಯನ್ನು ಫೆಬ್ರವರಿ 16 ರಂದು ಆಸ್ಪತ್ರೆಗೆ ಕರೆತರಲಾಗಿತ್ತು, ಅವರ ದೇಹ ಶೇ.65ರಷ್ಟು ಸುಟ್ಟಿತ್ತು. ಮುಂದುವರಿದ ಚಿಕಿತ್ಸೆಗಾಗಿ ರೋಗಿಯನ್ನು ದೆಹಲಿಗೆ ಕರೆದೊಯ್ಯಲು ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *