ಗರ್ಭಕಂಠದ ಕ್ಯಾನ್ಸರ್ ತಡೆಗೆ ಕೇಂದ್ರದ ‘ಸ್ವಸ್ಥ ನಾರಿ’ ಮಿಷನ್.
ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ತಡೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಹದಿಹರೆಯದ ಹೆಣ್ಣು ಮಕ್ಕಳಿಗೆ ಉಚಿತ ಕ್ಯಾನ್ಸರ್ ಲಸಿಕೆ ನೀಡಲು ಸಿದ್ಧತೆ ನಡೆಸಿದೆ. ದೇಶಾದ್ಯಂತ ಹದಿಹರೆಯದ ಬಾಲಕಿಯರಿಗಾಗಿ ‘ಡ್ಯೂಮನ್ ಪ್ಯಾಪಿಲೋಮ ವೈರಸ್(HPV) ಲಸಿಕೆ ವಿತರಣೆ ಕಾರ್ಯ ಕ್ರಮವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ಸಜ್ಜಾಗಿದ್ದು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ‘ಸ್ವಸ್ಥ ನಾರಿ’ ಮಿಷನ್ ಅಡಿಯಲ್ಲಿ ಬೃಹತ್ ಲಸಿಕಾ ಅಭಿಯಾನಕ್ಕೆ ಸಿದ್ಧತೆ ನಡೆಸಿದೆ.ಇದರ ಭಾಗವಾಗಿ ಮೆರ್ಕ್ ಸಂಸ್ಥೆಯು ತಯಾರಿಸಿರುವ ‘ಗಾರ್ಡಾಸಿಲ್’ ಚುಚ್ಚುಮದ್ದನ್ನು ದೇಶಾದ್ಯಂತ ಉಚಿತವಾಗಿ ನೀಡಲಾಗುವುದು.
For More Updates Join our WhatsApp Group :




