‘ಶಿವಕುಮಾರ್’ನಿಂದ ‘ನೀನಾಸಂ ಸತೀಶ್’ವರೆಗಿನ ಜರ್ನಿ ಕಥೆ’.

‘ಶಿವಕುಮಾರ್’ನಿಂದ ‘ನೀನಾಸಂ ಸತೀಶ್’ವರೆಗಿನ ಜರ್ನಿ ಕಥೆ’.

 ಸಣ್ಣ ರೈತ ಕುಟುಂಬದಿಂದ ಸ್ಯಾಂಡಲ್‌ವುಡ್‌ ಸ್ಟಾರ್.

ನೀನಾಸಂ ಸತೀಶ್ ಅವರ ಬದುಕಿನ ಯಶೋಗಾಥೆ ನಿಜಕ್ಕೂ ಸ್ಪೂರ್ತಿದಾಯಕ. ಮದ್ದೂರಿನ ಸಣ್ಣ ರೈತ ಕುಟುಂಬದಿಂದ ಬಂದ ಶಿವಕುಮಾರ್, ಗೋಪಾಲ್ ಥಿಯೇಟರ್‌ನಲ್ಲಿ ಕಸ ಗುಡಿಸಿ, ಟೀ ಮಾರಿ, ಟಾರ್ಚ್ ಬಿಟ್ಟು, ಬಳಿಕ ನೀನಾಸಂ ಸೇರಿ ಇಂದು ಕನ್ನಡ ಚಿತ್ರರಂಗದ ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ. ಜಾತಿ ತಾರತಮ್ಯದ ವಿರುದ್ಧ ಹೋರಾಡುವ ಅವರ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಯಶಸ್ಸಿಗೆ ಸತೀಶ್ ನೆರವು ಕೋರಿದ್ದಾರೆ.

ನೀನಾಸಂ ಸತೀಶ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನೀನಾಸಂ ಹಿನ್ನೆಲೆಯಿಂದ ಬಂದ ಅವರು ಇಂದು ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಅವರ ಅಭಿನಯದ ‘ದಿ ರೈಸ್ ಆಫ್ ಅಶೋಕ’ ಸಿನಿಮಾ ಗಮನ ಸೆಳೆದಿದೆ. ಜಾತಿ ತಾರತಮ್ಯ ವಿರುದ್ಧ ಹೋರಾಡುವ ಈ ಕಥೆ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಸತೀಶ್ ಅವರು ತಮ್ಮ ಜರ್ನಿ ನೆನಪಿಸಿಕೊಂಡಿದ್ದಾರೆ. ಅವರು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

‘ಶಿವಕುಮಾರ್, ನೀನಾಸಂ ಸತೀಶ್ ಆದ ಕಥೆ’ ಎಂದು ಮಾತು ಆರಂಭಿಸಿದ್ದಾರೆ ಸತೀಶ್. ‘ಇದು ವಿಧಿ ಬರೆದ ಕಥೆಯಲ್ಲ, ನಾನೇ ಬರೆದುಕೊಂಡ ಸಾಧಾರಣ ಕಥೆ. ನಮ್ಮೂರು ಮದ್ದೂರು ಬಳಿ ಇದೆ. ನಮಗೆ ಇರೋದು 30 ಗುಂಟೆ ಜಾಗ. ನಮ್ಮದು ಸಣ್ಣ ರೈತರ ಕುಟುಂಬ. ಛಲ ಎಲ್ಲಿಂದ ಬಂತು ಎಂದಾಗ ನಮ್ಮಮ್ಮ ನೆನಪಾಗುತ್ತಾಳೆ’ ಎಂದು ಹಳೆಯ ಕಥೆ ನೆನಪಿಸಿಕೊಂಡಿದ್ದಾರೆ ಸತೀಶ್.

‘ಬೆಂಗಳೂರಿಗೆ ಮೊದಲು ಬಂದಾಗ ಸಿಕ್ಕಿದ್ದು ಗೋಪಾಲ್ ಥಿಯೇಟರ್. ಇಲ್ಲಿ, ಕಸ ಗುಡಿಸಿದ್ದೆ, ಟೀ ಮಾರಿದ್ದೆ. ಟಾರ್ಚ್ ಬಿಟ್ಟಿದ್ದೆ. ಆಗ ಹೀರೋ ಆಗ್ತೀನಿ ಎಂದು ಎಂದಿಗೂ ಅಂದುಕೊಂಡಿರಲಿಲ್ಲ’ ಎಂದಿದ್ದಾರೆ ನೀನಾಸಂ ಸತೀಶ್. ಸಿಕ್ಕ ಸಿಕ್ಕ ಕೆಲಸ ಮಾಡಿದೆ. ಮತ್ತೆ ಊರು ಸೇರಿದೆ. ಆ ಬಳಿಕ ನಾಟಕ ಎಂಬ ಹೊಸ ಬಾಗಿಲು ತೆರೆಯಿತು’ ಎಂದು ಜರ್ನಿ ನೆನೆದರು ಸತೀಶ್.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *