ಮೋದಿ ಜೊತೆ ಜಂಟಿ ಭಾಷಣ; 1893ರ ವಿಶ್ವ ಧರ್ಮ ಸಮ್ಮೇಳನ ನೆನಪಿಸಿದ ಕಾರ್ನಿ.
ನವದೆಹಲಿ : ಭಾರತ ಪ್ರವಾಸದಲ್ಲಿರುವ ಕೆನಡಾದ ಪ್ರಧಾನ ಮಂತ್ರಿ ಮಾರ್ಕ್ ಕಾರ್ನಿ ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಜಂಟಿ ಭಾಷಣ ಮಾಡಿದ್ದಾರೆ. ಈ ವೇಳೆ ಅವರು 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನಕ್ಕಾಗಿ ಅಮೆರಿಕಕ್ಕೆ ಹೋಗುವಾಗ ಸ್ವಾಮಿ ವಿವೇಕಾನಂದರು ಕೆನಡಾಕ್ಕೆ ಭೇಟಿ ನೀಡಿದ ಬಗ್ಗೆಯೂ ಮಾತನಾಡಿದ್ದಾರೆ.
ಭಾರತ ಮತ್ತು ಕೆನಡಾ ನಡುವಿನ ಪಾಲುದಾರಿಕೆಯನ್ನು ವಿವರಿಸಲು ಪ್ರಧಾನಿ ಕಾರ್ನಿ ವಿವೇಕಾನಂದರ ಜನಪ್ರಿಯ ಹೇಳಿಕೆಯನ್ನು ಉಲ್ಲೇಖಿಸಿದರು. “ಏಳಿ, ಎದ್ದೇಳಿ, ಗುರಿ ತಲುಪುವವರೆಗೆ ನಿಲ್ಲಬೇಡಿ” ಎಂದು ವಿವೇಕಾನಂದರು ಹೇಳುತ್ತಿದ್ದರು. ಅವರು ಕೆನಡಾದಲ್ಲಿ ಸ್ವಲ್ಪ ಸಮಯ ಕಳೆದರು. ವಿವೇಕಾನಂದರು ಹೇಳಿದಂತೆಯೇ ಭಾರತದ ಜೊತೆಗಿನ ಈ ಪಾಲುದಾರಿಕೆಯಲ್ಲಿ ಗುರಿ ಮುಟ್ಟುವವರೆಗೂ ನಾವು ನಿಲ್ಲುವುದಿಲ್ಲ” ಎಂದು ಪ್ರಧಾನಿ ಕಾರ್ನಿ ಹೇಳಿದ್ದಾರೆ.
For More Updates Join our WhatsApp Group :




