ಹೋಳಿ ಹುಣ್ಣಿಮೆ ದಿನ ಗ್ರಹಣ: ಜಲಕಂಟಕ–ಅಗ್ನಿ ಅವಘಡಗಳ ಭೀತಿ?

ಹೋಳಿ ಹುಣ್ಣಿಮೆ ದಿನ ಗ್ರಹಣ: ಜಲಕಂಟಕ–ಅಗ್ನಿ ಅವಘಡಗಳ ಭೀತಿ?

16 ನಿಮಿಷಗಳ ಗ್ರಹಣ, ಸಣ್ಣ ತೊಂದರೆ ಸಾಧ್ಯತೆ.

ಬೆಂಗಳೂರು: ಹೋಳಿ ಹುಣ್ಣಿಮೆಯಂದು ಗ್ರಹಣ ಹಿನ್ನೆಲೆ ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಜಲಕಂಟಕ ಮತ್ತು ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ. ಏಕೆಂದರೆ ಚಂದ್ರನು ಜಲಕಾರಕನಾಗಿದ್ದಾನೆ ಮತ್ತು ಹೋಳಿ ಹುಣ್ಣಿಮೆಯು ಅಗ್ನಿಗೆ ಸಂಬಂಧಿಸಿದೆ. ಈ ಅವಘಡಗಳು ಸಂಭವಿಸದಂತೆ ಪರಮೇಶ್ವರನಲ್ಲಿ ಪ್ರಾರ್ಥಿಸುವುದರಿಂದ ಎಲ್ಲವೂ ನಿವೃತ್ತಿಯಾಗುತ್ತವೆ ಎಂದು ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ.

ಭಾರತದಲ್ಲಿ ಕೇವಲ 16 ನಿಮಿಷಗಳ ಕಾಲ ಗ್ರಹಣ ಕಾಣಿಸಿಕೊಂಡಿದ್ದರೂ, ಸಣ್ಣ ಪ್ರಮಾಣದಲ್ಲಿ ತೊಂದರೆಗಳು ಬರಬಹುದು. ಆದರೆ, ಈ ತೊಂದರೆಗಳಿಂದ ಮುಕ್ತಿಯಾಗಲು ಪರಮೇಶ್ವರನ ಪ್ರಾರ್ಥನೆ ಅಗತ್ಯ. ಪ್ರಸ್ತುತ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧಕ್ಕೂ ಮತ್ತು ಗ್ರಹಣಕ್ಕೂ ಯಾವುದೇ ಸಂಬಂಧವಿಲ್ಲ.  ಭಾರತ ದೇಶವು ಕರ್ಮಭೂಮಿ, ಜಪಭೂಮಿ, ತಪೋಭೂಮಿ ಮತ್ತು ಯಜ್ಞಭೂಮಿ ಆಗಿರುವುದರಿಂದ ಯಾವುದೇ ತೊಂದರೆಗಳು ಬರದಂತೆ ಪರಮೇಶ್ವರನನ್ನು ಪ್ರಾರ್ಥಿಸುವುದು ಮುಖ್ಯ. ಒಂದು ಕೊಳಗ ಹಾಲಿಗೆ ಒಂದು ಚಮಚ ಮೊಸರು ಹಾಕಿದರೆ ಹಾಲು ಕೆಡುವಂತೆ, ಗ್ರಹಣವು ಸಣ್ಣ ಪ್ರಮಾಣದಲ್ಲಿ ಕಂಡರೂ ಅದರ ದೋಷ ಇದ್ದೇ ಇರುತ್ತದೆ. ಈ ದೋಷ ದೇಶಕ್ಕೆ ತೊಂದರೆ ನೀಡದಿರಲಿ ಎಂದು ಪ್ರಾರ್ಥಿಸುವುದು ಈ ದಿನದ ವಿಶೇಷ ಎಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *