ಖಮೇನಿ ಹ*: B.K ಹರಿಪ್ರಸಾದ್ ಬೃಹತ್ ಆರೋಪ.

ಖಮೇನಿ ಹ*: B.K ಹರಿಪ್ರಸಾದ್ ಬೃಹತ್ ಆರೋಪ.

ಇಸ್ರೇಲ್-ಅಮೆರಿಕಾದ ಮೇಲೆ ಗಂಭೀರ ಟೀಕೆ.

ಬೆಂಗಳೂರು : ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಇರಾನ್‌ನಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದು, ಇರಾನ್​​ನ ಪರಮೋಚ್ಛ ನಾಯಕ ಖಮೇನಿಯನ್ನು ಮೋಸದಿಂದ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದು ವಿಶ್ವಸಂಸ್ಥೆಯ ಚಾರ್ಟರ್‌ನ ಸಂಪೂರ್ಣ ಉಲ್ಲಂಘನೆಯಾಗಿದ್ದು, ಒಂದು ರಾಷ್ಟ್ರದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯವನ್ನು ನಾಶಪಡಿಸುವ ಕೆಲಸವನ್ನು ಯುಎಸ್‌ಎ ಮತ್ತು ಇಸ್ರೇಲ್ ಮಾಡಿವೆ ಎಂದು ಅವರು ಹೇಳಿದ್ದಾರೆ.

ಭಾರತದ ವಿದೇಶಾಂಗ ನೀತಿಯು ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಅಲಿಪ್ತ ರಾಷ್ಟ್ರಕೂಟದ ತತ್ವಗಳನ್ನು ಅನುಸರಿಸುತ್ತಿದೆ ಎಂದು ಹರಿಪ್ರಸಾದ್ ನೆನಪಿಸಿದ್ದು, 1994ರಲ್ಲಿ ಕಾಶ್ಮೀರ ವಿಚಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (OIC) ನಿರ್ಣಯವನ್ನು ಮಂಡಿಸಿದಾಗ ಇರಾನ್ ಭಾರತಕ್ಕೆ ಪ್ರಬಲವಾಗಿ ಬೆಂಬಲ ನೀಡಿತ್ತು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *