ರಣವೀರ್ ನಟನೆಯ’Dhurandhar 2′ ಟ್ರೇಲರ್ ರಿಲೀಸ್ ವಿಳಂಬ.

ರಣವೀರ್ ನಟನೆಯ'Dhurandhar 2' ಟ್ರೇಲರ್ ರಿಲೀಸ್ ವಿಳಂಬ.

ಕಾರಣ: ಚಂದ್ರ ಗ್ರಹಣ ಮತ್ತು ಪೂಜೆಗಳು.

ಸೋಶಿಯಲ್ ಮೀಡಿಯಾ ಓಪನ್ ಮಾಡಿದರೆ ‘ಧುರಂಧರ್ 2’ Vs ‘ಟಾಕ್ಸಿಕ್’ ಎಂಬ ಚರ್ಚೆ ಕಾಣಿಸುತ್ತದೆ. ಇಂದು ಸಿನಿಮಾ ಟ್ರೇಲರ್ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ನಂತರ ಅದನ್ನು ಮುಂದಕ್ಕೆ ಹಾಕಲಾಯಿತು. ಇದಕ್ಕೆ ಕಾರಣ ಆಗಿದ್ದು ಚಂದ್ರ ಗ್ರಹಣ ಎಂದು ವರದಿ ಆಗಿದೆ. ಈ ಬಗ್ಗೆ ಬಾಲಿವುಡ್ ಹಂಗಾಮ ವರದಿ ಮಾಡಿದೆ. ಬಾಲಿವುಡ್​​ನವರೂ ಇದನ್ನು ಬಹುವಾಗಿ ನಂಬುತ್ತಾರೆ ಎಂಬ ವಿಷಯ ಅನೇಕರಿಗೆ ಅಚ್ಚರಿ ತಂದಿದೆ.

ಕೆಲವರ ನಂಬಿಕೆ ಪ್ರಕಾರ ಗ್ರಹಣ ದಿನವನ್ನು ಒಳ್ಳೆಯ ದಿನ ಎಂದು ಪರಿಗಣಿಸಲಾಗುವುದಿಲ್ಲ. ಈ ಕಾರಣದಿಂದ ಅಂದು ಸಾಕಷ್ಟು ಪೂಜೆಗಳನ್ನು ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಗ್ರಹಣದ ಸಮಯದಲ್ಲಿ ಆಹಾರ ಸೇವನೆಯನ್ನೂ ಮಾಡೋದಿಲ್ಲ. ಗ್ರಹಣದ ಬಳಿಕ ಸ್ನಾನ ಮಾಡಿ, ಮನೆಯನ್ನು ಶುಚಿಗೊಳಿಸುವವರೂ ಇದ್ದಾರೆ. ಹೀಗಾಗಿ, ಈ ದಿನ ‘ಧುರಂಧರ್ 2’ ಟ್ರೇಲರ್ ರಿಲೀಸ್ ಮಾಡೋದು ಬೇಡ ಎಂಬ ನಿರ್ಧಾರಕ್ಕೆ ಚಿತ್ರತಂಡಕ್ಕೆ ಬಂದಂತೆ ಇದೆ.

ಮಾರ್ಚ್ 3ರಂದು ಟ್ರೇಲರ್ ಲಾಂಚ್ ಮಾಡಬೇಕು ಎಂಬ ಆಲೋಚನೆಯನ್ನು ತಂಡ ಹೊಂದಿದ್ದು ನಿಜವೇ ಆಗಿತ್ತು. ಆದರೆ, ಗ್ರಹಣದ ಸಮಯ ಬೆಳಿಗ್ಗೆ 9.30ರಿಂದ ಆರಂಭ ಆಗಿ ಸಂಜೆ 6.46ರವರೆಗೆ ಇದೆ. ಹೀಗಾಗಿ, ಈ ಆಲೋಚನೆಯನ್ನು ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಾ ಇದೆ. ಆದರೆ, ಈ ಬಗ್ಗೆ ತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸದ್ಯ ಕೇಳಿ ಬರುತ್ತಿರುವ ಹೊಸ ವರದಿ ಪ್ರಕಾರ ಮಾರ್ಚ್ 5 ಅಥವಾ 6ರಂದು ಟ್ರೇಲರ್ ಲಾಂಚ್ ಆಗಲಿದೆಯಂತೆ. ಮುಂಬೈನ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಅಲ್ಲಿ ಈ ಟ್ರೇಲರ್ ರಿವೀಲ್ ಆಗುವ ಸಾಧ್ಯತೆ ಇದೆ. ಈಗಾಗಲೇ ‘ಟಾಕ್ಸಿಕ್’ ಸಿನಿಮಾ ಟ್ರೇಲರ್ ಮಾರ್ಚ್ 8ರಂದು ರಿವೀಲ್ ಆಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ, ಅದಕ್ಕೂ ಮೊದಲೇ ‘ಧುರಂಧರ್ 2’ ಟ್ರೇಲರ್ ರಿಲೀಸ್ ಆದರೆ, ಚಿತ್ರಕ್ಕೆ ಹೆಚ್ಚು ಸಹಕಾರಿ ಆಗಬಹುದು. ಒಂದೊಮ್ಮೆ ಎರಡೂ ಟ್ರೇಲರ್​​​ಗಳು ಒಂದೇ ದಿನ ಬಿಡುಗಡೆ ಕಂಡರೆ ಯೂಟ್ಯೂಬ್​​​ನಲ್ಲೂ ಇವು ಕ್ಲ್ಯಾಶ್ ಆದಂತೆ ಆಗಲಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *