‘Toxic’ ಹಿಂದಿ ಡಬ್ಬಿಂಗ್ ಕುತೂಹಲ.

‘Toxic’ ಹಿಂದಿ ಡಬ್ಬಿಂಗ್ ಕುತೂಹಲ.

ಮುಂಬೈ ಸ್ಟುಡಿಯೋದಲ್ಲಿ ಯಶ್ ಹಾಜರಾತಿ ಯಾಕೆ?

ರಾಕಿಂಗ್ ಸ್ಟಾರ್ ಯಶ್  ಅವರು ಸದ್ಯ ‘ಟಾಕ್ಸಿಕ್’ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಜವಾಬ್ದಾರಿಗಳನ್ನು ಅವರು ಹೆಗಲಮೇಲೆ ಹಾಕಿಕೊಂಡು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಮಲಯಾಳಂನ ಗೀತು ಮೋಹನ್​ ದಾಸ್ ಜೊತೆ ಸೇರಿ, ಜವಾಬ್ದಾರಿ ಹಂಚಿಕೊಂಡು ಯಶ್ . ಈಗ ‘ಟಾಕ್ಸಿಕ್’ ಚಿತ್ರದ ಹಿಂದಿ ಡಬ್ಬಿಂಗ್ ನಡೆಯುತ್ತಿದೆ. ಹಾಗಾದರೆ ಯಶ್ ಅವರೇ ಹಿಂದಿಗೂ ಡಬ್ ಮಾಡುತ್ತಿದ್ದಾರಾ? ಯಶ್ ಮುಂಬೈ ಡಬ್ಬಿಂಗ್ ಸ್ಟುಡಿಯೋದಲ್ಲಿ ಕುಳಿತಿದ್ದು ಏಕೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ‘ಟಾಕ್ಸಿಕ್’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ಅವರು ಕನ್ನಡ ವರ್ಷನ್​​ಗೆ ಡಬ್ಬಿಂಗ್ ಮುಗಿಸಿದ್ದಾರೆ ಎನ್ನಲಾಗಿದೆ. ಸದ್ಯ ಅವರು ಹಿಂದಿ ವರ್ಷನ್​ ಕಡೆ ಗಮನ ಹರಿಸುತ್ತಿದ್ದಾರೆ. ಈ ಚಿತ್ರ ಸದ್ಯ ತನ್ನ ರಿಲೀಸ್ ದಿನಾಂಕವನ್ನು ಜೂನ್ 4ಕ್ಕೆ ಮುಂದೂಡಿಕೊಂಡಿದೆ. ಸದ್ಯ ಯಶ್ ಅವರು ಹಿಂದಿ ವರ್ಷನ್ ಅನ್ನು ಉತ್ತಮವಾಗಿ ಮಾಡುವ ಉದ್ದೇಶ ಹೊಂದಿದ್ದಾರೆ. ಈ ಕಾರಣದಿಂದ ಅವರು ಡಬ್ಬಿಂಗ್​​ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಹಿಂದಿ ವರ್ಷನ್​​ಗೆ ಯಶ್ ಡಬ್ಬಿಂಗ್ ಮಾಡುತ್ತಿಲ್ಲ. ಬದಲಿಗೆ ಹಿರಿಯ ಕಲಾವಿದ ಸಚಿನ್ ಗೋಲೆ ಅವರು ಧ್ವನಿ ನೀಡುತ್ತಿದ್ದಾರೆ. ಅವರು ಈ ಮೊದಲು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರದ ರಾಕಿ ಪಾತ್ರಕ್ಕೆ ವಾಯ್ಸ್ ಕೊಟ್ಟಿದ್ದರು. ‘ಕೆಜಿಎಫ್ 2’ ರಿಲೀಸ್ ವೇಳೆ ಯಶ್​​ಗೆ ಹಿಂದಿ ವರ್ಷನ್​ಗೆ ಧ್ವನಿ ಕೊಡೋ ಬಗ್ಗೆ ಕೋರಿಕೆ ಬಂದಿತ್ತು. ಆಗ ಯಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದರು.

ಹಿಂದಿ ಪ್ರೇಕ್ಷಕರಿಗೆ ಯಶ್ ಎಂದಾಗ ಸಚಿನ್ ಧ್ವನಿಯೇ ನೆನಪಾಗುತ್ತದೆ. ಹೀಗಾಗಿ, ಧ್ವನಿ ಬದಲಿಸಿದರೆ ಪ್ರೇಕ್ಷಕರು ಅದನ್ನು ಒಪ್ಪಿಕೊಳ್ಳದೆ ಇರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸಚಿನ್ ಅವರೇ ಧ್ವನಿ ನೀಡಲಿ ಎಂದು ಯಶ್ ಹೇಳಿದ್ದರು. ಈ ಕಾರಣದಿಂದ ‘ಟಾಕ್ಸಿಕ್’ ಚಿತ್ರಕ್ಕೂ ಯಶ್ ಅವರನ್ನೇ ಆಯ್ಕೆ ಮಾಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *