RCB ಅಭಿಮಾನಿಗಳಿಗೆ 3 ಗುಡ್ ನ್ಯೂಸ್, 1 ಬ್ಯಾಡ್ ನ್ಯೂಸ್.
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಕಲರವ ಶುರುವಾಗಲಿದೆ. ಕಳೆದ ಕೆಲ ತಿಂಗಳುಗಳಿಂದ ನಿಷೇಧಕ್ಕೆ ಒಳಗಾಗಿದ್ದ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಣಕ್ಕಿಳಿಯುವುದು ಖಚಿತವಾಗಿದೆ. ಈ ಖಚಿತತೆಯೊಂದಿಗೆ ಆರ್ಸಿಬಿ ಅಭಿಮಾನಿಗಳಿಗೆ ಮೂರು ಗುಡ್ ನ್ಯೂಸ್ ಕೂಡ ಸಿಕ್ಕಿದೆ. ಇದರ ಜೊತೆಗೆ ಒಂದು ಬ್ಯಾಡ್ ನ್ಯೂಸ್ ಕೂಡ ಇದೆ.
ಇಲ್ಲಿ ಗುಡ್ ನ್ಯೂಸ್ ಏನೆಂದರೆ… ಈ ಬಾರಿಯ ಐಪಿಎಲ್ನ ಪ್ರಮುಖ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಕಾರ್ಯದರ್ಶಿ ಸಂತೋಷ್ ಮೆನನ್ ಅವರು ಖಚಿತಪಡಿಸಿದ್ದಾರೆ. ಅದರಂತೆ ಐಪಿಎಲ್ 2026ರ ಮೂರು ಪ್ರಮುಖ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಆ ಪಂದ್ಯಗಳಾವುವು ಎಂದರೆ…
- ಉದ್ಘಾಟನಾ ಪಂದ್ಯ: ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ ಎಂದು ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ. ಅಂದರೆ ಈ ಭಅರಿಯ ಐಪಿಎಲ್ ಶುರುವಾಗುವುದು ಬೆಂಗಳೂರಿನಲ್ಲಿ.
- ಪ್ಲೇಆಫ್ ಪಂದ್ಯ: ಉದ್ಘಾಟನಾ ಪಂದ್ಯವಲ್ಲದೇ, ಪ್ಲೇಆಫ್ ಸುತ್ತಿನ ಒಂದು ಪಂದ್ಯ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿದೆ. ಅದು ಎಲಿಮಿನೇಟರ್ ಪಂದ್ಯ ಆಗಿರಬಹುದು ಇಲ್ಲಾ ಮೊದಲ ಕ್ವಾಲಿಫೈಯರ್ ಮ್ಯಾಚ್ ಆಗಿರಬಹುದು.
- ಫೈನಲ್ ಪಂದ್ಯ: ಈ ಬಾರಿಯ ಐಪಿಎಲ್ನ ಫೈನಲ್ ಪಂದ್ಯ ಕೂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಐಪಿಎಲ್ 2026ರ ಕೊನೆಯ ಪಂದ್ಯ ಕೂಡ ಬೆಂಗಳೂರಿನಲ್ಲೇ ನಡೆಯಲಿದೆ.
For More Updates Join our WhatsApp Group :




