ಮನೆಯೊಳಗೆ ಅಕ್ಕ–ತಂಗಿಯರ ನಿಗೂಢ ಸಾ*.

ಮನೆಯೊಳಗೆ ಅಕ್ಕ–ತಂಗಿಯರ ನಿಗೂಢ ಸಾ*.

ಪ್ರಜ್ಞಾಹೀನ ಸ್ಥಿತಿಯಲ್ಲಿ ತಾಯಿ ಆಸ್ಪತ್ರೆಗೆ ದಾಖಲು.

ನವದೆಹಲಿ : ದಕ್ಷಿಣ ದೆಹಲಿಯಲ್ಲಿ 33 ಮತ್ತು 28 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ನಿಗೂಢವಾಗಿ ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸರು ಮಾಲ್ವಿಯಾ ನಗರದ ಅವರ ಮನೆಯ ಬಾಗಿಲು ಒಡೆದು ನೋಡಿದ ನಂತರ ಅವರ 55 ವರ್ಷದ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸುವ ಮೊದಲು ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕೊಂದಿರಬಹುದು ಎಂಬುದು ಪೊಲೀಸರ ಅನುಮಾನ. ಆದರೆ ಆ ಮಹಿಳೆಗೆ ಪ್ರಜ್ಞೆ ಬಂದ ನಂತರವೇ ನಡೆದ ಘಟನೆಗಳು ಸ್ಪಷ್ಟವಾಗುವ ನಿರೀಕ್ಷೆಯಿದೆ.

ಗುರುವಾರ ಸಂಜೆ ಮೃತರ ಮನೆಗೆ ಹೋಗಿದ್ದ ಸಂಬಂಧಿಕರು ಎಷ್ಟೇ ಬಾಗಿಲು ಬಡಿದರೂ ಡೋರ್ ಓಪನ್ ಆಗಲಿಲ್ಲ. ಇದರಿಂದ ಅನುಮಾಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೆಹಲಿ ಪೊಲೀಸರ ತಂಡವು ಸ್ಥಳಕ್ಕೆ ತಲುಪಿ ಬಾಗಿಲು ಒಡೆದು ನೋಡಿದಾಗ, ಒಬ್ಬ ಮಹಿಳೆಯ ಶವ ಮುಖದ ಮೇಲೆ ದಿಂಬನ್ನು ಇಡಲಾಗಿತ್ತು. ಮತ್ತೊಬ್ಬಳ ಕುತ್ತಿಗೆಗೆ ಗಾಯವಾಗಿತ್ತು. ಇಬ್ಬರೂ ಬೇರೆ ಬೇರೆ ರೂಂನಲ್ಲಿ ಸತ್ತುಬಿದ್ದಿದ್ದರು. ಅವರಿಬ್ಬರೂ ಸುಮಾರು 33 ಮತ್ತು 28 ವರ್ಷ ವಯಸ್ಸಿನ ಸಹೋದರಿಯರು ಎಂದು ಗುರುತಿಸಲಾಗಿದೆ.

ಅವರ 55 ವರ್ಷ ವಯಸ್ಸಿನ ತಾಯಿ ಮತ್ತೊಂದು ರೂಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯು ತಾಯಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವ ಮೊದಲು ಇಬ್ಬರೂ ಹೆಣ್ಣುಮಕ್ಕಳನ್ನು ಕೊಂದಿದ್ದಾರೆ ಎಂದು ಹೇಳಲಾಗಿದೆ.

ಅಕ್ಕ-ತಂಗಿಯರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪರಾಧ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ತಂಡಗಳು ಘಟನಾ ಸ್ಥಳವನ್ನು ಪರಿಶೀಲಿಸಿವೆ ಮತ್ತು ಪುರಾವೆಗಳನ್ನು ಸಂಗ್ರಹಿಸಿವೆ. ಆ ಮಹಿಳೆಯ ಹೇಳಿಕೆಯನ್ನು ದಾಖಲಿಸಲು ಅವರು ಪ್ರಜ್ಞೆ ಮರಳುವವರೆಗೆ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *