ಆ್ಯಕ್ಷನ್ ಮಯ ಟ್ರೇಲರ್ಗೆ ಫ್ಯಾನ್ಸ್ ಫಿದಾ.
ಧುರಂಧರ್’ ಸಿನಿಮಾ ಸೂಪರ್ ಹಿಟ್ ಆಯಿತು. ಈಗ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ರಿಲೀಸ್ಗೆ ರೆಡಿ ಆಗುತ್ತಿದೆ. ಮಾರ್ಚ್ 19ರಂದು ಸಿನಿಮಾ ವಿಶ್ವ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ಗಾಗಿ ಫ್ಯಾನ್ಸ್ ಕಾದಿದ್ದರು. ಇಂದು ಬೆಳಿಗ್ಗೆ 11.01ಕ್ಕೆ ಸಿನಿಮಾದ ಟ್ರೇಲರ್ ಬಿಡುಗಡೆ ಕಂಡಿದೆ. ಈ ಟ್ರೇಲರ್ ನೋಡಿದ ಬಳಿಕ ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಕ್ಕಿದೆ.
ರೆಹಮಾನ್ ಡಕಾಯಿತ್ ಹತ್ಯೆಯನ್ನು ರೆಹಮಾನ್ ಅಲಿ ಮಜಾರಿ (ರಣವೀರ್ ಸಿಂಗ್) ಮಾಡುತ್ತಾನೆ. ಭೀಕರವಾಗಿ ಈ ಕೊಲೆ ನಡೆಯುತ್ತದೆ. ಈ ಕೊಲೆ ಬಳಿಕ ‘ಧುರಂಧರ್’ ಸಿನಿಮಾ ಕೊನೆ ಆಗಿತ್ತು. ಈಗ ‘ಧುರಂಧರ್ 2’ ಸಿನಿಮಾ ಇಲ್ಲಿಂದಲೇ ಆರಂಭ ಆಗುತ್ತಿದೆ. ಹಮ್ಜಾ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ರಿವೇಂಜ್ಗೆ ಇಳಿಯುತ್ತಾನೆ. ಹೀಗಾಗಿ, ಇಡೀ ಸಿನಿಮಾ ಉದ್ದಕ್ಕೂ ಸೇಡಿನ ಕತೆ ಇರಲಿದೆ ಎಂಬುದು ಸ್ಪಷ್ಟವಾಗಿದೆ.
ಟ್ರೇಲರ್ ಉದ್ದಕ್ಕೂ ಆ್ಯಕ್ಷನ್ ಇದೆ. ಹಮ್ಜಾ ಮೂಲ ಹೆಸರು ಜಸ್ಕಿರತ್ ಸಿಂಗ್ ರಂಗಿ. ಆತ ಹಮ್ಜಾ ಆಗಲು ಒಪ್ಪಿಕೊಂಡಿದ್ದು ಹೇಗೆ? ಆತನನ್ನು ಈ ಸೀಕ್ರೆಟ್ ಮಿಷನ್ಗೆ ಆಯ್ಕೆ ಮಾಡಿಕೊಂಡಿದ್ದು ಹೇಗೆ ಎಂಬಿತ್ಯಾದಿ ವಿಷಯಗಳನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಸಿನಿಮಾ ರಕ್ತಸಿಕ್ತವಾಗಿರಲಿದೆ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿದೆ.
‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಪಾಕಿಸ್ತಾನಕ್ಕೆ ತೆರಳುತ್ತಾರೆ. ಅಲ್ಲಿ ಪಾಕಿಸ್ತಾನದವರಂತೆ ಇದ್ದು, ಸ್ಪೈ ಆಗಿ ಕೆಲಸ ಮಾಡುತ್ತಾರೆ. ಸಿನಿಮಾ ಭರ್ಜರಿ ಆ್ಯಕ್ಷನ್ಗಳನ್ನು ಒಳಗೊಂಡಿತ್ತು. ಕಂದಾಹಾರ್ ಹೈಜ್ಯಾಕ್, ಮುಂಬೈ ದಾಳಿ ಇತ್ಯಾದಿ ವಿಷಯಗಳನ್ನು ಒಳಗೊಂಡಿತ್ತು.
For More Updates Join our WhatsApp Group :




