ಮಹಿಳೆಯರ ಆರೋಗ್ಯದಲ್ಲಿ ಬ್ರಾ ಪಾತ್ರ.
ಮಹಿಳೆಯರ ದಿನನಿತ್ಯದ ಉಡುಪಿನಲ್ಲಿ ಬ್ರಾ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಗಾತ್ರದ ಬ್ರಾ ಧರಿಸುವುದು ದೇಹದ ಆಕಾರವನ್ನು ಕಾಪಾಡಲು ಹಾಗೂ ಆರಾಮ ನೀಡಲು ಸಹಾಯ ಮಾಡುತ್ತದೆ. ಆದರೆ ರಾತ್ರಿ ಮಲಗುವಾಗ ಬ್ರಾ ಧರಿಸಬೇಕೇ ಅಥವಾ ಬೇಡವೇ ಎಂಬ ಅನುಮಾನ ಹಲವಾರು ಮಹಿಳೆಯರನ್ನು ಕಾಡುತ್ತದೆ. ತಜ್ಞರ ಪ್ರಕಾರ ರಾತ್ರಿ ವೇಳೆ ಬ್ರಾ ಧರಿಸಿ ಮಲಗುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆ ಅಲ್ಲ. ಬಿಗಿಯಾದ ಬ್ರಾ ಧರಿಸಿ ಮಲಗುವುದರಿಂದ ಬೆವರು ಬರುತ್ತದೆ ಇದು ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕಿನ ಅಪಾಯ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಚರ್ಮದಲ್ಲಿ ಉರಿ, ದದ್ದು, ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಈ ಭಾಗದ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಹೆಚ್ಚಿನ ಜಾಗ್ರತೆ ಅಗತ್ಯವೆಂದು ತಜ್ಞರು ಹೇಳುತ್ತಾರೆ. ಹಾಗಾದರೆ ಬ್ರಾ ತೆಗೆದು ಮಲಗುವುದು ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ತಿಳಿದುಕೊಳ್ಳಿ.
ದಿನಪೂರ್ತಿ ಬಿಗಿಯಾದ ಬ್ರಾ ಧರಿಸಿ ನಂತರ ರಾತ್ರಿ ಅದನ್ನು ತೆಗೆದು ಮಲಗುವುದು ಉತ್ತಮ. ಇಲ್ಲದಿದ್ದರೆ ಚರ್ಮಕ್ಕೆ ಗಾಳಿ ತಲುಪದೆ ತೇವಾಂಶ ಹೆಚ್ಚಾಗಿ ಚರ್ಮ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಅಧಿಕವಾಗುತ್ತದೆ. ಹೆಚ್ಚು ಸಮಯ ಬ್ರಾ ಧರಿಸುವುದರಿಂದ ಚರ್ಮದ ಮೇಲೆ ಕಪ್ಪು ಮಚ್ಚೆಗಳು ಕೂಡ ಕಾಣಿಸಿಕೊಳ್ಳಬಹುದು. ತಜ್ಞರ ಪ್ರಕಾರ ಬಿಗಿಯಾದ ಬ್ರಾ ಧರಿಸಿ ರಾತ್ರಿ ಮಲಗುವುದರಿಂದ ಆ ಜಾಗದಲ್ಲಿ ಸುತ್ತಲೂ ರಕ್ತಪ್ರಸರಣ ಸರಿಯಾಗಿ ನಡೆಯದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ನೋವು, ಉಬ್ಬರ ಉಂಟಾಗಬಹುದು. ಜೊತೆಗೆ ಇದು ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಬಿಗಿಯಾದ ಉಡುಪುಗಳಿಂದ ಉಷ್ಣತೆ ಮತ್ತು ಬೆವರು ಹೆಚ್ಚಾಗಿ ನಿದ್ರೆ ಸರಿಯಾಗಿ ಆಗದಿರಬಹುದು. ವೈದ್ಯಕೀಯವಾಗಿ ಹೇಳುವುದಾದರೆ, ಬಹುತೇಕ ಸಂದರ್ಭಗಳಲ್ಲಿ ರಾತ್ರಿ ಬ್ರಾ ತೆಗೆದು ಮಲಗುವುದು ದೇಹಕ್ಕೆ ಹೆಚ್ಚು ಆರಾಮಕರ ಎಂದು ತಜ್ಞರು ಹೇಳುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಸಡಿಲವಾದ ಬ್ರಾ ಬಳಸಬಹುದು.
ಬ್ರಾ ಧರಿಸಿ ಮಲಗಿದರೆ ಬ್ರೆಸ್ಟ್ ಕ್ಯಾನ್ಸರ್ ಬರುತ್ತಾ?
ಕೆಲವರು ಬ್ರಾ ಧರಿಸಿ ಮಲಗುವುದರಿಂದ ಬ್ರೆಸ್ಟ್ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದು ನಂಬುತ್ತಾರೆ. ಆದರೆ ಈ ಕುರಿತು ಸ್ಪಷ್ಟವಾದ ವೈಜ್ಞಾನಿಕ ಸಾಕ್ಷ್ಯ ಇನ್ನೂ ಲಭ್ಯವಿಲ್ಲ. ಆದರೂ ದೇಹದ ಆರಾಮಕ್ಕಾಗಿ ರಾತ್ರಿ ಬ್ರಾ ತೆಗೆದು ಮಲಗುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
ಈ ಸಲಹೆಗಳನ್ನು ತಪ್ಪದೆ ಪಾಲಿಸಿ
- ಸರಿಯಾದ ಗಾತ್ರದ ಬ್ರಾ ಆಯ್ಕೆ ಮಾಡಿ
- ತುಂಬಾ ಬಿಗಿಯಾದ ಬ್ರಾಗಳನ್ನು ದಿನಪೂರ್ತಿ ಧರಿಸಬೇಡಿ
- ರಾತ್ರಿ ಸಡಿಲ ಉಡುಪು ಧರಿಸಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ
- ಚರ್ಮ ಸ್ವಚ್ಛವಾಗಿ ಮತ್ತು ಒಣಗಿರಲಿ
For More Updates Join our WhatsApp Group :




