ಗುಲಬರ್ಗಾ ವಿವಿ ಜಮೀನಿಗೆ ಸರ್ಕಾರದ ಕಣ್ಣು.

ಗುಲಬರ್ಗಾ ವಿವಿ ಜಮೀನಿಗೆ ಸರ್ಕಾರದ ಕಣ್ಣು.

 18 ಇಲಾಖೆಗಳು 374 ಎಕರೆ ಜಮೀನು ಬೇಡಿಕೆ.

ಕಲಬುರಗಿ: ಕಲ್ಯಾಣ‌ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಲಿ ಅಂತ ನೂರಾರು ಎಕರೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಆದರೆ ಇದೀಗ ಅದೇ ನೂರಾರು ಎಕರೆ ಜಮೀನಿನ ಮೇಲೆ ವಿವಿಧ ಸರ್ಕಾರಿ ಇಲಾಖೆಗಳ ಕಣ್ಣು ಬಿದಿದೆ‌. ವಿವಿಯ ಜಾಗದಲ್ಲೇ ಬಸ್ ನಿಲ್ದಾಣ, ಕ್ರಿಕೆಟ್ ಕ್ರಿಡಾಂಗಣ ಸೇರಿದಂತೆ ಹಲವು ಇಲಾಖೆಗಳು ಜಮೀನು ಕೇಳಿವೆ. ಇದು ವಿವಿ ಹಾಗೂ ರಾಜ್ಯ ಸರ್ಕಾರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ವಿಶ್ವವಿದ್ಯಾಲಯದ ಭೂಮಿ ಮೇಲೆ ಸರ್ಕಾರದ ಕೆಂಗಣ್ಣು

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಬೇಕು ಅಂತಾ, ರಾಜ್ಯ ಸರ್ಕಾರ 1989ರಲ್ಲಿ ಕಲಬುರಗಿ ಹೊರವಲಯದ ಸೇಡಂ ರಸ್ತೆಯಲ್ಲಿ 794 ಎಕರೆ ಪ್ರದೇಶದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಆರಂಭಿಸಿತ್ತು. ಏಷ್ಯಾದಲ್ಲೇ ಅತೀ ದೊಡ್ಡ ಕ್ಯಾಂಪಸ್ ಎನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದಾದ ಬಳಿಕ ಅದೇ ವಿಶ್ವವಿದ್ಯಾಲಯದ ಭೂಮಿ ಮೇಲೆ ಸರ್ಕಾರದ ಕೆಂಗಣ್ಣು ಬಿಳುತ್ತಲೇ ಇದೆ.‌ ಈಗಾಗಲೇ ಇಎಸ್​ಐ ಆಸ್ಪತ್ರೆಗಾಗಿ 150 ಎಕರೆ ಜಮೀನನ್ನ ಸರ್ಕಾರ ತೆಗೆದುಕೊಂಡಿದೆ. ಅದಾದ ಬಳಿಕ ಇದೀಗ ಮತ್ತೆ ವಿವಿಧ ಇಲಾಖೆಗಳ ಕಣ್ಣು ಬಿದ್ದಿದೆ.

ಇನ್ನುಳಿದ ಜಮೀನಿನ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ, ಕೆಕೆಆರ್​ಡಿ ಕೇಂದ್ರ ಕಚೇರಿ ಸ್ಥಾಪನೆಗಾಗಿ 20 ಎಕರೆ, ಏಮ್ಸ್ ಆಸ್ಪತ್ರೆಗೆ 150 ಎಕರೆ ಅಗ್ನಿಶಾಮಕ ಹಾಗೂ ಸ್ಯಾಟ್ ಲೈಟ್ ಬಸ್ ನಿಲ್ದಾಣಕ್ಕಾಗಿ 8 ಎಕರೆ ಜಮೀನು ನೀಡುವಂತೆ ಒಟ್ಟು 18 ಸರ್ಕಾರಿ ಇಲಾಖೆಗಳು 374 ಎಕರೆ ಜಮೀನು ನೀಡುವಂತೆ ಗುಲಬರ್ಗಾ ವಿವಿಗೆ ಆಯಾ ಇಲಾಖೆ ಮುಖ್ಯಸ್ಥರು ಪತ್ರ ಬರೆದಿದ್ದಾರೆ.

ಇನ್ನು ದುರಂತ ಅಂದರೆ ವಿಶ್ವವಿದ್ಯಾಲಯಕ್ಕೆ ಜಮೀನು ನೀಡಿದ ರೈತರೇ ಹೆಚ್ಷುವರಿ ಪರಿಹಾರಕ್ಕಾಗಿ ನ್ಯಾಯಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಅದೇ ಜಮೀನು ಪಡೆಯಲು ಸರ್ಕಾರದ ವಿವಿಧ ಇಲಾಖೆಗಳು ನಾ ಮುಂದು, ತಾ ಮುಂದು ಅಂತಾ ರೇಸಿಗೆ ಬಿದಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ವಿವಿ ಸಿಂಡಿಕೇಟ್ ಮುಂದಿನ ದಿನಗಳಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕಾದುನೋಡಬೇಕಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *