ಬುರ್ಖಾ ಧರಿಸಿ 120 ಗ್ರಾಂ ಚಿನ್ನಾಭರಣ ಕದ್ದ ಮಹಿಳೆ ಬಂಧನ.

ಬುರ್ಖಾ ಧರಿಸಿ 120 ಗ್ರಾಂ ಚಿನ್ನಾಭರಣ ಕದ್ದ ಮಹಿಳೆ ಬಂಧನ.

ತುಂಗಾ ನಗರ ಪೊಲೀಸರ ಬಲೆಗೆ ಬಿದ್ದ ಕಿಲಾಡಿ ಕಳ್ಳಿ

ಶಿವಮೊಗ್ಗ: ನಗರದ ಮದುವೆ ಸಮಾರಂಭಗಳಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ತುಂಗಾ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬುರ್ಖಾ ಧರಿಸಿ, ವ್ಯಾನಿಟಿ ಬ್ಯಾಗ್ ಹಿಡಿದು ಗಪ್‌ಚುಪ್ ಆಗಿ ಚಿನ್ನಾಭರಣ ಎಗರಿಸುತ್ತಿದ್ದ ಸುಳೆಬೈಲು ನಿವಾಸಿ ರುಕ್ಸಾರ್ ಫಿರ್ದೋಸ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಇಲಿಯಾಜ್ ನಗರದ ಪ್ರಸಿದ್ಧ ‘ಶಾದಿ ಮಹಲ್’ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಕಳ್ಳತನಗಳು ವರದಿಯಾಗುತ್ತಿದ್ದವು. ಮದುವೆಗೆ ಬಂದವರು ತಮ್ಮ ಆಭರಣಗಳನ್ನು ಬ್ಯಾಗ್‌ನಲ್ಲಿ ಇಡುವುದನ್ನೇ ಸಂಚು ಹೂಡಿ ಕಾಯುತ್ತಿದ್ದ ಈ ಮಹಿಳೆ, ಕ್ಷಣಾರ್ಧದಲ್ಲಿ ಅವುಗಳನ್ನು ಎಗರಿಸಿ ಪರಾರಿಯಾಗುತ್ತಿದ್ದಳು.ಕಳೆದ ಒಂದು ತಿಂಗಳ ಹಿಂದೆ ನಡೆದ ಮದುವೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಹಗಲಿರುಳು ಪರಿಶೀಲಿಸಿದಾಗ, ಆಕೆಯ ಕೈಯಲ್ಲಿದ್ದ ವಿಶಿಷ್ಟವಾದ ವ್ಯಾನಿಟಿ ಬ್ಯಾಗ್ ಕಳ್ಳಿಯನ್ನು ಪತ್ತೆಹಚ್ಚಲು ಪ್ರಮುಖ ಸುಳಿವು ನೀಡಿತು.

ಮದುವೆ ಮನೆಗೆ ಚಿನ್ನಾಭರಣ ಹಾಕಿಕೊಂಡು ಬರುವ ಜನರನ್ನು ಇವಳು ವಾಚ್ ಮಾಡುತ್ತಿದ್ದಳು. ಅವರು ಚಿನ್ನಾಭರಣ ಬ್ಯಾಗ್ ನಲ್ಲಿ ಇಡುವುದನ್ನು ಗಮನಿಸಿದ ಬಳಿಕ ಅದನ್ನು ಗಪ್ ಚುಪ್ ಆಗಿ ಬುರ್ಖಾ ಹಾಕಿಕೊಂಡು ಬಂದು ಎಗರಿಸಿಕೊಂಡು ಹೋಗುತ್ತಿದ್ದಳು.ಕೆಲವು ಸಂದರ್ಭದಲ್ಲಿ ಇವಳ ಕಳ್ಳತನ ಮಾಡುವಾಗ ಸ್ಥಳೀಯರಿಗೆ ಸಿಕ್ಕಿದ್ದಾಳೆ. ಅಲ್ಲಿರುವ ಜನರು ಮಹಿಳೆ ಅಂತಾ ಅನುಕಂಪ ತೋರಿಸಿ ವಾರ್ನ್ ಮಾಡಿ ಬಿಟ್ಟು ಕಳಿಸಿದ್ದಾರೆ. ಇದರ ಬಳಿಕವೂ ಈ ಕಳ್ಳಿಯ ನಡವಳಿಕೆ ಬದಲು ಆಗಲಿಲ್ಲ. ಮತ್ತೆ ಇದೇ ಕಳ್ಳತನ ಮುಂದುವರೆಸಿದ್ದಳು. ಇತ್ತೀಚೆಗೆ ಮತ್ತೆ ನಾಲ್ಕು ಕಳ್ಳತನ ಪ್ರಕರಣವು ದಾಖಲು ಆಗಿದ್ದವು. ಈ ಕಳ್ಳತನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದಾಗ ಈ ಕಿಲಾಡಿ ಕಳ್ಳಿಯು ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹೀಗೆ ಮಹಿಳೆಯಾಗಿ ಮದುವೆ ಸಮಾರಂಭದಲ್ಲಿ ಎಂಟ್ರಿಕೊಟ್ಟು ಚಿನ್ನಾಭರಣ ಕದ್ದುಕೊಂಡು ಹೋಗುತ್ತಿದ್ದಳು ಎಂದು ಮ್ಯಾರೇಜ್ ಹಾಲ್ ಮಾಲೀಕ ಮಹ್ಮದ್ ಜುಬೇಲ್ ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *