ಅಪ್ರಾಪ್ತ ಸೇರಿ 8 ಆರೋಪಿಗಳ ಬಂಧನ.
ಆನೇಕಲ್ : ಆನೇಕಲ್‌ನಲ್ಲಿ ಕಿಡ್ನ್ಯಾಪ್ ಆಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ತಮಿಳುನಾಡಿನಲ್ಲಿ ಶವವಾಗಿ ಪತ್ತೆ ಪ್ರಕರಣಕ್ಕೆ ಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಠಾಣೆ ಪೊಲೀಸರಿಂದ ಓರ್ವ ಅಪ್ರಾಪ್ತ ಸೇರಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಮೋಹನ್ ಬಾಬು, ತೇಜಸ್, ದರ್ಶನ್, ಲಿಖಿತ್, ನಿಖಿಲ್, ಆನಂದ್, ಪ್ರಶಾಂತ್ ಮತ್ತು ಓರ್ವ ಅಪ್ರಾಪ್ತ ಬಂಧಿತರು. ಆರೋಪಿಗಳು ಕಿಡ್ನ್ಯಾಪ್ ಮಾಡಲು ಬಳಸಿದ್ದ ಹುಂಡೈ ಕಾರನ್ನು ವಶಕ್ಕೆ ಪಡೆಯಲಾಗಿದೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿ ಕೋರ್ಟ್ಗೆ ಹಾಜರುಪಡಿಸಲಾಗಿದೆ.
ತಾನೂ ಆಸೆಪಟ್ಟ ಯುವತಿಸಿಗಲಿಲ್ಲವೆಂದು ದ್ವೇಷ
ಮೃತ ಗೋಪಾಲ್ ಮತ್ತು ಆರೋಪಿ ಮೋಹನ್ ಬಾಬು ಮುಂಚೆ ಜೊತೆಯಾಗಿಯೇ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಆದರೆ ಹತ್ತು ವರ್ಷಗಳ ಹಿಂದೆ ಗೋಪಾಲ್ ಸ್ವಾತಿ ಎಂಬ ಯುವತಿಯನ್ನು ವಿವಾಹವಾಗಿದ್ದು, ಆರೋಪಿ ಮೋಹನ್ ಬಾಬುಗೆ ದ್ವೇಷಕ್ಕೆ ಕಾರಣವಾಗಿತ್ತು. ಗೋಪಾಲ್ ಮದುವೆ ಆದ ಸ್ವಾತಿಯನ್ನು ಮದುವೆ ಆಗಲು ಆರೋಪಿ ಮೋಹನ್ ಬಾಬು ಆಸೆ ಪಟ್ಟಿದ್ದ. ಆದರೆ ಗೋಪಾಲ್ ಹಿರಿಯರ ಸಮ್ಮುಖದಲ್ಲಿ ಮದುವೆ ಆಗಿದ್ದ. ಮದುವೆ ಬಳಿಕ ಇಬ್ಬರ ನಡುವೆ ವೈಷಮ್ಯ ಮೂಡಿತ್ತು. ಜೊತೆಗೆ ವ್ಯವಹಾರದಲ್ಲೂ ಗೋಪಾಲ್ ಚೆನ್ನಾಗಿ ಬೆಳೆಯುವುದನ್ನು ಸಹಿಸದ ಮೋಹನ್ ಬಾಬು ಎರಡು ವರ್ಷದ ಹಿಂದೆ ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿ ಬಿಟ್ಟು ಕಳುಹಿಸಿದ್ದ. ಅಲ್ಲದೆ ಪದೇ ಪದೇ ನನ್ನ ವ್ಯವಹಾರಗಳಿಗೆ ನೀನು ಕೈ ಹಾಕುತ್ತಿಯಾ ಎಂದು ಮೋಹನ್ ಬಾಬು ಕೊಲೆ ಬೆದರಿಕೆ ಹಾಕುತ್ತಿದ್ದರು ಗೋಪಾಲ್ ಮಾತ್ರ ಪತ್ನಿ ಬಳಿ ಹೇಳಿಕೊಂಡು ರಾಜಿ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದನಂತೆ. ಆದರೂ ಮೋಹನ್ ಬಾಬು ದ್ವೇಷವನ್ನ ಬಿಡದೆ ಕಳೆದ ಭಾನುವಾರ 25 ಲಕ್ಷ ರೂ ಸುಪಾರಿ ನೀಡಿ ಗೋಪಾಲ್ನನ್ನು ಕಿಡ್ನ್ಯಾಪ್ ಮಾಡಿಸಿ ಕೊಲೆ ಮಾಡಿಸಿದ್ದಾಗಿ ಆರೋಪಿ ಮೋಹನ್ ಬಾಬು ತಪ್ಪೊಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
For More Updates Join our WhatsApp Group :




