‘Dhurandhar 2’ ನಟ ಟಾಂಗ್: ‘Toxic’ಬಿಡುಗಡೆ ಮುಂದೂಡಿದಿದೆ

 'Dhurandhar 2' ನಟ ಟಾಂಗ್: ‘Toxic’ಬಿಡುಗಡೆ ಮುಂದೂಡಿದಿದೆ

ರಣವೀರ್ ಸಿಂಗ್ ಸಿನಿಮಾ ಮಾರ್ಚ್ 19 ರಂದು

ರಣವೀರ್ ಸಿಂಗ್ ನಟನೆಯ ಆಕ್ಷನ್ ಥ್ರಿಲ್ಲರ್ ‘ಧುರಂಧರ್ 2’ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಅದೇ ದಿನ ಯಶ್ ಅವರ ‘ಟಾಕ್ಸಿಕ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನಡೆಸಬೇಕಿತ್ತು. ಎರಡೂ ಚಿತ್ರಗಳು ಮಾರ್ಚ್ 19 ರಂದು ಬಿಡುಗಡೆಯಾಗಲು ನಿರ್ಧರಿಸಲಾಗಿತ್ತು. ಆದರೆ ‘ಟಾಕ್ಸಿಕ್’ ತಂಡವು ಚಿತ್ರದ ಬಿಡುಗಡೆಯನ್ನು ಜೂನ್ 4 ಕ್ಕೆ ಮುಂದೂಡಿತು. ಇದಕ್ಕೆ ಕಾರಣವಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಘರ್ಷಣೆಯಿಂದಾಗಿ ಚಿತ್ರದ ವ್ಯವಹಾರಕ್ಕೆ ತೊಂದರೆಯಾಗಬಹುದು ಎಂಬ ಕಾರಣವನ್ನು ಚಿತ್ರತಂಡ ನೀಡಿದೆ.

ಆದರೆ ಕೆಲವರು ವಿಶೇಷವಾಗಿ ಹಿಂದಿ ಮಾಧ್ಯಮಗಳು, ಯೂಟ್ಯೂಬರ್​​ಗಳು ಸಿನಿಮಾ ರಂಗದವರು ‘ಧುರಂಧರ್ 2’ ಸಿನಿಮಾಕ್ಕೆ ಹೆದರು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿದೆ ಎಂದೇ ಹೇಳುತ್ತಿದ್ದಾರೆ. ಕುಹುಕ, ವ್ಯಂಗ್ಯದ ಪೋಸ್ಟ್​​ಗಳನ್ನು ಸಹ ‘ಟಾಕ್ಸಿಕ್’ ಬಗ್ಗೆ ಕೆಲವರು ಹಂಚಿಕೊಂಡಿದ್ದಾರೆ. ಇದೀಗ ‘ಧುರಂಧರ್ 2’ ಸಿನಿಮಾದ ನಟರೊಬ್ಬರು ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮುಂದೂಡಿದ್ದಕ್ಕೆ ಟಾಂಗ್ ನೀಡಿದ್ದಾರೆ.

‘ಧುರಂಧರ್ 2’ ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರ ನಿರ್ವಹಿಸಿರುವ ರಾಕೇಶ್ ಬೇಡಿ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿರುವ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ‘ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ನಮಗೂ ಇದೆ, ಆದರೆ ನಾವು ಮಾತ್ರ ಸಿನಿಮಾ ಬಿಡುಗಡೆ ಮಾಡುತ್ತಿದ್ದೀವಿ’ ಎಂದು ಹೇಳಿದ್ದಾರೆ. ಯಶ್ ತಂಡ ‘ಟಾಕ್ಸಿಕ್’ ಬಿಡುಗಡೆ ಮುಂದೂಡಲು ನೀಡಿದ್ದ ಕಾರಣವನ್ನು ಪರೋಕ್ಷವಾಗಿ ತಮಾಷೆ ಮಾಡಿದ್ದಾರೆ.

‘ಧುರಂಧರ್ 2’ ಸಿನಿಮಾ ಅನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದು, ರಣ್ವೀರ್ ಸಿಂಗ್ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಇನ್ನು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *