ಕೊಪ್ಪಳದಲ್ಲಿ ಬಸ್ ದರೋಡೆ: 90 ಲಕ್ಷ ಮೌಲ್ಯದ ಚಿನ್ನ, ವಜ್ರಾಭರಣ ತಪಾಸಣೆಗೆ ಮೊಳಗಿದೆ

ಕೊಪ್ಪಳದಲ್ಲಿ ಬಸ್ ದರೋಡೆ: 90 ಲಕ್ಷ ಮೌಲ್ಯದ ಚಿನ್ನ, ವಜ್ರಾಭರಣ ತಪಾಸಣೆಗೆ ಮೊಳಗಿದೆ

ಊಟಕ್ಕೆ ನಿಲ್ಲಿಸಿದ ಸ್ಲೀಪರ್ ಕೋಚ್‌ನಲ್ಲಿ ಬ್ಯಾಗ್ ಕದ್ದ ಕಳ್ಳರು ಪರಾರಿ.

ಕೊಪ್ಪಳ: ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್‌ನಲ್ಲಿ 90 ಲಕ್ಷ ಮೌಲ್ಯದ ಚಿನ್ನ, ವಜ್ರಾಭರಣವಿದ್ದ ಬ್ಯಾಗ್ ದರೋಡೆಯಾಗಿದೆ. ಕೊಪ್ಪಳ ಹೊರಹೊಲಯದಲ್ಲಿ ಊಟಕ್ಕೆಂದು ಬಸ್ ನಿಲ್ಲಿಸಿದಾಗ ಮಂಗಳೂರಿನ ಮೊಹಮ್ಮದ್, ಇರ್ಷಾದ್​ ಎಂಬುವರಿಗೆ ಸೇರಿದ ಚಿನ್ನ, ವಜ್ರಾಭರಣವಿದ್ದ ಚೀಲವನ್ನು ಕದ್ದು ಪರಾರಿಯಾಗಿದ್ದಾರೆ. ಬಸ್‌ನಲ್ಲಿ ಮಲಗಿದ್ದ ಪ್ರಯಾಣಿಕನೋರ್ವ ಚಿನ್ನ ಬ್ಯಾಗ್​ ಹಿಡಿದು ಪರಾರಿಯಾಗುತ್ತಿರುವ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಪೊಲೀಸರು ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಸ್ ಊಟಕ್ಕೆ ನಿಲ್ಲಿಸಿದಾಗ ಕೃತ್ಯ

ಈ ದರೋಡೆ ಘಟನೆ ಕೊಪ್ಪಳ ಹೊರವಲಯದಲ್ಲಿರುವ Tawa Punjab Hotel ಮುಂಭಾಗದಲ್ಲಿ ನಡೆದಿದೆ. ಮಂತ್ರಾಲಯದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್, ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡ ತವ ಪಂಜಾಬ್ ಹೊಟೇಲ್​​ ಬಳಿ ನಿಲ್ಲಿಸಿದೆ. ಆ ವೇಳೆ ಬಸ್‌ನಲ್ಲೇ ಮಲಗಿದ್ದ ಮಹಮ್ಮದ್ ಮತ್ತು ಇರ್ಷಾದ್ ಎಂಬ ಪ್ರಯಾಣಿಕರ ಬಳಿಯಿದ್ದ ಬಂಗಾರದ ಚೀಲವನ್ನು ಖದೀಮ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಇನ್ನು  ಚಿನ್ನಾಭರಗಳನ್ನು ಯುನಿಸೆಫ್ ಗೋಲ್ಡ್ ಕಂಪನಿಗೆ ಸೇರಿದ್ದು ಎನ್ನುವುದು ತಿಳಿದುಬಂದಿದೆ.

ನಾಲ್ವರು ಸೇರಿಕೊಂಡು ದರೋಡೆ

ಖದೀಮರ ಪೈಕಿ ಓರ್ವ ಅದೇ ಬಸ್​​ನಲ್ಲಿ ಇದ್ದರೆ ಇನ್ನುಳಿದ ದರೋಡೆಕೋರರು ಬೊಲೆರೋ ವಾಹನದಲ್ಲಿ ಬಸ್ ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಹಮ್ಮದ್ ಮತ್ತು ಇರ್ಷಾದ್ ಚಿನ್ನಾಭರಣದ ಚೀಲವನ್ನು ಎಲ್ಲಿಂದ ತಂದಿದ್ದಾರೆ ಎನ್ನುವುದನ್ನು ಮೊದಲೇ ನೋಡಿದ್ದಾರೆ. ಹೀಗಾಗಿ ಅವರು ಇದ್ದ ಬಸ್ ಫಾಲೋ ಮಾಡಿಕೊಂಡು ಬಂದಿದ್ದು, ಬಳಿಕ ಸಿಂಧನೂರಿನಲ್ಲಿ ಓರ್ವ ಖದೀಮ ಬಸ್ ಏರಿದ್ದು, ಇನ್ನುಳಿದವರು ಬಸ್ ಫಾಲೋ ಮಾಡಿಕೊಂಡು ಬಂದು ಈ ಕೃತ್ಯ ಎಸಗಿದ್ದಾರೆ. ಇನ್ನು ಮಂತ್ರಾಲಯದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಮ್ಮದ್ ಮತ್ತು ಇರ್ಷಾದ್ ಎಂಬವರು ಚಿನ್ನದ ಚೀಲದ ಮೇಲೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಇಷ್ಟೊಂದು ಮೌಲ್ಯದ ಚಿನ್ನ, ವಜ್ರಾಭರಣವನ್ನು ಎಲ್ಲಿಂದ ತೆಗೆದುಕೊಂಡು ಹೋಗುತ್ತಿದ್ದರು?  ಯಾರಿಂದ ತೆಗೆದುಕೊಂಡು ಹೋಗಿ ಯಾರಿಗೆ ಕೊಡುತ್ತಿದ್ದರು? ಹೀಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *