ಹೋಟೆಲ್ ಬಿಲ್ಗಳಲ್ಲಿ ಗ್ಯಾಸ್ ಶುಲ್ಕ!

ಹೋಟೆಲ್ ಬಿಲ್ಗಳಲ್ಲಿ ಗ್ಯಾಸ್ ಶುಲ್ಕ!

ಎಲ್‌ಪಿಜಿ ಕೊರತೆ ಮತ್ತು ಮಧ್ಯಪ್ರಾಚ್ಯದ ಯುದ್ಧ ಕಾರಣ ಬಿಲ್ಗಳಿಗೆ ಹೆಚ್ಚುವರಿ ‘ಗ್ಯಾಸ್ ಶುಲ್ಕ’ ಸೇರ್ಪಡೆ.

ಬೆಂಗಳೂರು : ನಾವು ಯಾವುದೇ ದುಬಾರಿ ಹೋಟೆಲ್‌ಗೆ ಹೋದಾಗ ಬಿಲ್​ನ ಕೊನೆಯಲ್ಲಿ ಜಿಎಸ್‌ಟಿ ಶುಲ್ಕವನ್ನೂ ಸೇರಿಸುವುದು ಸಾಮಾನ್ಯ. ಆದರೆ ಈಗ, ಅದರ ಜೊತೆ ಮತ್ತೊಂದು ಶುಲ್ಕವನ್ನು ಸೇರಿಸುತ್ತಿದ್ದಾರೆ. ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ವ್ಯತ್ಯಯ, ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ವ್ಯವಸ್ಥಾಪಕರು ಗ್ರಾಹಕರ ಮೇಲೆ ಆ ಹೊರೆಯನ್ನು ಹಾಕುತ್ತಿದ್ದಾರೆ. ಗ್ಯಾಸ್ ಪೂರೈಕೆ ಸಮಸ್ಯೆ ಹೆಸರಿನಲ್ಲಿ ತಿಂಡಿಯ ಬಿಲ್‌ಗೆ ಹೆಚ್ಚುವರಿ ‘ಗ್ಯಾಸ್ ಶುಲ್ಕ ’ ಸೇರಿಸುತ್ತಿದ್ದಾರೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಈ ರೀತಿಯ ಘಟನೆ ಬೆಳಕಿಗೆ ಬಂದಿದೆ.

ಚೆನ್ನೈಯಲ್ಲಿ ತಿಂಡಿ ತಿನ್ನಲು ಹೋಟೆಲ್‌ಗೆ ತೆರಳಿದ ಗ್ರಾಹಕರೊಬ್ಬರು ಇಡ್ಲಿ ಮತ್ತು ವಡಾ ತಿಂದಿದ್ದಾರೆ. ನಂತರ ಬಿಲ್ ಕೇಳಿದಾಗ, ಹೋಟೆಲ್ ಮ್ಯಾನೇಜರ್ ಬಿಲ್‌ನಲ್ಲಿ ತಿಂಡಿ ಜೊತೆಗೆ ಗ್ಯಾಸ್ ಶುಲ್ಕವನ್ನು ಜಿಎಸ್‌ಟಿ ಜತೆ ಸೇರಿಸಿದ್ದಾರೆ. ‘ಗ್ಯಾಸ್ ಶುಲ್ಕ – 9.52 ರೂ.’ ಎಂದು ನಮೂದಾಗಿದ್ದುದನ್ನು ನೋಡಿ ಗ್ರಾಹಕ ಆಘಾತಕ್ಕೊಳಗಾಗಿದ್ದಾರೆ. ನಂತರ, ಅವರು ಬಿಲ್ ಪಾವತಿಸಿ ಅದರ ಫೋಟೋ ತೆಗೆದು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ, ‘‘ಇದು ವಿಚಾರ. ಇಂಥಾ ದಿನ ಬರಬಹುದೆಂದು ನಾವು ಊಹಿಸಿದ್ದೆವಾ’’ ಎಂದು ಅವರು ಪ್ರಶ್ನಿಸಿದ್ದಾರೆ. ಈ ಫೋಟೊ ಸದ್ಯ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿಯೂ ಅದೇ ಕಥೆ!

ಸದ್ಯ ಹೋಟೆಲ್​ ಬಿಲ್​ಗಳಲ್ಲಿ ಗ್ಯಾಸ್ ಶುಲ್ಕಗಳಿಗೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಇವುಗಳನ್ನು ನೋಡಿದ ನೆಟಿಜನ್‌ಗಳು ಹೋಟೆಲ್ ಆಡಳಿತ ಮಂಡಳಿಗಳ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಕೊರತೆ ಇದ್ದರೆ, ಅವರು ಮುಂಚಿತವಾಗಿ ಸ್ಟಾಕ್ ತರಬೇಕಿತ್ತು. ಅದು ಬಿಟ್ಟು ಆ ಹೊರೆಯನ್ನು ಗ್ರಾಹಕರ ಮೇಲೆ ಏಕೆ ಹಾಕಬೇಕು ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಇರಾನ್-ಇಸ್ರೇಲ್ ಯುದ್ಧ, ಮಧ್ಯಪ್ರಾಚ್ಯ ಸಂಘರ್ಷ ಭಾರತದ ಹೋಟೆಲ್​​ಗಳ ಬಿಲ್​ಗಳಲ್ಲಿ ‘ಗ್ಯಾಸ್ ಶುಲ್ಕ’ ಸೇರ್ಪಡೆಗೆ ಕಾರಣವಾಗಿದ್ದು ಸುಳ್ಳಲ್ಲ!

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *