‘ಧುರಂಧರ್ 2’ ಕ್ಲ್ಯಾಶ್ ತಪ್ಪಿದರೂ ಡಜನ್ ಸಿನಿಮಾಗಳ ಸ್ಪರ್ಧೆ ಎದುರಿನಲ್ಲಿ ಇದೆ.
‘ಟಾಕ್ಸಿಕ್’ ಸಿನಿಮಾ ರಿಲೀಸ್ಗೆ ವಿಘ್ನ ಎದುರಾಗಿತ್ತು. ಇರಾನ್ ಹಾಗೂ ಇಸ್ರೇಲ್ ಯುದ್ಧದ ಕಾರಣ ನೀಡಿ ಇವರು ಸಿನಿಮಾನ ಮುಂದಕ್ಕೆ ಹಾಕಿಕೊಂಡರು. ಇದರಿಂದ ‘ಧುರಂಧರ್ 2’ ಸಿನಿಮಾ ಜೊತೆಗಿನ ಕ್ಲ್ಯಾಶ್ ಮಿಸ್ ಆಗಿದೆ. ಆದರೆ, ಕೆಲವು ವರದಿಗಳ ಪ್ರಕಾರ ‘ಟಾಕ್ಸಿಕ್’ ಸಿನಿಮಾ ಈಗ ಡಜನ್ ಸಿನಿಮಾಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ‘ಟಾಕ್ಸಿಕ್’ ತುಂಬಾನೇ ದೊಡ್ಡ ಚಾಲೆಂಜ್ ಎದುರಿಸುವ ಸೂಚನೆ ಪಡೆದಿದೆ.
‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಯಾವುದಾದರೂ ಒಂದು ಸಿನಿಮಾ ಮುಂದಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿ ಆಗಿತ್ತು. ಕೊನೆಗೆ, ‘ಟಾಕ್ಸಿಕ್’ ತಂಡದವರು ಚಿತ್ರವನ್ನು ಜೂನ್ 4ಕ್ಕೆ ಮುಂದಕ್ಕೆ ಹಾಕಿಕೊಂಡರು. ಯಶ್ ಈಗ 11 ಸಿನಿಮಾಗಳಿಂದ ಸ್ಪರ್ಧೆ ಎದುರಿಸಬೇಕಿದೆ.‘ಟಾಕ್ಸಿಕ್’ ಸಿನಿಮಾದ ಬಜೆಟ್ ದೊಡ್ಡದಿದೆ. ಹೀಗಾಗಿ, ಈ ಸಿನಿಮಾ ಕನಿಷ್ಠ ಎರಡು ತಿಂಗಳು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಬೇಕಾದ ಅನಿವಾರ್ಯತೆ ಇದೆ. ಆದರೆ, ಈ ಎರಡು ತಿಂಗಳಲ್ಲಿ ಬರೋಬ್ಬರಿ 12 ಚಿತ್ರಗಳು ಬರುತ್ತಿವೆ.
ಜೂನ್ 26ಕ್ಕೆ ‘ಕ್ಯಾರಿ ಆನ್ ಜಟ್ಟಾ 4’ ತೆರೆಗೆ ಬರಲಿದೆ. ಜುಲೈ 1ರಂದು ‘ಮಿನೀಯನ್ 2’, ಜುಲೈ 3ರಂದು ‘ಧಮಾಲ್ 4’, ಜುಲೈ 9ರಂದು ‘ಮೋನಾ’, ಜುಲೈ 10ರಂದು ‘ಆಲ್ಫಾ’, ಜುಲೈ 17ರಂದು ‘ದಿ ಒಡಿಸ್ಸಿ’, ಜುಲೈ 31ರಂದು ‘ಸ್ಪೈಡರ್ ಮ್ಯಾನ್, ‘ಬ್ರ್ಯಾಂಡ್ ನ್ಯೂ ಡೇ’ ತೆರೆಗೆ ಬರುತ್ತಿದೆ.
For More Updates Join our WhatsApp Group :




