ಜೋರ್ಡನ್‌ನಲ್ಲಿ ‘NTR–Neel’ ಶೂಟಿಂಗ್ ವೇಳೆ ಯುದ್ಧದ ಆತಂಕ?

ಜೋರ್ಡನ್‌ನಲ್ಲಿ ‘NTR–Neel’ ಶೂಟಿಂಗ್ ವೇಳೆ ಯುದ್ಧದ ಆತಂಕ?

ಚಿತ್ರೀಕರಣ ಮುಗಿಸಿ ಬಂದ ಬಳಿಕವೇ ಯುದ್ಧ ಆರಂಭ – ‘ಟ್ರಂಪ್ ಫ್ಲೈಟ್ ಕಳುಹಿಸುತ್ತಾರೆ’ ಎಂದ ಭುವನ್ ಗೌಡ ಫನ್

ಪ್ರಶಾಂತ್ ನೀಲ್ ಅವರು ಸದ್ಯ ಜೂನಿಯರ್ ಎನ್​​ಟಿಆರ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ದೊಡ್ಡ ಬಜೆಟ್​ ಅಲ್ಲಿ ನಿರ್ಮಾಣ ಆಗುತ್ತಿದ್ದು, ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈ ಸಿನಿಮಾ ಬಗ್ಗೆ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರು ಮಾತನಾಡಿದ್ದಾರೆ. ಇತ್ತೀಚೆಗೆ ಅವರು ಜೋರ್ಡನ್ ಶೂಟ್​​​ನಲ್ಲಿ ಭಾಗಿಯಾಗಿದ್ದಾಗಿ ರಿವೀಲ್ ಮಾಡಿದ್ದಾರೆ.

ಪ್ರಶಾಂತ್ ನೀಲ್ ಅವರು ಮುಂದಿನ ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ಉತ್ತರ ಕನ್ನಡದ ಕುಮುಟಾದಲ್ಲಿ ಶೂಟ್ ನಡೆದಿದೆ ಎಂದು ಹೇಳಲಾಗಿತ್ತು. ಆ ಬಳಿಕ ತಂಡ ವಿವಿಧ ಕಡೆಗಳಲ್ಲಿ ಚಿತ್ರೀಕರಣ ಮಾಡಿದೆ. ವಿದೇಶದಲ್ಲೂ ಶೂಟಿಂಗ್ ನಡೆದಿದೆ. ಈ ಸಿನಿಮಾ ಬಗ್ಗೆ ಈಗ ಕ್ಯಾಮೆರಾಮೆನ್ ಭುವನ್ ಗೌಡ ವಿವರಿಸಿದ್ದಾರೆ.

ಇತ್ತೀಚೆಗೆ ಭುವನ್ ಮಾಲ್ ಒಂದರಲ್ಲಿ ಅಂಗಡಿ ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ‘ಜೋರ್ಡನ್​ ಅಲ್ಲಿ ನಾವು ಶೂಟಿಂಗ್​​ಗೆ ಹೋಗಿದ್ದೆವು’ ಎಂದು ಹೇಳಿದರು ಭುವನ್. ‘ಯುದ್ಧದಿಂದ ಚಿತ್ರೀಕರಣ ನಿಂತಿತು ಎಂಬ ಮಾತಿದೆಯಲ್ಲ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನಾವು ಇಲ್ಲಿ ಬಂದು ಲ್ಯಾಂಡ್​ ಆದ ಬಳಿಕ ಯುದ್ಧ ಶುರುವಾಯಿತು’ ಎಂದು ಭುವನ್ ಹೇಳಿದರು.

‘ಯಾವುದೇ ತೊಂದರೆ ಎದುರಾಗಿಲ್ಲ ಅಲ್ಲವೇ’ ಎಂದು ಕೇಳಿದಾಗ, ‘ಟ್ರಂಪ್ ಕರೆ ಮಾಡಿದ್ರು. ಯಾವಾಗ ಹೊರಡುತ್ತೀರೋ ಆಗ ಫ್ಲೈಟ್ ಕಳಸ್ತೀನಿ ಅಂದ್ರು’ ಎಂದು ಫನ್ ಆಗಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಸಿನಿಮಾ ಹೆಸರನ್ನು ‘ಡ್ರ್ಯಾಗನ್’ ಎಂದು ಕರೆದಾಗ ಅವರು ಯಾವುದೇ ವಿರೋಧ ತೋರಿಸಿಲ್ಲ. ಹೀಗಾಗಿ, ಚಿತ್ರಕ್ಕೆ ಇದೇ ಟೈಟಲ್ ಫೈನಲ್ ಆಯಿತೇ ಎಂಬ ಪ್ರಶ್ನೆಯೂ ಮೂಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *