ಕೇಂದ್ರದಿಂದ ಸ್ಪಷ್ಟನೆ: ಕೆಲ ಗ್ರಾಹಕರಿಗೆ ಮಾತ್ರ ಅನ್ವಯ.
ನವದೆಹಲಿ : ಎಲ್ಪಿಜಿ ಗ್ರಾಹಕರು ಇಕೆವೈಸಿ ಮಾಡುವುದು ಕಡ್ಡಾಯ ಎನ್ನುವಂತಹ ಸುದ್ದಿ ಎರಡು ದಿನಗಳಿಂದ ಕೇಳಿಬರುತ್ತಿದೆ. ಇದೇ ವೇಳೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಆಧಾರ್ ಬಯೋಮೆಟ್ರಿಲ್ ದೃಢೀಕರಣ ಅಥವಾ ಇಕೆವೈಸಿಯು ಎಲ್ಲಾ ಎಲ್ಪಿಜಿ ಗ್ರಾಹಕರಿಗೂ ಕಡ್ಡಾಯವೇನಲ್ಲ. ಇಕೆವೈಸಿ ಮಾಡಿಸಿಲ್ಲದ ಎಲ್ಪಿಜಿ ಗ್ರಾಹಕರು ಮಾತ್ರ ಈ ಗ್ಯಾಸ್ ಪಡೆಯಲು ಇಕೆವೈಸಿ ಮಾಡುವುದು ಕಡ್ಡಾಯ ಎಂದು ಸಚಿವಾಲಯವು ಹೇಳಿದೆ.
ಎಲ್ಪಿಜಿ ಇಕೆವೈಸಿ ವಿಚಾರದಲ್ಲಿ ತಿಳಿಯಬೇಕಾದ ಸಂಗತಿಗಳಿವು…
- ಎಲ್ಪಿಜಿ ಗ್ರಾಹಕರು ಇದೂವರೆಗೆ ಇಕೆವೈಸಿ ಮಾಡಿಸಿಲ್ಲದೇ ಇದ್ದರೆ ಅವರು ಈಗ ಮಾಡಿಸುವುದು ಕಡ್ಡಾಯ.
- ಪಿಎಂ ಉಜ್ವಲ್ ಯೋಜನೆಯ ಫಲಾನುಭವಿಗಳು ಪ್ರತೀ ಹಣಕಾಸು ವರ್ಷಕ್ಕೆ ಒಮ್ಮೆ ಇಕೆವೈಸಿ ಅಪ್ಡೇಟ್ ಮಾಡಬೇಕು. ಅದೂ 7 ಸಿಲಿಂಡರ್ ಪೂರೈಕೆಗೆ ಸಬ್ಸಿಡಿ ಪಡೆದು, 8 ಮತ್ತು 9ನೇ ಸಿಲಿಂಡರ್ ಪಡೆಯುವಾಗ ಇಕೆವೈಸಿ ಅಪ್ಡೇಟ್ ಮಾಡಬೇಕು.
- ಪಿಎಂ ಉಜ್ವಲ್ ಯೋಜನೆಗೆ ಒಳಪಡದ ಇತರ ಎಲ್ಪಿಜಿ ಗ್ರಾಹಕರು ಒಮ್ಮೆ ಇಕೆವೈಸಿ ಮಾಡಿಸಿದ್ದರೆ ಸಾಕು, ಮತ್ತೆ ಅಪ್ಡೇಟ್ ಮಾಡುವ ಅಗತ್ಯ ಇಲ್ಲ.
- ಮನೆಯಲ್ಲೇ ಕುಳಿತು, ಉಚಿತವಾಗಿ ಇಕೆವೈಸಿಯನ್ನು ಮಾಡಬಹುದು.
ಎಲ್ಪಿಜಿ ಗ್ರಾಹಕರು ಇಕೆವೈಸಿ ಅಪ್ಡೇಟ್ ಮಾಡುವುದು ಹೇಗೆ?
ಎಲ್ಪಿಜಿ ಗ್ರಾಹಕರು ತಮ್ಮ ವಿತರಕರ ಕಚೇರಿಗೆ ಹೋಗಿ ಅಲ್ಲಿ ಬಯೋಮೆಟ್ರಿಕ್ ಆಧಾರ್ ಅಥೆಂಟಿಕೇಶನ್ ಕೊಡಬಹುದು. ಇದು ಒಂದು ವಿಧಾನ.
ಮತ್ತೊಂದು ವಿಧಾನ ಆನ್ಲೈನ್ನದ್ದು. ಆಧಾರ್ ಫೇಸ್ಆರ್ಡಿ ಆ್ಯಪ್ ಅನ್ನು ಡೌನ್ಲೋಡ್ ಮಾಡಬೇಕು. ನಿಮ್ಮ ಗ್ಯಾಸ್ನ ಕಂಪನಿಯ ಆ್ಯಪ್ ಅನ್ನೂ ಡೌನ್ಲೋಡ್ ಮಾಡಬೇಕು. ಉದಾಹರಣೆಗೆ, ಇಂಡೇನ್ ಗ್ರಾಹಕರು ಐಒಸಿಎಲ್ನ ಆ್ಯಪ್ ಡೌನ್ಲೋಡ್ ಮಾಡಬೇಕು. ಹಾಗೆಯೇ, ಬಿಪಿಸಿಲ್ ಅಥವಾ ಎಚ್ಪಿಸಿಎಲ್ ಬಳಕೆದಾರರು ಆಯಾ ಕಂಪನಿಗಳ ಆ್ಯಪ್ಗಳನ್ನು ಬಳಸಿ ಬಯೋಮೆಟ್ರಿಕ್ ಆಧಾರ್ ಅಥೆಂಟಿಕೇಶನ್ ಮಾಡಿಸಬಹುದು.
For More Updates Join our WhatsApp Group :




