ಹಾಲು ಉತ್ಪಾದಕರಿಗೆ ಕೋಮುಲ್ ಯುಗಾದಿ ಗಿಫ್ಟ್.

ಹಾಲು ಉತ್ಪಾದಕರಿಗೆ ಕೋಮುಲ್ ಯುಗಾದಿ ಗಿಫ್ಟ್.

ಲೀಟರ್ ಹಾಲಿಗೆ 2 ರೂ. ಹೆಚ್ಚಳ ಘೋಷಣೆ.

ಕೋಲಾರ : ಇತ್ತೀಚೆಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಯುಗಾದಿ ಉಡುಗೊರೆ ನೀಡಿತ್ತು. ಇದೀಗ ಅದರಂತೆ ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ  ಕೂಡ ಹಾಲು ಉತ್ಪಾದಕರಿಗೆ ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವ ಮೂಲಕ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್‌ ನೀಡಿದೆ.

ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ

ಯುಗಾದಿ ಹಬ್ಬಕ್ಕೆ ಕೋಲಾರ ಜಿಲ್ಲಾ ಹಾಲು ಉತ್ಪಾದಕರಿಗೆ ಕೋಮುಲ್​ ಕೊಡುಗೆ ನೀಡಿದೆ. ಲೀಟರ್​ ಹಾಲಿಗೆ 2 ರೂಪಾಯಿ ಹೆಚ್ಚಿಸಿದೆ. ಈ ಹಿಂದೆ ಹಾಲು ಉತ್ಪಾದಕರಿಗೆ ಲೀಟರ್‌ಗೆ 35.40 ರೂ. ನೀಡಲಾಗುತ್ತಿತ್ತು. ಇದೀಗ ಪ್ರತಿ ಲೀಟರ್‌ಗೆ 37.40 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಜೊತೆಗೆ ಹಸಿರು ಮೇವು ಬೆಳೆಯುವ ರೈತರಿಗೆ ಎಕರೆಗೆ 3 ಸಾವಿರ ರೂ ಪ್ರೋತ್ಸಾಹ ಧನ, ಹಸುಗಳಿಗೆ ವಿಮೆ 70 ಸಾವಿರದಿಂದ 80 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾಹಿತಿ ನೀಡಿದ್ದಾರೆ.

ರೈತರು ಉತ್ಪಾದಿಸುವ 1 ಲೀಟರ್ ಹಾಲಿಗೆ ಕನಿಷ್ಟ 2 ರೂ. ಹೆಚ್ಚಳ ಮಾಡಬೇಕು ಎಂದು ಇತ್ತೀಚೆಗೆ ಒತ್ತಾಯ ಕೇಳಿಬಂದಿತ್ತು. ಪ್ರತಿ ಲೀಟರ್ ಹಾಲು ಉತ್ಪಾದಿಸಲು ಕನಿಷ್ಠ 50 ರೂ. ವೆಚ್ಚವಾಗುತ್ತದೆ. ಇತ್ತೀಚೆಗೆ ಹಿಂಡಿ ಮತ್ತು ಬೂಸಾ ದರ ಕೂಡ 50 ಕೆಜಿ ಚೀಲಕ್ಕೆ 100 ರೂ. ಏರಿಕೆಯಾಗಿದ್ದು, ರೈತರು ಪರದಾಡು ಪರಿಸ್ಥಿತಿ ಎದುರಾಗಿದೆ.

ಕಳೆದ ವರ್ಷ ಬೇಸಿಗೆ ಆರಂಭದಲ್ಲಿ ಒಕ್ಕೂಟವು 2 ರೂ. ದರ ಹೆಚ್ಚಿಸಿದ್ದರೂ, ಸರ್ಕಾರ 4 ರೂ. ನೀಡಿದ ಬಳಿಕ ಅದರಲ್ಲಿ 2 ರೂ. ಮರುಪಡೆಯಲಾಗಿತ್ತು. ಬಳಿಕ ರೈತರು ಉತ್ಪಾದಿಸುವ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 2 ರೂ. ಹೆಚ್ಚಳ ಮಾಡುವಂತೆ ಒತ್ತಾಯಿಸಲಾಗಿತ್ತು. ಜೊತೆಗೆ ಪಶು ಆಹಾರಕ್ಕಾಗಿ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದಲೇ ಖರೀದಿಸಬೇಕು ಎಂದು ಆಗ್ರಹಿಸಲಾಗಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *