IPL 2026: RCB vs ಸನ್ರೈಸರ್ಸ್ ಹೈದರಾಬಾದ್ .

IPL 2026: RCB vs ಸನ್ರೈಸರ್ಸ್ ಹೈದರಾಬಾದ್ .

ಟಿಕೆಟ್ ಖರೀದಿ, ಸ್ಟೇಡಿಯಂ ಎಂಟ್ರಿ ಮಾಹಿತಿ.

2026 ರ ಐಪಿಎಲ್ ಮಾರ್ಚ್​ 28 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಆರ್​ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇದರ ಜೊತೆಗೆ ಉಭಯ ತಂಡಗಳ ನಡುವಿನ ಈ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದರೆ ಆರ್​ಸಿಬಿ ತನ್ನ ಮೊದಲ ಪಂದ್ಯವನ್ನು ತನ್ನ ತವರು ಮೈದಾನದಲ್ಲಿ ಆಡುತ್ತಿದೆ. ಹೀಗಾಗಿ ಅಭಿಮಾನಿಗಳು ಕೂಡ ತನ್ನ ನೆಚ್ಚಿನ ತಂಡ ಮೊದಲ ಪಂದ್ಯವನ್ನು ತವರಿನಲ್ಲಿ ಆಡುವುದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಆರ್​ಸಿಬಿ ಫ್ರಾಂಚೈಸಿ ಕೂಡ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ಟಿಕೆಟ್‌ಗಳನ್ನು ಆನ್‌ಲೈನ್, ಆಫ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?

ಆನ್‌ಲೈನ್ ಬುಕಿಂಗ್‌ಗಳಿಗಾಗಿ, ಅಭಿಮಾನಿಗಳು ಬುಕ್‌ಮೈಶೋ, ಅಥವಾ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ತಾವು ವೀಕ್ಷಿಸಬೇಕೆಂದಿರುವ ಪಂದ್ಯವನ್ನು ಆಯ್ಕೆ ಮಾಡಬೇಕು. ಆ ನಂತರ ಆಸನ ವಿಭಾಗಗಳನ್ನು ಆಯ್ಕೆ ಮಾಡಿ ಯುಪಿಐ, ಕಾರ್ಡ್‌ಗಳು ಅಥವಾ ನೆಟ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಆಯ್ಕೆಗಳನ್ನು ಬಳಸಿಕೊಂಡು ಹಣವನ್ನು ಪಾವತಿ ಮಾಡಬೇಕು. ನಂತರ ಟಿಕೆಟ್‌ಗಳು ಇಮೇಲ್ ಅಥವಾ SMS ಮೂಲಕ ಪ್ರೇಕ್ಷಕನಿಗೆ ಲಭ್ಯವಾಗುತ್ತವೆ.

ಇನ್ನು ಆಫ್​ಲೈನ್​ನಲ್ಲಿ ಟಿಕೆಟ್ ಖರೀದಿಸಲು ಬಯುಸವವರು ಅಧಿಕೃತ ಕ್ರೀಡಾಂಗಣದ ಕೌಂಟರ್‌ಗಳಲ್ಲಿ ಖರೀದಿಸಬಹುದಾಗಿದೆ. ಅಲ್ಲಿ ಅಭಿಮಾನಿಗಳು ಆಸನಗಳನ್ನು ಆಯ್ಕೆ ಮಾಡಿ, ನಗದು ಅಥವಾ ಕಾರ್ಡ್ ಮೂಲಕ ಹಣ ಪಾವತಿಸಿ ತಕ್ಷಣವೇ ಟಿಕೆಟ್‌ಗಳನ್ನು ಪಡೆಯಬಹುದು. ಆದಾಗ್ಯೂ ಆಫ್​ಲೈನ್ ಟಿಕೆಟ್ ಖರೀದಿ ಮಾಡುವವರು ಕಡ್ಡಾಯವಾಗಿ ತಮ್ಮ ಫೋಟೋ ಐಡಿಯನ್ನು ಹೊಂದಿರಬೇಕಾಗುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *