ಮಕ್ಕಳಿಗೆ AC ಬಳಕೆ: ಜಾಗ್ರತೆ ಅಗತ್ಯ.

ಮಕ್ಕಳಿಗೆ AC ಬಳಕೆ: ಜಾಗ್ರತೆ ಅಗತ್ಯ.

ತಪ್ಪಾಗಿ ಬಳಸಿದರೆ ಆರೋಗ್ಯಕ್ಕೆ ಅಪಾಯ – ತಜ್ಞರ ಎಚ್ಚರಿಕೆ.

ಹವಾಮಾನ ಬದಲಾಗುತ್ತಿರುವುದರಿಂದ ಮನೆಗಳಲ್ಲಿ ಎಸಿ ಬಳಕೆ ಆರಂಭ ಹೆಚ್ಚಾಗಿದೆ. ಆದರೆ ಮನೆಯಲ್ಲಿ ಮಕ್ಕಳಿದ್ದಾಗ, ಎಸಿ ಬಳಸುವಾಗ ವಿಶೇಷ ಜಾಗ್ರತೆ ಅಗತ್ಯವಾಗಿದೆ. ಸರಿಯಾದ ರೀತಿಯಲ್ಲಿ ಬಳಸದೇ ಇದ್ದರೆ, ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ವೈದ್ಯರ ಪ್ರಕಾರ, ಅನೇಕ ಬಾರಿ ಪಾಲಕರು ಅರಿವಿಲ್ಲದೆ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹಾಗಾಗಿ, ಎಸಿ ಬಳಸುವಾಗ ಯಾವ ವಿಷಯಗಳನ್ನು ಗಮನಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಮಕ್ಕಳ ಕೋಣೆಯಲ್ಲಿ ತಾಪಮಾನ ಎಷ್ಟಿರಬೇಕು?

ತಜ್ಞರ ಪ್ರಕಾರ, ಮಗು ಮಲಗುವ ಕೊಠಡಿಯಲ್ಲಿ ಎಸಿ ತಾಪಮಾನ 23ರಿಂದ 27 ಡಿಗ್ರಿ ಸೆಲ್ಸಿಯಸ್ ನಡುವೆ ಇಡಬೇಕು. ಇದಕ್ಕಿಂತ ಕಡಿಮೆ ತಾಪಮಾನ ಇದ್ದಲ್ಲಿ, ಅದು ಯಾವುದೇ ಋತುವಾಗಿರಲಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ತಂಪಾದ ವಾತಾವರಣದಿಂದ ಮಕ್ಕಳಿಗೆ ಕೆಮ್ಮು, ಶೀತ ಅಥವಾ ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲಿಯೂ ಎಸಿ ಗಾಳಿಯು ನೇರವಾಗಿ ಮಗುವಿನ ಮೇಲೆ ಬೀಳದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ನೇರ ಗಾಳಿಯ ಪರಿಣಾಮವಾಗಿ ಮಗುವಿನ ಚರ್ಮದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಎಸಿ ಇರುವ ಕೊಠಡಿಯಲ್ಲಿ ಮಲಗುವ ಮಗುವಿಗೆ ಸರಿಯಾದ ಬಟ್ಟೆಗಳನ್ನು ಹಾಕಬೇಕು. ಬಟ್ಟೆಗಳು ಮಗುವಿನ ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಿರಬೇಕು. ಆದರೆ, ಅಗತ್ಯಕ್ಕಿಂತ ಹೆಚ್ಚು ಬಟ್ಟೆ ಹಾಕಬಾರದು, ಏಕೆಂದರೆ ಇದರಿಂದ ದೇಹದ ತಾಪಮಾನ ಹೆಚ್ಚಾಗಿ ಹೊರಗಿನ ತಣ್ಣನೆಯ ವಾತಾವರಣದೊಂದಿಗೆ ವ್ಯತ್ಯಾಸ ಉಂಟಾಗಿ ಆರೋಗ್ಯ ಸಮಸ್ಯೆಗಳು ಬರಬಹುದು. ಹಾಗಾಗಿ ಹಗುರವಾಗಿರುವ ಮತ್ತು ಆರಾಮದಾಯಕವಾಗಿರುವ ಬಟ್ಟೆಗಳನ್ನು ಆಯ್ಕೆ ಮಾಡುವುದು ಬಹಳ ಉತ್ತಮ.

ಆದರೆ ನೆನೆಪಿರಲಿ, ಎಸಿಯನ್ನು ನಿರಂತರವಾಗಿ ಬಳಸುವುದು ಸರಿಯಲ್ಲ. ಪ್ರತಿ 3ರಿಂದ 4 ಗಂಟೆಗೆ ಒಂದು ಬಾರಿ ಎಸಿಯನ್ನು ಸ್ವಲ್ಪ ಸಮಯ ಆಫ್ ಮಾಡಿ, ಸುಮಾರು ಅರ್ಧ ಗಂಟೆಯ ನಂತರ ಮತ್ತೆ ಆನ್ ಮಾಡುವುದು ಉತ್ತಮ. ಇದರಿಂದ ಕೊಠಡಿಯ ವಾತಾವರಣ ಸಮತೋಲನದಲ್ಲಿರುತ್ತದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಸಿ ಬಳಕೆ ಮಾಡುವಾಗ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಸರಿಯಾದ ತಾಪಮಾನ, ಗಾಳಿಯ ನಿಯಂತ್ರಣ ಮತ್ತು ಬಟ್ಟೆಗಳ ಆಯ್ಕೆ ಮೂಲಕ ಮಕ್ಕಳು ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು.

ಎಸಿ ಯಾವ ರೀತಿಯ ಮಕ್ಕಳಿಗೆ ಒಳ್ಳೆಯದಲ್ಲ?

  • ಅಸ್ತಮಾ ಇರುವವರು
  • ಉಸಿರಾಟ ಸಂಬಂಧಿತ ಸಮಸ್ಯೆಗಳಿರುವವರು
  • ತೀವ್ರ ಚರ್ಮದ ರೋಗ ಅಥವಾ ಅಲರ್ಜಿ ಇರುವವರು
  • ಸೋಂಕಿಗೆ ಒಳಗಾದವರು ಬಳಸುವುದು ಒಳ್ಳೆಯದಲ್ಲ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *