ಕರಾವಳಿ ಮೇಲೆ ದಾಳಿ ಬಂದರೆ ಸಮುದ್ರ ಗಣಿಗಳು ನಿಯೋಜನೆ .

ಕರಾವಳಿ ಮೇಲೆ ದಾಳಿ ಬಂದರೆ ಸಮುದ್ರ ಗಣಿಗಳು ನಿಯೋಜನೆ .

ಟ್ರಂಪ್ ನಮ್ಮ ಕರಾವಳಿ ಮೇಲೆ ದಾಳಿ ನಡೆಸಿದರೆ ಗಲ್ಫ್​ನಲ್ಲಿ ಸಮುದ್ರ ಗಣಿಗಳನ್ನು ಹಾಕುತ್ತೇವೆ.

ಟೆಹ್ರಾನ್ : ಇರಾನ್ ದೇಶದ ಕರಾವಳಿ ಅಥವಾ ದ್ವೀಪಗಳ ಮೇಲೆ ಯಾವುದಾದರೂ ದಾಳಿ ನಡೆದರೆ ಇಡೀ ಪರ್ಷಿಯನ್ ಕೊಲ್ಲಿಯಾದ್ಯಂತ ಸ್ಫೋಟಕ ಸಮುದ್ರ ಗಣಿಗಳನ್ನು ನಿಯೋಜಿಸಬೇಕಾಗುತ್ತದೆ ಎಂದು ಇರಾನ್‌ನ ರಕ್ಷಣಾ ಮಂಡಳಿ ಇಂದು ಎಚ್ಚರಿಸಿದೆ. ಇಂದು ರಾತ್ರಿಯೊಳಗೆ ಇರಾನ್‌ನ ಪ್ರಮುಖ ಜಲಮಾರ್ಗವನ್ನು ಮತ್ತೆ ತೆರೆಯಲು ವಿಫಲವಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಇರಾನ್ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಇರಾನ್‌ ಮೇಲಿನ ನಿರಂತರ ದಾಳಿಗಳಿಂದ ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಇದು ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಐದನೇ ಒಂದು ಭಾಗವನ್ನು ಹೊಂದಿದೆ. ಇದು 1970ರ ದಶಕದ ನಂತರದ ಅತ್ಯಂತ ಕೆಟ್ಟ ತೈಲ ಬಿಕ್ಕಟ್ಟನ್ನು ಉಂಟುಮಾಡಿದೆ.

ಹಾರ್ಮುಜ್ ಜಲಸಂಧಿಯನ್ನು ಎಲ್ಲಾ ಹಡಗುಗಳಿಗೆ ಮತ್ತೆ ತೆರೆಯುವಂತೆ ಟೆಹ್ರಾನ್ ಮೇಲೆ ಒತ್ತಡ ಹೇರಲು, ದೇಶದ ಪ್ರಮುಖ ತೈಲ ರಫ್ತು ಕೇಂದ್ರವಾದ ಇರಾನ್‌ನ ಖಾರ್ಗ್ ದ್ವೀಪವನ್ನು ಆಕ್ರಮಿಸಿಕೊಳ್ಳಲು ಅಥವಾ ದಿಗ್ಬಂಧನ ಮಾಡಲು ಅಮೆರಿಕ ಪ್ಲಾನ್ ಮಾಡುತ್ತಿದೆ. ಅದಕ್ಕೆ ತಿರುಗೇಟು ನೀಡಲು ಇರಾನ್ ಕೂಡ ಸಜ್ಜಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *