330 ಅಡಿ ಎತ್ತರದಿಂದ ಬಿದ್ದರೂ ಸಿಬ್ಬಂದಿ ಪವಾಡದಂತೆ ಬದುಕುಳಿದರು.

330 ಅಡಿ ಎತ್ತರದಿಂದ ಬಿದ್ದರೂ ಸಿಬ್ಬಂದಿ ಪವಾಡದಂತೆ ಬದುಕುಳಿದರು.

ನ್ಯೂಯಾರ್ಕ್ ಲಾಗ್ವಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಭೀಕರ ಘಟನೆ.

ನ್ಯೂಯಾರ್ಕ್​ : ನ್ಯೂಯಾರ್ಕ್​​ನ ಲಾಗ್ವಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಏರ್ ಕೆನಡಾ ವಿಮಾನ ಅಪಘಾತದಲ್ಲಿ 330 ಅಡಿಯಿಂದ ಬಿದ್ದರೂ ವಿಮಾನ ಸಿಬ್ಬಂದಿ ಪವಾಡದಂತೆ ಬದುಕುಳಿದಿದ್ದಾರೆ. ವಿಮಾನದಿಂದ 330 ಅಡಿ ದೂರಕ್ಕೆ ಎಸೆಯಲ್ಪಟ್ಟರು, ಆದರೆ ಅವರು ತಮ್ಮ ಜಂಪ್ ಸೀಟಿನಲ್ಲಿ ಸಿಲುಕಿಕೊಂಡಿದ್ದರು ಎಂದು ವರದಿಯಾಗಿದೆ . ಸೋಲಾಂಜ್ ಟ್ರೆಂಬ್ಲೇ ಅವರ ಒಂದು ಕಾಲಿನಲ್ಲಿ ಮುರಿತಗಳಾಗಿವೆ. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಮಗಳು ಸಾರಾ ಲೆಪಿನ್ ತಿಳಿಸಿದ್ದಾರೆ.

ಅವರು ಕೆಳಗೆ ಬಿದ್ದಾಗಲೂ ಇನ್ನೂ ಅವರು ಸೀಟಿಗೆ ಕಟ್ಟಿಹಾಕಿದ ಸ್ಥಿತಿಯಲ್ಲೇ ಇದ್ದರು.ಇದೆಲ್ಲ ಹೇಗೆ ನಡೆಯಿತು ಎಂಬುದನ್ನು ನಾನು ಇನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಲೆಪಿನ್ ಹೇಳಿದ್ದಾರೆ.

ಮಾಂಟ್ರಿಯಲ್‌ನಿಂದ 72 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ CRJ-900 ವಿಮಾನವು ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದು ಪೈಲಟ್ ಮತ್ತು ಸಹ-ಪೈಲಟ್ ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.

ಜಂಪ್ ಸೀಟ್ ಎನ್ನುವುದು ಕಾಕ್‌ಪಿಟ್ ಅಥವಾ ಕ್ಯಾಬಿನ್‌ನಲ್ಲಿ ಸಿಬ್ಬಂದಿ (ಪೈಲಟ್‌ಗಳು,ಫ್ಲೈಟ್ ಅಟೆಂಡೆಂಟ್‌ಗಳು) ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಕುಳಿತುಕೊಳ್ಳಲು ಬಳಸುವ ವಿಶೇಷ ಮಡಚಬಹುದಾದ ಆಸನವಾಗಿದೆ. ಇದು ಪ್ರಯಾಣಿಕರಿಗಾಗಿ ಅಲ್ಲ, ಹೆಚ್ಚುವರಿ ಸಿಬ್ಬಂದಿ ಅಥವಾ ಅಧಿಕೃತ ತಪಾಸಕರಿಗೆ ಮಾತ್ರ ಮೀಸಲಾಗಿರುತ್ತದೆ. ಇವು ಸುರಕ್ಷತಾ ಹಾರ್ನೆಸ್‌ಗಳನ್ನು ಹೊಂದಿರುತ್ತವೆ ಮತ್ತು ಬಳಕೆಯಲ್ಲಿಲ್ಲದಿದ್ದಾಗ ಮಡಚಿಕೊಳ್ಳುತ್ತದೆ. ಈ ಸೀಟಿನಲ್ಲಿ ಕುಳಿತುಕೊಳ್ಳುವ ನಿರ್ಧಾರವು ವಿಮಾನದ ಕ್ಯಾಪ್ಟನ್ ಅವರ ವಿವೇಚನೆಗೆ ಒಳಪಟ್ಟಿರುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *