IPL ಹಬ್ಬಕ್ಕೆ ಟ್ರಾಫಿಕ್ ಬಿಗಿ ನಿಯಂತ್ರಣ: ಚಿನ್ನಸ್ವಾಮಿ ಸುತ್ತ ರಸ್ತೆ ಬಂದ್

IPL ಹಬ್ಬಕ್ಕೆ ಟ್ರಾಫಿಕ್ ಬಿಗಿ ನಿಯಂತ್ರಣ: ಚಿನ್ನಸ್ವಾಮಿ ಸುತ್ತ ರಸ್ತೆ ಬಂದ್

ಚಿನ್ನಸ್ವಾಮಿ ಸ್ಟೇಡಿಯಂ : ಮಾರ್ಚ್ 28ರಿಂದ ವಿಶೇಷ ನಿಯಮಗಳು

ಬೆಂಗಳೂರು: ಐಪಿಎಲ್ 2026ರ ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯ ನಡೆಯಲಿದೆ. ಈ ಬಾರಿ ಪಂದ್ಯಕ್ಕೆ ಭಾರೀ ಜನ ಸೇರುವ ಸಾಧ್ಯತೆಗಳು ಇದೆ. ಅದರಲ್ಲೂ ನೆಚ್ಚಿನ ಟೀಮ್​​​ ಆರ್​​ಸಿಬಿ ಬೆಂಗಳೂರಿನಲ್ಲಿ ಆಡುತ್ತಿದೆ ಎಂದರೆ ಖಂಡಿತ ಜನ ಬರುವುದು ಖಂಡಿತ. ಅದಕ್ಕಾಗಿ ಜನರನ್ನು ಹಾಗೂ ವಾಹನಗಳನ್ನು ನಿಭಾಯಿಸಲು ಹಲವು ಕ್ರಮಗಳನ್ನು ಸಂಚಾರಿ ಪೊಲೀಸರು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಆಡಳಿಯ ಮಂಡಳಿ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ವಾಹನ ಸಂಚಾರ ಹಾಗೂ ಪಾರ್ಕಿಂಗ್​​​, ಜನರ ಓಡಾಟ ಎಲ್ಲದಕ್ಕೂ ಹೊಸ ರೂಲ್ಸ್​​ ತರಲಾಗಿದೆ. ಪಂದ್ಯಗಳ ದಿನದಂದು ಕ್ರೀಡಾಂಗಣದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.

ಮಾರ್ಚ್ 28 & ಏಪ್ರಿಲ್ 5ರವರೆಗೆ ಕ್ವೀನ್ಸ್ ರಸ್ತೆ, ಬಾಳೆಕುಂದ್ರಿ ರಸ್ತೆ ಮತ್ತು ಸಿಟಿ ಓ ಜಂಕ್ಷನ್ ಸಂಪೂರ್ಣ ಬಂದ್​​ ಮಾಡಲಾಗುವುದು. ಎಂ.ಜಿ. ರಸ್ತೆಯ ಅನಿಲ್ ಕುಂಬಳೆ ವೃತ್ತದಿಂದ ಅನಿಲ್ ಕುಂಬಳೆ ಜಂಕ್ಷನ್ ವರೆಗೆ ನಿಷೇಧವನ್ನು ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಎಂ.ಜಿ. ರಸ್ತೆಯಿಂದ ಕಬ್ಬನ್ ರಸ್ತೆಯವರೆಗೆ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಇನ್ನು ಸ್ಟೇಡಿಯಂ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಕೂಡ ಸೂಚಿಸಲಾಗಿದೆ. ಪ್ರವೇಶ ಗೇಟ್ ನಂಬರ್ E1 ರಿಂದ E3, E18, E19, E22 ಮತ್ತು E11 ರಿಂದ E17 ರ ಮೂಲಕ ಪ್ರವೇಶಿಸಬಹುದು. ಪಂದ್ಯ ಮುಗಿದ ನಂತರ E5, E8, E09, E9A ಗೇಟ್‌ಗಳ ಮೂಲಕ ಮಾತ್ರ ಹೊರಗೆ ಹೋಗಲು ಅವಕಾಶವಿದೆ. ಗೇಟ್ ನಂಬರ್ E10 ಕೇವಲ ಆಟಗಾರರು, ವಿಐಪಿಗಳು ಮತ್ತು ಪ್ರಮುಖ ಅತಿಥಿಗಳಿಗೆ ಮೀಸಲಾಗಿದೆ. ಕ್ಯಾಬ್/ಆಟೋ ಪಿಕ್-ಅಪ್ ಮತ್ತು ಡ್ರಾಪ್ ಪಾಯಿಂಟ್ಸ್ ಬಗ್ಗೆಯೂ ಇಲ್ಲಿ ತಿಳಿಸಿದ್ದಾರೆ. ಬಿಆರ್‌ವಿ (BRV) ಮೈದಾನ ಗೇಟ್ ನಂಬರ್ 6 ತಿಳಿಸಿದ್ದಾರೆ. ಮಾಣಿಕ್ ಷಾ ಪರೇಡ್ ಮೈದಾನ ಗೇಟ್ ನಂಬರ್ 3 ಕೂಡ ಗುರುತು ಮಾಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *