‘Love Mocktail 3’ವಿವಾದ: ಕಥೆ ಕದ್ದ ಆರೋಪಕ್ಕೆ ಕೃಷ್ಣ ತಿರುಗೇಟು.

'Love Mocktail 3'ವಿವಾದ: ಕಥೆ ಕದ್ದ ಆರೋಪಕ್ಕೆ ಕೃಷ್ಣ ತಿರುಗೇಟು.

ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಉತ್ತರ.

ಡಾರ್ಲಿಂಗ್ ಕೃಷ್ಣನಟನೆಯ ‘ಲವ್ ಮಾಕ್ಟೇಲ್ 3’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಕಥೆ ಕದ್ದಿದ್ದು ಎಂಬ ಆರೋಪ ಜೋರಾಗಿದೆ. ರಾಘವೇಂದ್ರ ನಾಯ್ಕ್ ಹೆಸರಿನ ನಿರ್ದೇಶಕ ‘ಇದು ನನ್ನ ಕಥೆ’ ಎಂದು ಆರೋಪಿಸಿದ್ದಾರೆ. ಡಾರ್ಲಿಂಗ್ ಕೃಷ್ಣಗೆ ಕಥೆ ಹೇಳಿದರೂ ಅವರು ಒಪ್ಪಿರಲಿಲ್ಲ ಎಂದಿದ್ದಾರೆ. ಈಗ ‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಅದೇ ಕಥೆ ಬಳಸಿದ್ದು ನೋಡಿ ಅವರಿಗೆ ಶಾಕ್ ಆಗಿದೆಯಂತೆ. ಈ ಆರೋಪಗಳಿಗೆ ಕೃಷ್ಣ ಉತ್ತರಿಸಿದ್ದಾರೆ.

ರಾಘವೇಂದ್ರ ನಾಯ್ಕ್ ಅವರು ಮೊದಲು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡರು. ಈ ವೇಳೆ ಅವರು ಸಿನಿಮಾ ಹೆಸರನ್ನು ಉಲ್ಲೇಖಿಸಿರಲಿಲ್ಲ. ‘ಇತ್ತೀಚೇಗೆ ಹಿಟ್ ಆದ ಚಿತ್ರವೊಂದು’ ಎಂದು ಉಲ್ಲೇಖಿಸಿ ಆರೋಪಿಸಿದರು. ಆ ಬಳಿಕ ಮಾಧ್ಯಮಗಳ ಎದುರು ಬಂದು ಈ ಕುರಿತು ನೇರ ಆರೋಪ ಮಾಡಲು ಆರಂಭಿಸಿದರು. ಈ ವಿಷಯದ ಕುರಿತು ಕೃಷ್ಣ ತಿರುಗೇಟು ನೀಡಿದ್ದಾರೆ. ಈ ಆರೋಪವನ್ನು ಜೋಕ್ ಎಂದು ಕರೆದಿದ್ದಾರೆ.

ಕೃಷ್ಣ ಹಾಗೂ ಮಿಲನಾ, ‘ಅವರ ಆರೋಪವೇ ಒಂದು ಜೋಕ್. ನಿಮ್ಮ ಬಳಿ ಸ್ಕ್ರೀನ್​​ಪ್ಲೇ ಇದೆಯಾ? ಬರೆದಿಟ್ಟುಕೊಂಡ ಡೈಲಾಗ್ ಇದೆಯಾ? ಈ ಪ್ರಶ್ನೆಗಳಿಗೆ ಇಲ್ಲ ಎನ್ನುತ್ತಾರೆ. ಸೆಕೆಂಡ್ ಹಾಫ್ ಕೋರ್ಟ್ ಅಲ್ಲಿ ನಡೆಯುತ್ತದೆ, ಅದಕ್ಕೆ ಹೋಲಿಕೆ ಇದೆ ಎನ್ನುತ್ತಾರೆ. ಕೋರ್ಟ್​ ಪೇಟೆಂಟ್ ತೆಗೆದುಕೊಂಡಿದ್ದೀರಾ’ ಎಂದು ಪ್ರಶ್ನೆ ಮಾಡಿದ್ದಾರೆ.

 ‘ಸೋಶಿಯಲ್ ಮೀಡಿಯಾದಲ್ಲಿ ಒಂದು ಕಡೆ ‘ಕದ್ದು ಮಾಡಿದ ಸಿನಿಮಾ’ ಎಂದು ಕಮೆಂಟ್ ನೋಡಿದೆ. ಇದನ್ನು ನೋಡಿದ್ರೆ ಬೇಸರ ಆಗುತ್ತೆ. ಇದನ್ನು ಕದ್ದು ಮಾಡಿದ್ದಲ್ಲ. ನಾವು ಕುಳಿತು ಮಾಡಿದ್ದು’ ಎಂದರು ಕೃಷ್ಣ.‘ಇದು ಹಾಸ್ಯದ ರೀತಿ ಕಾಣಿಸುತ್ತದೆ’ ಎಂದಿದ್ದಾರೆ ಮಿಲನಾ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *