ಹೈದರಾಬಾದ್ ಮೇಲೆ ಕಣ್ಣು ಹಾಕಿದ ಬಾಲಿವುಡ್, ಹಾಲಿವುಡ್: ಕಾರಣ?
ಭಾರತೀಯ ಚಿತ್ರರಂಗ ಎಂದರೆ ಅದು ಬಾಲಿವುಡ್ ಎಂಬ ಕಾಲವೊಂದಿತ್ತು. ಆದರೆ ಈಗ ಅದು ಬದಲಾಗಿದೆ. ಭಾರತದ ಇತರೆ ಚಿತ್ರರಂಗ ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗಗಳು ಬಾಲಿವುಡ್ ಅನ್ನು ಮೀರಿ ಬೆಳೆದಿವೆ ಮತ್ತು ವಿಶ್ವದಾದ್ಯಂತ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿವೆ. ತೆಲುಗು ಚಿತ್ರರಂಗವಂತೂ ಭಾರತದ ಅತ್ಯಂತ ಯಶಸ್ವಿ ಚಿತ್ರರಂಗ ಎನಿಸಿಕೊಂಡಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದೆ. ಯಾವ ಮಟ್ಟಿಗೆಂದರೆ ಇದೀಗ ಬಾಲಿವುಡ್ನವರು ಸಹ ಹೈದರಾಬಾದ್ ಕಡೆ ಮುಖ ಮಾಡಿದ್ದಾರೆ. ಹಾಲಿವುಡ್ ಸಹ ಅದೇ ದಾರಿ ಹಿಡಿದಿವೆ.
‘ಬಾಹುಬಲಿ’, ‘ಪುಷ್ಪ’, ‘RRR’, ‘ಪುಷ್ಪ 2’ ಮತ್ತು ಕಲ್ಕಿಯಂತಹ ಸಿನಿಮಾಗಳ ಮೂಲಕ ತೆಲುಗು ಚಿತ್ರರಂಗ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸಹ ಭಾರಿ ಜನಪ್ರಿಯತೆ ಗಳಿಸಿಕೊಂಡಿದೆ. ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ತೆಲುಗು ಚಿತ್ರರಂಗಕ್ಕೆ ತಮ್ಮ ರಾಜ್ಯಗಳಲ್ಲಿ ವಿಶೇಷವಾಗಿ ಹೈದರಾಬಾದ್ ನಲ್ಲಿ ಲಭ್ಯವಿರುವ ಸಂಪನ್ಮೂಲದ ಸದುಪಯೋಗ ಪಡೆದುಕೊಂಡು ಇಷ್ಟು ಬೃಹತ್ ಆಗಿ ಬೆಳೆಯಲು ಸಾಧ್ಯವಾಗಿದೆ. ತೆಲುಗು ಚಿತ್ರರಂಗದ ಸೃಜನಶೀಲ ಕೇಂದ್ರವಾಗಿ ಹೈದರಾಬಾದ್ ಕಾರ್ಯನಿರ್ವಹಿಸುತ್ತಿದೆ.
ಇನ್ನು ಹಾಲಿವುಡ್ ಸಹ ಹೈದರಾಬಾದ್ ಮೇಲೆ ಕಣ್ಣಿಟ್ಟಿದೆ. ಕೆಲ ವಾರಗಳ ಹಿಂದಷ್ಟೆ ನೆಟ್ಫ್ಲಿಕ್ಸ್ ತನ್ನ ಕಚೇರಿಯನ್ನು ಹೈದರಾಬಾದ್ನಲ್ಲಿ ತೆರಿದೆ, ಇದು ಕೇವಲ ಕಚೇರಿ ಮಾತ್ರವೇ ಆಗಿರದೆ ಸ್ಟುಡಿಯೋ ಸಹ ಆಗಿದ್ದು, ನೆಟ್ಫ್ಲಿಕ್ಸ್ ಈ ರೀತಿಯ ಕೇವಲ ನಾಲ್ಕು ಸ್ಟುಡಿಯೋಗಳನ್ನು ಮಾತ್ರವೇ ಹೊಂದಿದ್ದು ಅದರಲ್ಲಿ ಒಂದು ಹೈದರಾಬಾದ್ನಲ್ಲಿದೆ. ಒಟ್ಟಾರೆಯಾಗಿ, ಬಾಲಿವುಡ್ ಮತ್ತು ಹಾಲಿವುಡ್ ಹೈದರಾಬಾದ್ನಲ್ಲಿ ಸಿನಿಮಾ ಉದ್ಯಮದ ಅವಕಾಶಗಳನ್ನು ಹುಡುಕಿ ಹೂಡಿಕೆ ಮಾಡುತ್ತಿದೆ. ಇದು ತೆಲುಗು ಚಿತ್ರರಂಗಕ್ಕೆ ಮತ್ತಷ್ಟು ಬೆಂಬಲ ನೀಡುವುದು ಖಾತ್ರಿ.
For More Updates Join our WhatsApp Group :




