ಹಬ್ಬ ಜನಸಂದಣಿ, ಹೂವಿನ ವ್ಯಾಪಾರ ಹಾರಾಟ.
ಬೆಂಗಳೂರು: ಶ್ರೀರಾಮ ನವಮಿ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್. ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿದೆ. ಹಬ್ಬದ ಆಚರಣೆಗಾಗಿ ಜನರು ದೊಡ್ಡ ಸಂಖ್ಯೆಯಲ್ಲಿ ಹೂವುಗಳನ್ನು ಖರೀದಿಸಲು ಆಗಮಿಸುತ್ತಿದ್ದು, ಮಾರುಕಟ್ಟೆಯಲ್ಲಿ ಕಾಲಿಡಲು ಸಹ ಜಾಗವಿಲ್ಲದಷ್ಟು ಜನಸಂದಣಿ ಉಂಟಾಗಿದೆ. ಶ್ರೀರಾಮ ನವಮಿ ಪ್ರಯುಕ್ತ ಕೆ.ಆರ್. ಮಾರುಕಟ್ಟೆ ಸಂಪೂರ್ಣ ಜನಜಂಗುಳಿಯಿಂದ ಕೂಡಿದ್ದು, ಹೂವಿನ ವ್ಯಾಪಾರ ಭರಾಟೆ ಜೋರಾಗಿದೆ.
ನಗರದ ಜನರು ಹಬ್ಬಕ್ಕೆ ಬೇಕಾದ ಹೂವುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಈ ವರ್ಷ ಶ್ರೀರಾಮ ನವಮಿಗಾಗಿ ಹೂವಿನ ಬೇಡಿಕೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ವಿಪರೀತ ಜನಸಂದಣಿಗೆ ಕಾರಣವಾಗಿದೆ.
For More Updates Join our WhatsApp Group :




