500ಕ್ಕೂ ಹೆಚ್ಚು ಸಿಬ್ಬಂದಿ, ಫೈರ್ ಎಕ್ಸಿಟ್ ಹಾಗೂ ಗೇಟು ಪರಿಶೀಲನೆ.
ಬೆಂಗಳೂರು : ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳು ಬಿರುಸಿನಿಂದ ನಡೆದಿವೆ. 500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯಿಂದ ಪ್ರಮುಖ ಮಾಕ್ ಡ್ರಿಲ್ ನಡೆಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ಪೊಲೀಸ್ ಇಲಾಖೆಯು ಈ ಭದ್ರತಾ ಸಿದ್ಧತೆಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಜೂನ್ 4ರಂದು ನಡೆದ ಕಾಲ್ತುಳಿತ ಪ್ರಕರಣದಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಈ ತಾಲೀಮಿನ ಮುಖ್ಯ ಉದ್ದೇಶವಾಗಿದೆ. ಸಿವಿಲ್ ಇಲಾಖೆಯು ಸಹ ಈ ಮಾಕ್ ಡ್ರಿಲ್ನಲ್ಲಿ ಪಾಲ್ಗೊಂಡಿದ್ದು, ಪ್ರಮುಖವಾಗಿ ತರಬೇತಿಯನ್ನು ನೀಡಲಾಗಿದೆ. ಫೈರ್ ಎಕ್ಸಿಟ್ ಬಾಗಿಲುಗಳ ಪರಿಶೀಲನೆ, ಗೇಟ್ಗಳ ಅಗಲೀಕರಣದಂತಹ ಎಲ್ಲಾ ಅಗತ್ಯ ಕೆಲಸಗಳು ಸಂಪೂರ್ಣವಾಗಿ ಮುಗಿದಿವೆ ಎನ್ನಲಾಗಿದೆ.
For More Updates Join our WhatsApp Group :




