ನಿಮ್ಮ Tooth ಬೇಗ ವೃದ್ಧವಾಗುತ್ತಿವೆಯೇ?

ನಿಮ್ಮ Tooth ಬೇಗ ವೃದ್ಧವಾಗುತ್ತಿವೆಯೇ?

ಡೆಂಟಲ್ ಏಜಿಂಗ್ ಲಕ್ಷಣಗಳು, ಕಾರಣಗಳು ತಿಳಿದುಕೊಳ್ಳಿ.

ದೇಹದ ಫಿಟ್‌ನೆಸ್ ಕಾಪಾಡಲು ನಾವು ಪ್ರತಿದಿನ ಸಾವಿರಾರು ಹೆಜ್ಜೆ ನಡೆಯುತ್ತೇವೆ, ಕ್ಯಾಲೋರಿಗಳನ್ನು ಲೆಕ್ಕ ಹಾಕುತ್ತೇವೆ ಮತ್ತು ನಿದ್ದೆಯನ್ನು ಟ್ರ್ಯಾಕ್ ಮಾಡುತ್ತೇವೆ. ಆದರೆ, ನಮ್ಮ ಹಲ್ಲುಗಳ ಆರೋಗ್ಯ ಮತ್ತು ವಯಸ್ಸಿನ ಬಗ್ಗೆ ನಾವು ಎಷ್ಟು ಗಮನ ಹರಿಸುತ್ತೇವೆ? ಅನೇಕ ಬಾರಿ, ನಮ್ಮ ಹಲ್ಲುಗಳ ವಯಸ್ಸು ನಮ್ಮ ದೇಹದ ವಯಸ್ಸಿಗಿಂತ ಹೆಚ್ಚಾಗಿರುತ್ತದೆ. ಇದನ್ನು ಡೆಂಟಲ್ ಏಜಿಂಗ್ ಎಂದು ಕರೆಯಲಾಗುತ್ತದೆ.

ಡೆಂಟಲ್ ಏಜಿಂಗ್ ಎನ್ನುವುದು ಹಲ್ಲುಗಳು ತಮ್ಮ ಜೀವಿತಾವಧಿಗಿಂತ ವೇಗವಾಗಿ ಸವೆಯುವ ಅಥವಾ ದುರ್ಬಲಗೊಳ್ಳುವ ಪ್ರಕ್ರಿಯೆಯಾಗಿದೆ. ಹಲ್ಲಿನ ಸೂಕ್ಷ್ಮತೆ, ಹಲ್ಲಿನ ಸವೆತ, ದಂತಕವಚದ ಸಮಸ್ಯೆಗಳು, ವಸಡುಗಳ ಸಮಸ್ಯೆಗಳು ಮತ್ತು ಹಲ್ಲು ಹಳದಿಯಾಗುವುದು ಡೆಂಟಲ್ ಏಜಿಂಗ್‌ನ ಕೆಲವು ಪ್ರಮುಖ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದರೆ, ನಿಮ್ಮ ಹಲ್ಲುಗಳಿಗೆ ವಿಶೇಷ ಕಾಳಜಿ ಅಗತ್ಯವಿದೆ ಎಂದು ಅರ್ಥ. ನಿಮ್ಮ ಹಲ್ಲುಗಳ ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಮುಖ್ಯ. ಡೆಂಟಲ್ ಏಜಿಂಗ್ ಲಕ್ಷಣಗಳನ್ನು ಗುರುತಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಿಂದ ನಿಮ್ಮ ಹಲ್ಲುಗಳನ್ನು ನಿಮಗಿಂತ ಹೆಚ್ಚು ವಯಸ್ಸಾಗಲು ಬಿಡಬಾರದು. ಡೆಂಟಲ್ ಏಜಿಂಗ್ ಅನ್ನು ತಡೆಗಟ್ಟಲು ಮತ್ತು ನಿಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊದಲ ಹೆಜ್ಜೆಯನ್ನು ಇರಿಸಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *