ಎಂಎಲ್‌ಆರ್ ಕನ್ವೆಂಷನ್ ಸೆಂಟರ್‌ನಲ್ಲಿ ಕಾರ್ಯಕ್ರಮ
ಬೆಂಗಳೂರು :ಪೂರ್ವ ನಗರ ಪಾಲಿಕೆ 2026-27ನೇ ಸಾಲಿನ ಆಯವ್ಯಯ ಅಂದಾಜು ಪ್ರಸ್ತುತಿ ಪಡಿಸುವಿಕೆ ಕಾರ್ಯಕ್ರಮ.ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ ನಗರ ಪಾಲಿಕೆಯಾಗಿ ರಚನೆಯಾದ ನಂತರ ಮಾನ್ಯ *ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್* ರವರ ಮಾರ್ಗದರ್ಶನ ಹಾಗೂ ಬೆಂಗಳೂರು ಪೂರ್ವ ನಗರ ಪಾಲಿಕೆಯ ಗರುಡಾಚಾರ್ ಪಾಳ್ಯದ ಎಂ.ಎಲ್.ಆರ್ ಕನ್ವೆಂಷನ್ ಸೆಂಟರ್ ನಲ್ಲಿ ಮಾನ್ಯ *ಆಡಳಿತಗಾರರಾದ ಶ್ರೀ ಮಹೇಶ್ವರ್ ರಾವ್* ರವರ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಚೊಚ್ಚಲ ಆಯವ್ಯಯವನ್ನು *ಆಯುಕ್ತರಾದ ಡಿ.ಎಸ್.ರಮೇಶ್* ರವರು ಪ್ರಸ್ತುತಿ ಪಡಿಸಿದರು.
2026-27ನೇ ವರ್ಷದಲ್ಲಿ ಪೂರ್ವ ನಗರ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 3890 ಕೋಟಿ ರೂ.ಗಳಷ್ಟು ಇದ್ದು, ಒಟ್ಟು ವೆಚ್ಚ 3889.98 ಕೋಟಿ ರೂ. ಇರಲಿದೆ.
ಈ ವೇಳೆ ಅಭಿವೃದ್ಧಿ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಕಂದಾಯ ಅಪರ ಆಯುಕ್ತರಾದ ಪ್ರಜ್ಞಾ ಅಮ್ಮಂಬಳ, ಜಂಟಿ ಆಯುಕ್ತರಾದ ದಾಕ್ಷಾಯಿಣಿ, ಸುಧಾ, ಮುಖ್ಯ ಅಭಿಯಂತರರಾದ ಲೋಕೇಶ್, ಕೃಷ್ಣಮೂರ್ತಿ, ಉಪ ಆಯುಕ್ತರುಗಳಾದ ಶಶಿ ಕುಮಾರ್, ಮುರಳಿಧರ್, ಉಪ ನಿಯಂತ್ರಕರು ಹಣಕಾಸು ಎ.ಜಿ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ತಿತರಿದ್ದರು.
For More Updates Join our WhatsApp Group :




