IPL 2026ರಲ್ಲಿ ಹೊಸ ‘Body Control’ನಿಯಮ ಜಾರಿ.

IPL 2026ರಲ್ಲಿ ಹೊಸ ‘Body Control’ನಿಯಮ ಜಾರಿ.

IPL 2026: ಐಪಿಎಲ್​ನಲ್ಲಿ ‘ಬಾಡಿ ಕಂಟ್ರೋಲ್’ ನಿಯಮ ಜಾರಿ.

ಇಂಡಿಯನ್ ಪ್ರೀಮಿಯರ್ ಕಂಪನಿ ಸೀಸನ್-19ರ ಮೊದಲ ಪಂದ್ಯದ ಮೂಲಕ ‘ಬಾಡಿ ಕಂಟ್ರೋಲ್’ ನಿಯಮವನ್ನು ಪರಿಚಯಿಸಲಾಗುತ್ತಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ RCB ಮತ್ತು SRH ನಡುವಣ ಪಂದ್ಯದ ಮೂಲಕ ಈ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಈ ನಿಯಮವು ಫೀಲ್ಡರ್​ಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಐಪಿಎಲ್ ಕ್ಯಾಚ್ ನಿಯಮಗಳು:

  • ಸಂಪೂರ್ಣ ನಿಯಂತ್ರಣ: ಐಪಿಎಲ್ ನಿಯಮ 33.3ರ ಪ್ರಕಾರ, ಫೀಲ್ಡರ್ ಚೆಂಡನ್ನು ಹಿಡಿದ ನಂತರ ತನ್ನ ದೇಹದ ಚಲನೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವವರೆಗೆ ಕ್ಯಾಚ್ ಪೂರ್ಣಗೊಳ್ಳುವುದಿಲ್ಲ.
  • ಸಂಭ್ರಮಾಚರಣೆ ಮತ್ತು ಸ್ಥಿರತೆ: ಫೀಲ್ಡರ್ ಕ್ಯಾಚ್ ಹಿಡಿದ ತಕ್ಷಣ ಸಂಭ್ರಮಿಸಲು ಶುರುಮಾಡಿ ಆ ಸಂದರ್ಭದಲ್ಲಿ ಚೆಂಡು ಕೈಜಾರಿದರೆ ಅಥವಾ ಅವರು ಸಮತೋಲನ ತಪ್ಪಿ ಬೌಂಡರಿ ಲೈನ್ ಮುಟ್ಟಿದರೆ ಅದನ್ನು ‘ನಾಟ್ ಔಟ್’ ಎಂದು ಪರಿಗಣಿಸಲಾಗುತ್ತದೆ.
  • ದೇಹದ ನಿಯಂತ್ರಣ: ಕ್ಯಾಚ್ ಹಿಡಿದ ಬಳಿಕ ದೇಹದ ಚಲನೆಯು ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಸಂಭ್ರಮಿಸಬೇಕು. ಕ್ಯಾಚ್ ಹಿಡಿದ ತಕ್ಷಣವೇ ಚೆಂಡನ್ನು ಎಸೆಯುವಂತಿಲ್ಲ ಎಂದು ತಿಳಿಸಲಾಗಿದೆ. ಒಂದು ವೇಳೆ ಸಂಭ್ರಮದ ವೇಳೆ ಚೆಂಡು ಕೈ ಜಾರಿದರೆ ಅದನ್ನು ಕ್ಯಾಚ್ ಎಂದು ಪರಿಗಣಿಸಲಾಗುವುದಿಲ್ಲ. ಇದನ್ನೇ ಕ್ರಿಕೆಟ್​ನಲ್ಲಿ ಫೀಲ್ಡರ್​ಗಳ ಬಾಡಿ ಕಂಟ್ರೋಲ್ ಎಂದು ಕರೆಯಲಾಗುತ್ತದೆ.
  • ಬೌಂಡರಿ ಲೈನ್ ನಿಯಮ: ಫೀಲ್ಡರ್ ಬೌಂಡರಿ ಲೈನ್ ಒಳಗಿನಿಂದಲೇ ಜಿಗಿದು ಚೆಂಡನ್ನು ಹಿಡಿಯಬೇಕು. ಗಾಳಿಯಲ್ಲಿರುವಾಗ ಚೆಂಡನ್ನು ಒಳಕ್ಕೆ ತಳ್ಳಿ ನಂತರ ಮೈದಾನದ ಒಳಗೆ ಬಂದು ಕ್ಯಾಚ್ ಪೂರ್ಣಗೊಳಿಸಬೇಕು.
  • ರಿಲೇ ಕ್ಯಾಚ್: ಒಬ್ಬ ಫೀಲ್ಡರ್ ಬೌಂಡರಿ ಹೊರಗಿನಿಂದ ಪದೇ ಪದೇ ಜಿಗಿಯುತ್ತಾ (Bunny Hop) ಚೆಂಡನ್ನು ಒಳಕ್ಕೆ ತಳ್ಳುವುದು ಈಗ ಅಮಾನ್ಯ ಎಂದು ಪರಿಗಣಿಸಲಾಗುತ್ತದೆ.
  • ಒಂದೇ ಅವಕಾಶಫೀಲ್ಡರ್ ಬೌಂಡರಿ ಲೈನ್ ಒಳಗಿಂದ ಜಿಗಿದು ಒಮ್ಮೆ ಚೆಂಡನ್ನು ಒಳಗೆ ತಳ್ಳಲು ಪ್ರಯತ್ನಿಸಿ, ಬೌಂಡರಿ ದಾಟಿದ ಬಳಿಕ ಹೊರಗಿನಿಂದ ಜಿಗಿದು ಮತ್ತೆ ಹೊರ ತಳ್ಳಲು ಅವಕಾಶವಿಲ್ಲ. ಅಂದರೆ ಬೌಂಡರಿ ಲೈನ್​ ಒಳಗೆ ನಿಂತು ಗಾಳಿಯಲ್ಲಿ ಹಾರಿ ಚೆಂಡನ್ನು ಮತ್ತೊಮ್ಮೆ ಹೊರಹಾಕಿದರೆ ಅದನ್ನು ಸಿಕ್ಸ್ ಎಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.

ಈ ನಿಯಮಗಳು ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದ ಮೂಲಕವೇ ಜಾರಿಗೆ ಬರಲಿದೆ ಎಂದು ಐಪಿಎಲ್ ಗರ್ವನರ್ ಕೌನ್ಸಿಲ್ ತಿಳಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *