ನೌಕಾಪಡೆ ಅಧಿಕಾರಿ ಪ್ರೇಯಸಿಯನ್ನು ಕೊಂದ ನಂತರ ದೇಹವನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ.
ವಿಶಾಖಪಟ್ಟಣಂ : ನೌಕಾಪಡೆಯ ಸಿಬ್ಬಂದಿ ಪ್ರೇಯಸಿಯನ್ನು ಮನೆಯಲ್ಲಿ ಕೊಲೆಮಾಡಿ ದೇಹವನ್ನು ಕತ್ತರಿಸಿ ಫ್ರಿಡ್ಜ್ನಲ್ಲಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ. ಚಿಂತಾದ ರವೀಂದ್ರ ಎಂಬಾತ ಪತ್ನಿ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಪ್ರೇಯಸಿಯನ್ನು ಮನೆಗೆ ಕರೆಸಿಕೊಂಡು ಆಕೆಯನ್ನು ಕೊಲೆ ಮಾಡಿದ್ದಾನೆ. ಮೌನಿಕಾ ಮತ್ತು ರವೀಂದ್ರ ತಮ್ಮ ಮನೆಯಲ್ಲಿ ಸ್ವಲ್ಪ ಸಮಯ ಕಳೆದಿದ್ದರು. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಕೋಪದಲ್ಲಿ ರವೀಂದ್ರ ಆಕೆಯನ್ನು ಕೊಂಡು ತುಂಡು ತುಂಡಾಗಿ ಕತ್ತರಿಸಿದ್ದಾನೆ.
ಭಾರತೀಯ ನೌಕಾಪಡೆಯ ಹಡಗು (ಐಎನ್‌ಎಸ್) ಡೇಗಾದಲ್ಲಿ ನಿಯೋಜಿತರಾಗಿದ್ದ 35 ವರ್ಷದ ನೌಕಾಪಡೆಯ ಅಧಿಕಾರಿ ರವೀಂದ್ರ,2021 ರಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ 29 ವರ್ಷದ ಮೌನಿಕಾ ಜೊತೆ ಡೇಟಿಂಗ್ ಆರಂಭಿಸಿದ್ದ. ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿದ್ದರು.ಕೆಲವು ವಾರಗಳ ಹಿಂದೆ, ರವೀಂದ್ರನ ಹೆಂಡತಿ ವಿಜಯನಗರದಲ್ಲಿರುವ ತನ್ನ ಹೆತ್ತವರ ಮನೆಗೆ ಹೋಗಿದ್ದಳು. ಭಾನುವಾರ ಮಧ್ಯಾಹ್ನ ತನ್ನ ಪ್ರಿಯಕರ ರವೀಂದ್ರ ಜೊತೆ ಸಮಯ ಕಳೆಯಲು ಇದೇ ಸೂಕ್ತವಾದ ಸಂದರ್ಭವೆಂದು ಮೌನಿಕಾಳನ್ನು ಕರೆಸಿಕೊಳ್ಳಬೇಕೆಂದು ರವೀಂದ್ರ ನಿರ್ಧರಿಸಿದ್ದ.
ಸಂಜೆಯ ಹೊತ್ತಿಗೆ ಇಬ್ಬರ ನಡುವೆ ಜಗಳ ಆರಂಭವಾಯಿತು, ರವೀಂದ್ರ ಮೌನಿಕಾಳನ್ನು ಇರಿದು ಕೊಂದಿದ್ದಾನೆ, ಅವನು ದೇಹವನ್ನು ತುಂಡುಗಳಾಗಿ ಕತ್ತರಿಸಿ, ಕೆಲವು ಭಾಗಗಳನ್ನು ಚೀಲದಲ್ಲಿ ತುಂಬಿಸಿ, ಅವುಗಳನ್ನು ವಿಲೇವಾರಿ ಮಾಡಿದ್ದಾನೆ, ಕೆಲವು ಭಾಗಗಳನ್ನು ಫ್ರಿಡ್ಜ್ನಲ್ಲಿಟ್ಟಿದ್ದ.
ಪೊಲೀಸರು ಅಪರಾಧ ಸ್ಥಳಕ್ಕೆ ಧಾವಿಸಿದಾಗ, ರೆಫ್ರಿಜರೇಟರ್ ಮತ್ತು ಮನೆಯೊಳಗೆ ಕತ್ತರಿಸಿದ ದೇಹದ ಭಾಗಗಳು ಕಂಡುಬಂದವು, ಮೌನಿಕಾಳ ತಲೆ ಕಾಣೆಯಾಗಿತ್ತು. ರವೀಂದ್ರ ಅದನ್ನು ಬೇರೆ ಸ್ಥಳದಲ್ಲಿ ವಿಲೇವಾರಿ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಾಣೆಯಾದ ದೇಹದ ಭಾಗಗಳನ್ನು ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
For More Updates Join our WhatsApp Group :




