ಬಿಸಿಲು-ಮಳೆ ಮಿಶ್ರ ಹವಾಮಾನ: ಮುಂದಿನ 7 ದಿನ ಹೇಗಿರಲಿದೆ?

ಬಿಸಿಲು-ಮಳೆ ಮಿಶ್ರ ಹವಾಮಾನ: ಮುಂದಿನ 7 ದಿನ ಹೇಗಿರಲಿದೆ?

ಮುಂದಿನ ಒಂದು ವಾರ ಕರ್ನಾಟಕದ ಹವಾಮಾನ ಹೇಗಿರಲಿದೆ?

ಬೆಂಗಳೂರು: ಮುಂದಿನ ಒಂದು ವಾರ ರಾಜ್ಯದಾದ್ಯಂತ ಮಿಶ್ರ ಹವಾಮಾನ ಇರಲಿದ್ದು, ಸುಡು ಬಿಸಿಲಿನ ನಡುವೆಯೇ ವರುಣನ ಸಿಂಚನವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿವೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಗರಿಷ್ಠ ತಾಪಮಾನದಲ್ಲಿ 2-3°C ಏರಿಕೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚಿರಲಿದೆ. ಬೆಂಗಳೂರಿನ ಮುಂದಿನ 7 ದಿನ ಬೇಸಿಗೆಯ ತಾಪ ಏರುತ್ತಿದ್ದು, ಬಿಸಿಲಿನ ಬೇಗೆಯ ನಡುವೆಯೇ ಅಲ್ಲಲ್ಲಿ ಮೋಡ ಕವಿದ ವಾತಾವರಣವಿರಲಿದೆ.

ಮಧ್ಯಾಹ್ನದ ನಂತರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಬಿರುಗಾಳಿ (ಗಂಟೆಗೆ 30-40 ಕಿ.ಮೀ ವೇಗ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಮಂಗಳೂರು ಹಾಗೂ ಉಡುಪಿಯಲ್ಲಿ ಹವಾಮಾನದ ಸ್ಥಿತಿ ತೇವಾಂಶಭರಿತ ಉಷ್ಣಾಂಶ ಹಾಗೂ ಸೆಖೆ ಹೆಚ್ಚಿರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣವಿರಲಿದೆ. ಹುಬ್ಬಳ್ಳಿ ಒಣ ಹವೆ ಇರಲಿದ್ದು, ಬಿಸಿಲು ತೀವ್ರವಾಗಲಿದ್ದು, ಮಧ್ಯಾಹ್ನದ ವೇಳೆ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಚಿಕ್ಕಮಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಏಪ್ರಿಲ್ 2ರ ನಂತರ ಗುಡುಗು ಸಹಿತ ಹಗುರ ಮಳೆಯಾಗುವ ಮುನ್ಸೂಚನೆ ಇದೆ.

ವಲಯನಿರೀಕ್ಷಿತ ಹವಾಮಾನಜಿಲ್ಲೆಗಳು
ದಕ್ಷಿಣ ಒಳನಾಡುಹಗುರ ಮಳೆ / ಗುಡುಗುಬೆಂಗಳೂರು, ಮೈಸೂರು, ಕೊಡಗು, ಮಂಡ್ಯ, ಹಾಸನ
ಉತ್ತರ ಒಳನಾಡುಅತಿಯಾದ ಬಿಸಿಲು / ಒಣ ಹವೆಕಲಬುರಗಿ, ವಿಜಯಪುರ, ಬಾಗಲಕೋಟೆ, ರಾಯಚೂರು
ಕರಾವಳಿಉಷ್ಣಾಂಶ ಮತ್ತು ತೇವಾಂಶ ಹೆಚ್ಚಳಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ
ಮಲೆನಾಡುಸಾಧಾರಣ ಮಳೆ ಸಾಧ್ಯತೆಶಿವಮೊಗ್ಗ, ಚಿಕ್ಕಮಗಳೂರು

ಬೆಳಗಾವಿಯಲ್ಲಿ ಭಾಗಶಃ ಮೋಡ ಹಾಗೂ ಒಣ ಹವೆ ಇರಲಿದೆ. ಬೆಳಗಾವಿಯ ಕೆಲವು ಭಾಗಗಳಲ್ಲಿ ಏಪ್ರಿಲ್ 4ರ ಸುಮಾರಿಗೆ ಸಿಡಿಲು ಸಹಿತ ಮಳೆಯಾಗಬಹುದು. ಹಾಸನದಲ್ಲಿ ಹಗುರ ಮಳೆ ಬರುವ ಸಾಧ್ಯತೆ ಇದೆ. ಸಂಜೆ ಅಥವಾ ರಾತ್ರಿ ಅವಧಿಯಲ್ಲಿ ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕಲಬುರಗಿ ತೀವ್ರ ಬಿಸಿಲು ಹಾಗೂ ಜಿಲ್ಲೆಯಲ್ಲಿ ತಾಪಮಾನ 41 ಡಿಗ್ರಿ ದಾಟುವ ಸಾಧ್ಯತೆವಿದೆ. ಹಾಸನ, ಚಿಕ್ಕಮಗಳೂರು ಮತ್ತು ಬೆಳಗಾವಿ ಭಾಗದಲ್ಲಿ ಗುಡುಗು ಕೇಳಿಸಿದಾಗ ವಿದ್ಯುತ್ ಉಪಕರಣಗಳಿಂದ ದೂರವಿರಿ ಮತ್ತು ಮರದ ಕೆಳಗೆ ಆಶ್ರಯ ಪಡೆಯಬೇಡಿ ಎಂದು ಹೇಳಲಾಗಿದೆ.

ಕಲಬುರಗಿ ಮತ್ತು ಹುಬ್ಬಳ್ಳಿ ಭಾಗದ ಜನರು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಜಾಗ್ರತೆ ವಹಿಸಿ. ಮಲೆನಾಡು ಮತ್ತು ದಕ್ಷಿಣ ಒಳನಾಡಿನ ರೈತರು ಕಟಾವು ಮಾಡಿದ ಬೆಳೆಗಳನ್ನು ಮಳೆಯಿಂದ ರಕ್ಷಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *