ಶಾಸಕರಿಗೆ 1+1 ಜೊತೆಗೆ ಮತ್ತೊಂದು IPL ಟಿಕೆಟ್ ನೀಡಲು ತೀರ್ಮಾನ

ಶಾಸಕರಿಗೆ 1+1 ಜೊತೆಗೆ ಮತ್ತೊಂದು IPL ಟಿಕೆಟ್ ನೀಡಲು ತೀರ್ಮಾನ

ಶಾಸಕರಿಗೆ ಹೆಚ್ಚುವರಿ IPL ಟಿಕೆಟ್: ಮಹತ್ವದ ಸಭೆಯಲ್ಲಿ ತೀರ್ಮಾನ

ಬೆಂಗಳೂರು:  IPLಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರಾಜ್ಯ ಕ್ರಿಕೆಟ್ ಅಸೋಸಿಯೇಷನ್ DNA ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮ್ಯಾನೇಜ್ಮೆಂಟ್ ಪದಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಓರ್ವ ಶಾಸಕನಿಗೆ ಮೂರು ಐಪಿಎಲ್ ಟಿಕೆಟ್ ನೀಡಲು ತೀರ್ಮಾನವಾಗಿದೆ. ಈ ಮೊದಲು 1 ಪ್ಲಸ್ 1 ಒಟ್ಟು ಎರಡು ಉಚಿತ ಟಿಕೆಟ್ ನೀಡಲು ತೀರ್ಮಾನಿಸಲಾಗಿತ್ತು. ಆದ್ರೆ, ಇಂದಿನ ಸಭೆಯಲ್ಲಿ ಇನ್ನೊಂದು ಟಿಕೆಟ್ ಹೆಚ್ಚಳ ಮಾಡಲಾಗಿದ್ದು, ಅಂತಿಮವಾಗಿ ಒಬ್ಬ ಎಂಎಲ್​​ಎಗೆ ಒಟ್ಟು 3 ಟಿಕೆಟ್​​ಗಳನ್ನು ನೀಡಲು ಒಪ್ಪಂದವಾಗಿದೆ.

ಪ್ರತಿ ಮ್ಯಾಚ್​​ಗೆ 3 ಟಿಕೆಟ್ ನೀಡಲು ತೀರ್ಮಾನ

IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಇಂದು (ಮಾರ್ಚ್ 30) ಬೆಂಗಳೂರಿನ ಸದಾಶಿವನಗರದ ಡಿಸಿಎಂ ಡಿಕೆ ಶಿವಕುಮಾರ್​​ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಆರ್​ಸಿಬಿ ಪದಾಧಿಕಾರಿಗಳು ಭಾಗಿಯಾಗಿದ್ದು, ಐಪಿಎಲ್ ಟಿಕೆಟ್ ಹಾಗೂ ಸ್ಟೇಡಿಯಂ ಬಗ್ಗೆ ಮಹತ್ವದ ಚರ್ಚೆಯಾಗಿದ್ದು, ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯದ ಮುರು ಟಿಕೆಟ್ ಹಾಗೂ ಇಂಟರ್​ ನ್ಯಾಷಲ್ ಮ್ಯಾಚ್​​ಗೆ ಎರಡು ಟಿಕೆಟ್ ನೀಡುವ ತೀರ್ಮಾನವಾಗಿದೆ. ಈ ಹಿಂದಿನ ಸಭೆಯಲ್ಲಿ ಎರಡು ಟಿಕೆಟ್ ನೀಡುವ ಬಗ್ಗೆ ತೀರ್ಮಾನವಾಗಿತ್ತು. ಆದ್ರೆ, ಇದೀಗ ಎರಡರ ಜೊತೆಗೆ ಮತ್ತೊಂದು ಎಕ್ಸ್​ಟ್ರಾ ಟಿಕಟ್ ನೀಡಲು ನಿರ್ಧರಿಸಲಾಗಿದೆ.

ಡಿಕೆಶಿಗೆ ಆರ್​ಸಿಬಿ ಜರ್ಸಿ ಗಿಫ್ಟ್

ಕೆಎಸ್​​ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಜೊತೆ ಆರ್​​ಸಿಬಿ ತಂಡದ ಸಿಇಒ ಸಹ ಡಿಕೆ ಶಿವಕುಮಾರ್ ಸಭೆಯಲ್ಲಿ ಹಾಜರಾಗಿದ್ದು, ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿಇಒ, ಡಿಕೆ ಶಿವಕುಮಾರ್​​​ಗೆ ಆರ್​​ಸಿಬಿ ಜರ್ಸಿ ಗಿಫ್ಟ್ ನೀಡಿದರು. ಇನ್ನು ಡಿಕೆ ಶಿವಕುಮಾರ್ ಜರ್ಸಿಯನ್ನು ಧರಿಸಿ ಫೋಟೋಗೆ ಪೋಸ್ ನೀಡಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *